Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಡಿಕೆಶಿಗೆ ಒಲಿದು ಬಂದ ಸಿಎಂ ಪಟ್ಟ: ಧಾರವಾಡ ದಲ್ಲಿ  ವಿಜಯೋತ್ಸವ ಸಂಭ್ರಮ ಆಚರಣೆ

ಧಾರವಾಡ: ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಹಿನ್ನೆಲೆ ಧಾರವಾಡದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು.
ಧಾರವಾಡದ ವಿವೇಕಾನಂದ ವೃತ್ತದಲ್ಲಿ ಡಿಕೆಶಿ ಅವರ ಭಾವಚಿತ್ರ ಹಿಡಿದು ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.  ಡಿ.ಕೆ.ಶಿವಕುಮಾರ್ ಅವರು ಒಳ್ಳೆಯ ಆಡಳಿತಗಾರರಾಗಿದ್ದು, ಅವರ ಅವಧಿಯಲ್ಲಿ ರಾಜ್ಯ ಅಭಿವೃದ್ಧಿ ಪಥದತ್ತ ಸಾಗಲಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಹರ್ಷ ವ್ಯಕ್ತಪಡಿಸಿದರು.
ಕಾಂಗ್ರೆಸ್ ಮುಖಂಡರಾದ ರಾಬರ್ಟ್ ದದ್ದಾಪುರಿ ನೇತೃತ್ವದಲ್ಲಿ ನಡೆದ ಈ ಸಂಭ್ರಮಾಚರಣೆಯಲ್ಲಿ ಕಾಂಗ್ರೆಸ್‌ನ ಅನೇಕ ಮುಖಂಡರು ಪಾಲ್ಗೊಂಡಿದ್ದರು.


 ಧಾರವಾಡ ನಗರದಲ್ಲಿ ಕಾಂಗ್ರೇಸ್ ಕಾರ್ಯಕರ್ತರ ಸಂಭ್ರಮ ಎಲ್ಲೆ ಮೀರಿತ್ತು ಕೆಪಿಸಿಸಿ ಅಧ್ಯಕ್ಷ ರಾದ ಸನ್ಮಾನ್ಯ ಶ್ರೀ ಡಿ ಕೆ ಶಿವಕುಮಾರರವರು ಬೆಂಗಳೂರಿನ ವಿಧಾನಸೌಧದ ಸಿಎಲ್‌ಪಿ ಲೀಡರ ಆಗಿ ಆಯ್ಕೆಯಾಗುತ್ತಿದ್ದಂತೆ ಧಾರವಾಡ ನಗರದಲ್ಲಿ ರಾಬರ್ಟ ದದ್ದಾಪುರಿ ಪ್ರಧಾನ ಕಾರ್ಯದರ್ಶಿಗಳು ಕೆಪಿಸಿಸಿ ಅವರ ನೇತೃತ್ವದಲ್ಲಿ ಸಂಭ್ರಮಾಚರಣೆಯು ಮುಗಿಲು ಮುಟ್ಟಿತು. ಪಟಾಕಿ ಸಿಡಿಸಿ, ಸಾರ್ವಜನಿಕರಿಗೆ ಸಿಹಿ ಹಂಚಲಾಯಿತು.

ರಾಬರ್ಟ ದದ್ದಾಪುರಿಯವರು ಮಾತನಾಡಿ ಡಿ.ಕೆ. ಶಿವಕುಮಾರವರು ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವುದರಿಂದ ಸಮಸ್ತ ಕಾರ್ಯಕರ್ತರಿಗೆ ಆತ್ಮವಿಶ್ವಾಸ ಮೂಡಿಸಿದೆ. ಕಾರ್ಯಕರ್ತರೇ ಪಕ್ಷದ ಬುನಾದಿ ಎಂದು ಹೇಳುತ್ತಿದ್ದರು. ಡಿ ಕೆ ಶಿವಕುಮಾರವರು ಮುಖ್ಯಮಂತ್ರಿ ಹುದ್ದೆಗೆ ಏರುತ್ತಿರುವುದು ಕಾರ್ಯಕರ್ತರಲ್ಲಿ ಅತೀವ ವಿಶ್ವಾಸ ಮೂಡಿದೆ ಎಂದು ಹೇಳಿದರು. ಎಲ್ಲಾ ಕಾರ್ಯಕರ್ತರನ್ನು ಶ್ರೀ ಡಿ.ಕೆ. ಶಿವಕುಮಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಮಾರಂಭಕ್ಕೆ ಹಾಜರಾಗಲು ಆಹ್ವಾನಿಸಿದರು.

