, ಜಮಖಂಡಿ;07 ಡಾ.ಶಾಮಾ ಪ್ರಸಾದ್ ಮುಖರ್ಜಿ ಹಾಗೂ ನಗರ ಶಾಸಕ ಜಗದೀಶ ಗುಡಗುಂಟಿ ಅವರ ಜನ್ಮ ದಿನದ ಪ್ರಯುಕ್ತ ನಗರದ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು. ನಗರದ ಮಾರುಕಟ್ಟೆ ಪ್ರದೇಶದ ಹನುಮಾನ್ ದೇವಸ್ಥಾನ ದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಕಾರ್ಯಕರ್ತರು ಸಾರ್ವಜನಿಕರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಿದ್ದರು. ಜಿಲ್ಲಾ ಉಪಾಧ್ಯಕ್ಷ ಈಶ್ವರ ಆದೆಪ್ಪನವರ ಮಾತನಾಡಿ ಡಾ,ಶ್ಯಾಮಾಪ್ರಸಾದ ಮುಖರ್ಜಿ ಅವರು ನೆಹರು ಸರ್ಕಾರದ ಅತಿಯಾದ ತುಷ್ಟೀಕರಣ ನೀತಿಯಿಂದ ಬೇಸರಗೊಂಡು ಕ್ಯಾಬಿನೆಟ ದರ್ಜೆಯ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಅಖಂಡ ಭಾರತದ ಏಕೀಕರಣಕ್ಕೆ ಹಗಲಿರುಳು ಶ್ರಮಿಸಿದ್ದನ್ನು ಮರೆಯುವಂತಿಲ್ಲ ಎಂದು ತಿಳಿಸಿದರು. ಅಜಯ ಕಡಪಟ್ಟಿ ಮಾತನಾಡಿ ಸರಳ ಸಜ್ಜನ ರಾಜಕಾರಣಿಯಾಗಿರುವ ನಗರ ಶಾಸಕ ಜಗದೀಶ ಗುಡಗುಂಟಿ ಅವರ ಜನ್ಮ ದಿನವನ್ನು ದೇವರಿಗೆ ಪೂಜೆ ಸಲ್ಲಿಸುವ ಮೂಲಕ ಸರಳವಾಗಿ ಆಚರಿಸಿದ್ದೇವೆ. ಸಾರ್ವಜನಿಕ ಪ್ರಸಾದದ ವ್ಯವಸ್ಥೆ ಮಾಡಿದ್ದಾಗಿ ಹೇಳಿದರು, ನಗರದಾದ್ಯಂತ ಫ್ಲಕ್ಸ್ ಬೋಲ್ಡ ಗಳನ್ನು ಅಳವಡಿಸಲಾಗಿಲ್ಲ ಶಾಸಕರ ಸೂಚನೆಯಂತೆ ಅತ್ಯಂತ ಸರಳವಾಗಿ ಜನ್ಮದಿನವನ್ನು ಆಚರಿಸಲಾಗಿದೆ ಎಂದು ಹೇಳಿದರು, ಪಕ್ಷದ ಕಾರ್ಯಕರ್ತರು ಮುಖಂಡರು ಇದ್ದರು.