ಹುನಗುಂದ,ಜೂ.೨೯ ಮಕ್ಕಳ ಸುಂದರ ಬದುಕಿಗೆ ಶಿಕ್ಷಣ ಅಗತ್ಯ. ಪ್ರತಿಯೊಬ್ಬ ವಿದ್ಯಾರ್ಥಿಯು ಶಿಕ್ಷಣ, ಜೊತೆಗೆ ಒಳ್ಳೆಯ ಸಂಸ್ಕಾರ ಪಡೆಯುವ ಮೂಲಕ ಸುಂದರ ಬದುಕು ರೂಪಿಸಿಕೊಳ್ಳಬೇಕು ಎಂದು ಎಸ್‌ಡಿಎಂಸಿ ಸದಸ್ಯ ಮುತ್ತಪ್ಪ ಬಳಿಗಾರ ಹೇಳಿದರು.
ತಾಲೂಕಿನ ನಾಗೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಮಕ್ಕಳಿಗೆ ಉಚಿತ ನೋಟ್‌ಬುಕ್ ವಿತರಿಸಿ ಮಾತನಾಡಿದರು.
ದಾನಿಗಳ ಹಣದಿಂದ ಮಕ್ಕಳಿಗೆ ನೋಟ್ ಪುಸ್ತಕ ವಿತರಿಸುತ್ತಿರುವುದು ಉತ್ತಮ ಕಾರ್ಯ. ಇದೇ ಸಂದರ್ಭದಲ್ಲಿ ಅಡಿಯಪ್ಪ ಹುಚ್ನೂರ ಇವರು ಪ್ರತಿದಿನ ಮಕ್ಕಳಿಗೆ ಒಂದು ಶರಣರ ವಚನಗಳನ್ನು ಕಲಿಸುತ್ತಿರುವುದು ಒಳ್ಳೆಯ ಕೆಲಸ ಎಂದರು. ನೋಟ್‌ಬುಕ್ ದಾನಿ ಅಡಿಯಪ್ಪ ಹುಚ್ನೂರ ಮಾತನಾಡಿ ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಗ್ರಾಮದ ಪ್ರತಿಯೊಬ್ಬರ ಸಹಕಾರ ಮತ್ತು ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಸದಸ್ಯರ ಸಹಕಾರ ಬಹು ಮುಖ್ಯ ಎಂದರು.
ಎಸ್‌ಡಿಎಂಸಿ ಉಪಾಧ್ಯಕ್ಷ ಗಂಗಮ್ಮ ಹುಚನೂರ ಸೇರಿದಂತೆ ಎಸ್‌ಡಿಎಂಸಿ ಸದಸ್ಯರಾದ ಅಮರಗೌಡ ಪಾಟೀಲ ಅಂದಾನಸ್ವಾಮಿ ಗುಡದೂರಕಲಮಠ ಆರ್. ಚನ್ನದಾನಿ, ಹಿರಿಯಣ್ಣ ರಾಮಶಟ್ಟಿ, ದೊಡ್ಡಪ್ಪ ಕುರಿ, ಬರಮಗೌಡ ಪಾಟೀಲ ಮುಖ್ಯ ಗುರುಗಳಾದ ಬಸವರಾಜ ಭಜಂತ್ರಿ, ಶಾಲಾ ಸಿಬ್ಬಂದಿ ಸೇರಿದಂತೆ ಗ್ರಾಮದ ಪ್ರಮುಖರು ಭಾಗವಹಿಸಿದ್ದರು. ಮೇಟಿ ಗುರುಗಳು ನಿರೂಪಿಸಿದರು.