. ಈ ಸಂಭ್ರಮಾಚರಣೆಯಲ್ಲಿ ಆನಂದ ಜಾಧವ, ಜೇಮ್ಸ್ ಯಾಮಾ, ಬಿಎಚ್. ಪೂಜಾರ, ನಾಗರಾಜ ಗುರಿಕಾರ, ಬಾಬಾ ಶೇಖ್ ಸನದಿ, ಆನಂದ ಮುಶಣ್ಣವರ, ಈಶ್ವರ ಹಿರೇಮಠ, ಗೀತಾ ಥಾಂಶಿ, ಗೌರಮ ಬಲೋಗಿ, ಸುಮಾ ಮಿನಗನವರ, ಲಕ್ಷ್ಮಿ ಗುತ್ತೆ, ಖಅಶಿಂ ಖೋಡಿಹಾಳ, ಪ್ರಕಾಶ ಹಳಿಯಾಳ, ಸುರಜ ಗೌಳಿ,ಶಾಮ್ ಮಲ್ಲನಗೌಡರ, ಮಹೇಶ ಹುಳೆಣ್ಣವರ, ಮಂಜು ಭೋವಿ, ಸುಂಕದ, ಜನಾಬ ಖಾದ್ರಿ, ಸತೀಶ ಗಿರೇಣ್ಣವರ, ಮಧುಕೇಶ್ವರ ಮಾದರ, ನಾರಾಯಣ ಮಾದರ, ಹನುಮಂತ ಮೊರಬ, ಮುಂತಾದವರು ಭಾಗವಹಿಸಿದ್ದರು.

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಿ.ಕೆ.ಶಿವಕುಮಾರ ಅವರಿಗೆ ಶುಭಕೋರಿದ ಡಾ.ಪ್ರಭಾಕರ ಕೋರೆKRS ಪಕ್ಷದ ಬಳ್ಳಾರಿ ಜಿಲ್ಲಾ ಅಧ್ಯಕ್ಷರಾಗಿ ಪಿ. ಪ್ರಕಾಶ್ ರೆಡ್ಡಿ ನೇಮಕಪ್ರತಿಯೊಂದು ಜೀವರಾಶಿಗೂ ನೀರು ಬಹಳ ಅವಶ್ಯ : ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಯಶವಂತರಾಯಗೌಡ ಪಾಟೀಲ ಅವರಿಗೆ  ಮಂತ್ರಿ ಭಾಗ್ಯ ಒಲಿದು ಬರಲಿನಿವೃತ್ತ ಸಹಾಯಕನಿಗೆ ಸನ್ಮಾನಆರ್ ಬಿ ತಿಮ್ಮಾಪುರಿಗೆ ಉಪಮುಖ್ಯಮಂತ್ರಿ ಸ್ಥಾನ ಸಿಗಲಿ: ಮದಾರ ಮುಲ್ಲಾ.ಹೈಕಮಾಂಡ್ ಜವಾಬ್ದಾರಿ ನೀಡಿದರೆ ಸಮರ್ಥವಾಗಿ ನಿಭಾಯಿಸುವೆ: ರಾಜು ಕಾಗೆಕರ್ನಾಟಕ ನವನಿರ್ಮಾಣ ಸೇನೆ ಜಿಲ್ಲಾಧ್ಯಕ್ಷ ವಿಜಯಕುಮಾರ್ ಕಲವಲೂರು  ಆಗ್ರಹಶಾಲಾ ಪ್ರಾರಂಭೋತ್ಸವಕ್ಕೆ ಶಾಸಕ ಉಮೇಶ ಮೇಟಿ ಚಾಲನೆ ಅಖಿಲ ಭಾರತ ಗಾಣಿಗ ವಿದ್ಯಾ ಹಾಗೂ ಉದ್ಯೋಗವರ್ಧಕ ಟ್ರಸ್ಟ್‌ ವತಿಯಿಂದ 14 ರಂದು ರಾಜ್ಯ ಮಟ್ಟದ ವಧು ವರರ  ಉಚಿತ  ಸಮಾವೇಶ