Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ದಲಿತ ಸಮುದಾಯ  ಬೆಳೆಸುವ ಕಾರ್ಯವಾಗಲಿ: ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಿಹೊಳಿ 



ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿದ ಸಚಿವರು


ಬೆಳಗಾವಿ: ದಲಿತ ಸಮುದಾಯ  ಬೆಳೆಯಬೇಕಾದರೆ  ಸಮುದಾಯದಲ್ಲಿ  ಒಗ್ಗಟ್ಟು, ಶಿಕ್ಷಣ, ಉದ್ಯಮಶೀಲತೆ ಮತ್ತು ಸಾಮಾಜಿಕ ಹಾಗೂ ರಾಜಕೀಯ ಪ್ರಾತಿನಿಧ್ಯದ ಮೇಲೆ ಗಮನ ಹರಿಸಬೇಕು. ಮತ್ತು ಸಮುದಾಯ  ಜನರನ್ನು ಬೆಳೆಸುವ ಕಾರ್ಯವಾಗಬೇಕು.  ಬಾಬಾ  ಸಾಹೇಬ ಡಾ. ಅಂಬೇಡ್ಕರ ನೀಡಿರುವ  ಸಂವಿಧಾನದ  ಮೇಲೆ ನಮ್ಮ ಭವಿಷ್ಯ ಅಡಗಿದೆ ಎಂದು  ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಿಹೊಳಿ ಅವರು ಹೇಳಿದರು.


ನಗರದ ಕನ್ನಡ ಭವನದಲ್ಲಿ ಕರ್ನಾಟಕ ರಾಜ್ಯ ಸ-ಅಭಿವೃದ್ದಿ ಸಂಘ ವತಿಯಿಂದ ಆಯೋಜಿಸಲಾದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಎಲ್ಲರೂ ಇತಿಹಾಸ  ಅರಿತುಕೊಂಡಾಗ ಮಾತ್ರ ಹೊಸ ಸಮಾಜ ಕಟ್ಟಲು ಸಾಧ್ಯವಾಗುತ್ತದೆ.  ದಲಿತ ಸಮುದಾಯ ಜನರು ಹಾದು ಹೋಗುವ ಜಾಗವನ್ನು ಸ್ವಚ್ಛಗೊಳಿಸಿ,  ಅವಮಾನಿಸುವ ಕೆಲಸಗಳಾಗಿವೆ. ಪೂರ್ವಜರು ಅನುಭವಿಸಿದ ಶೋಷಿತ-ಅನ್ಯಾಯವನ್ನು ಮುಂದಿನ ನಮ್ಮ ಪೀಳಿಗೆಗಳು ಆ ನೋವನ್ನು ಅನುಭವಿಸಬಾರದು.



ಹೀಗಾಗಿ ನಾವೆಲ್ಲರೂ ಶಿಕ್ಷಣದೆಡೆ ಸಾಗಿ, ಸಮುದಾಯ ಗಟ್ಟಿಗೊಳಿಸಬೇಕು.   ದಲಿತ ಸಮುದಾಯ  ಬೆಳೆಯಲು ಕಾರಣ ಡಾ. ಅಂಬೇಡ್ಕರ ನೀಡಿರುವ ಕೊಡುಗೆ.  ಒಂದು ವೇಳೆ  ಸಂವಿಧಾನ ಇಲ್ಲದಿದ್ಧರೆ ಬಾವಿಯಲ್ಲಿರುವ ನೀರನ್ನು ಕುಡಿಯಲು ಕೆಲವು ಸಮುದಾಯಗಳು ಬೀಡುತ್ತಿರಲಿಲ್ಲ ಎಂದು ಎಚ್ಚರಿಸಿದರು.



ಸಮಾಜದಲ್ಲಿ ಸಾಕಷ್ಟು ನೂನ್ಯತೆಗಳಿವೆ.‌ ಬಡವನದಿಂದ ಶಿಕ್ಷಣದಿಂದ ಬಹಳ ಜನರು ವಂಚಿತರಾಗುತ್ತಿದ್ದಾರೆ. ಸರಕಾರ ಸುಶಿಕ್ಷಿತ ಸಮಾಜ ನಿರ್ಮಾಣಕ್ಕೆ ಸಾಕಷ್ಟು ಪ್ರಯತ್ನ ಪಟ್ಟರು, ಅದು ಪೂರ್ಣ ಪ್ರಮಾಣದಲ್ಲಿ ಸಾಧ್ಯವಾಗುತ್ತಿಲ್ಲ. ಆರ್ಥಿಕ ಪ್ರಗತಿ ಹೊಂದಿವರು ಹಾಗೂ ಸರಕಾರ ಅಧಿಕಾರಿಗಳು ಬಡ ವಿದ್ಯಾರ್ಥಿಗಳನ್ನು ದತ್ತು ಪಡೆದು ಪದವಿ ಶಿಕ್ಷಣ ನೀಡಲು ಪ್ರಯತ್ನಿಸಿದರೇ ಸಮಾಜದಲ್ಲಿ ಬದಲಾವಣೆ ತರಬಹುದು ಎಂದು ಹೇಳಿದರು.


ಈ ಸಮುದಾಯದ ಸಮಸ್ಯೆಗಳ ಕುರಿತು ಹುಬ್ಬಳ್ಳಿಯಲ್ಲಿ ಸಭೆ ಮಾಡಲಾಗಿದೆ. ಕರ್ನಾಟಕ ರಾಜ್ಯ ಸ-ಅಭಿವೃದ್ದಿ ಸಂಘಟಗೆ ಬೆಳಗಾವಿಯಲ್ಲಿ ಜಾಗ ಬೇಕು ಎಂಬ ಬೇಡಿಕೆಯನ್ನು ಈಡೇರಿಸುವ ಪ್ರಯತ್ನ ಮಾಡಲಾಗಿದೆ. ಪ್ರಾಧಿಕಾರದಿಂದ ಈ  ಕಾರ್ಯವೂ ಶೀಘ್ರವೇ ನೇರವೇರಿಲಿದೆ. ಮಹನಿಯರ ಇತಿಹಾಸವನ್ನು ಈ ದೇಶದಲ್ಲಿ ಮುಚ್ಚುವ ಪ್ರಯತ್ನಗಳು ಆಗಿದೆ.  ನಮ್ಮ ಸಮುದಾಯಕ್ಕೆ ಆಗಿರುವ ಅನ್ಯಾಯ-ತಾರತ್ಯಮಗಳನ್ನು ಸರ್ಕಾರ ಮಟ್ಟದಲ್ಲಿ ಚರ್ಚಸಿ ಇತ್ಯರ್ಥಗೊಳಿಸುವ ಕೆಲಸಗಳನ್ನು ಮಾಡಲಾಗುವುದು ಎಂದು ಭರವಸೆ ನೀಡಿದರು.



ಇತಿಹಾಸ ಬಳ್ಳವರು, ಇತಿಹಾಸ ಸೃಷ್ಟಿಸಲು ಸಾಧ್ಯ ಎಂಬ ಡಾ. ಅಂಬೇಡ್ಕರ್ ಅವರು ಮಾತಿನಂತೆ ತಾವು ಪಡೆದ ಶಿಕ್ಷಣದಿಂದ ಕುಟುಂಬ ಹಾಗೂ ಸಮಾಜದ ಬೆಳವಣಿಗೆಗೆ ಶ್ರಮಿಸಬೇಕು ಎಂದು ಸಚಿವ ಸತೀಶ ಜಾರಕಿಹೊಳಿ ಅವರು ತಿಳಿಸಿದರು.


ಸಿನಿಮಾ ನಟರು, ಕ್ರೀಡಾಪಟುಗಳನ್ನು ಪ್ರೇರಣೆಯಾಗಿ ತೆಗೆದುಕೊಳ್ಳುವ ಬದಲು ಸಮಾಜ ಸುಧಾರಕರ ಪ್ರೇರಣೆ ಇಂದಿನ ಪೀಳಿಗೆಗೆ ಅವಶ್ಯವಿದೆ. ಬುದ್ಧ, ಬಸವ, ಅಂಬೇಡ್ಕರ್ ಅವರ ಆದರ್ಶಗಳನ್ನು ಅಳವಡಿಸಿಕೊಂಡು ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು. ಜೊತೆಗೆ ಸಮಾಜದ ಸುಧಾರಕರ ನಿಜವಾದ ಇತಿಹಾಸವನ್ನು ತಿಳಿದುಕೊಳ್ಳಬೇಕು. ಆಗ ಮಾತ್ರ ಜಾತಿ, ಧರ್ಮದ ಸಂಘರ್ಷಗಳು ಕೊನೆಗೊಂಡು ದೇಶದ ಅತಿ ವೇಗವಾಗಿ ಪ್ರಗತಿಯಾಗುತ್ತದೆ ಎಂದು ಸಚಿವರು ತಿಳಿಸಿದರು.


ಈ ಸಂದರ್ಭದಲ್ಲಿ  ಶಾಸಕ ರಾಜು ( ಆಪೀಸ್) ಸೇಠ, ಹಿರಿಯ ಸಾಹಿತ್ಯ ಯು.ರು . ಪಾಟೀಲ್,  ಜನಪದ ಹಿರಿಯ ಸಾಹಿತ್ಯ  ಜ್ಯೋತಿರ್ಲಿಂಗ ಹೊನಕಟ್ಟಿ, ಕ.ರಾ.ಸ-ಅಬಿವೃದ್ದಿ ಸಂಘದ ಅಧ್ಯಕ್ಷರಾದ  ಸುಭಾಷ ನೇತ್ರೆಕರ್, ಭೀಮರಾವ್ ಪವಾರ್, ಸಲಹೆಗಾರರಾದ ಶಿವಕುಮಾರ್ ದೊಡಮನಿ ಹಾಗೂ ಇತರರು ಇದ್ದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