Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪರವಾನಿಗೆ ಹೊಂದಿರುವ ೯ ಜನರಿಗೆ ಮೀನುಗಾರಿಕೆ ಕಿಟ್‌ಗಳ ವಿತರಣೆ



 
ಜಮಖಂಡಿ,ಮೇ,೧೯ : ಪರವಾನಿಗೆ ಪಡೆದಿರುವ ಮೀನುಗಾರರಿಗೆ ರಾಜ್ಯ ಮೀನುಗಾರಿಕೆ ಇಲಾಖೆಯ ವತಿಯಿಂದ ವಿತರಿಸಲಾಗುವ ಕಿಟ್‌ಗಳನ್ನು ಶಾಸಕ ಜಗದೀಶ ಗುಡಗುಂಟಿ ಮಂಗಳವಾರ ಗೃಹ ಕಚೇರಿ ಸಾಕ್ಷಾತ್ಕಾರ ಭವನದಲ್ಲಿ ವಿತರಣೆ ಮಾಡಿದರು. ಮೀನು ಹಿಡಿಯುವದು ಅತ್ಯಂತ ಕಷ್ಟಕರ ಕೆಲಸವಾಗಿದೆ. ಮೀನುಗಾರರಿಗೆ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಸರ್ಕಾರ ಮೀನುಗಾರರ ಜೀವ ರಕ್ಷಕ ಕಿಟ್‌ಗಳನ್ನು ಮಂಜೂರು ಮಾಡಿದ್ದು ಜಿಲ್ಲೆಗೆ ಸುಮಾರು ೩೫ ಕಿಟ್‌ಗಳು ಬಂದಿವೆ ಆ ಪೈಕಿ ತಾಲುಕಿಗೆ ೯ ಕಿಟ್‌ಗಲು ಮಂಜೂರಾಗಿದ್ದು ವಿತರಣೆ ಕಾರ್ಯ ನಡೆದಿದೆ ಎಂದು ತಿಳಿಸಿದರು. ಮೀನನ್ನು ಆಹಾರ ವೆಂದು ಪರಿಗಣಿಸಲಾಗುತ್ತದೆ. ಸೀ ಫುಡ್ ಎಂದು ಕರೆಯುವ ಮೀನನ್ನು ಔಷಧಿ ತಯಾ ರಿಕೆ, ಆಹಾರ ರೂಪದಲ್ಲಿ ಬಳಸಲಾಗುತ್ತದೆ. ಶೇ.೨೦ ರಷ್ಟು ಜನರ ಜೀವನೋಪಾಯ ವಾಗಿರುವ ಮೀನು ಉದ್ಯಮವನ್ನು ಪ್ರೋತ್ಸಾಹಿಸ ಲಾಗುತ್ತಿದೆ. ತಾಲುಕಿನಲ್ಲಿ ಜಂಬಗಿ ಮೀನುಗಾರರ ಸಹಕಾರ ಸಂಘ, ಹಿರೇಪಡಸಲಗಿ ಗ್ರಾಮದ ಅಂಬಾಭವಾನಿ ಮಹಿಳಾ ಸಹಕಾರ ಸಂಘ, ಹೀಗೆ ನಾಲ್ಕು ಸಹಕಾರಿ ಸಂಘಗಳಿದ್ದು ನಾನೂರಕ್ಕೂ ಹೆಚ್ಚು ಸದಸ್ಯರಿದ್ದಾರೆ ಎಂದು ತಿಳಿಸಿದರು. ಸರ್ಕಾರ ಜೀವ ರಕ್ಷಕ ಕಿಟ್‌ಗಳ ನ್ನು ಸದಸ್ಯರ ಶೇ.೫೦ ರಷ್ಟು ವಿತರಿಸಬೇಕು ಎಂದು ಮನವಿ ಮಾಡಿದರು. ೯ ಕಿಟ್‌ಗಳು ಸಾಕಾಗುವದಿಲ್ಲ ಎಂದು ಹೇಳಿದರು.
ಇಲಾಖೆಯ ಸಹಾಯಕ ನಿರ್ದೆಶಕ ಪ್ರಕಾಶ ಭಜಂತ್ರಿ ಮಾತನಾಡಿ ಸರ್ಕಾರ ಮೀನುಗಾರಿಕೆಯ ಉತ್ತೇಜನಕ್ಕೆ ಅನೇಕ ಕಾರ್ಯಕ್ರಮ ರೂಪಿಸಿದೆ . ಮೀನುಗಾರರಿಗೆ ಜೀವ ರಕ್ಷಕ ಕಿಟ್‌ಗಳ ವಿತರಣೆ, ಸಾಕಾಣಿಕೆ ಮಾಡುವರಿಗೆ ಸಬ್‌ಸೀಡಿ ಜತೆಗೆ ಮತ್ಸ್ಯ ಯೋಜನೆ ಅಡಿಯಲ್ಲಿ ಮನೆಗಳ ನಿರ್ಮಾಣಕ್ಕೆ ಸರ್ಕಾರದಿಂದ ಆರ್ಥಿಕ ಸಹಾಯ ಸೇರಿದಂತೆ ಅನೇಕ ಯೋಜನೆಗಳಿವೆ ಎಂದು ಹೇಳಿದರು.ಫಲಾನುಭವಿ ಗಳಾದ ರಂಗಪ್ಪ ಶಿರಬೂರ, ಪ್ರವೀಣ ಬಿದರಿ, ಚಂದ್ರವ್ವ ಮಾಂಗ, ಸುಶಿಲವ್ವ ಮೊರೆ, ರಾಜಾಸಾಬ ಶೇಖ, ಸದಾಶಿವ ಮಾಂಗ, ಸಾಬ್‌ಲಾಲ್ ಶೇಖ ಅವರಿಗೆ ಕಿಟ್‌ಗಳನ್ನು ವಿತರಿಸಲಾಯಿತು. ಶ್ರೀಧರ ಕಂಬಿ ಇದ್ದರು.

Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
೨೦ ವರ್ಷಗಳ ಹಿಂದೆ ಆದ ರಸ್ತೆ * ರಸ್ತೆ ತುಂಬೆಲ್ಲಾ ತಗ್ಗುದಿನ್ನಿಗಳದ್ದೇ ದರ್ಬಾರುಅದ್ದೂರಿ ಜನ್ಮದಿನ ಆಚರಣೆ ಬೇಡ; ಸೇವಾ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ: ಎ.ಎಸ್. ಪಾಟೀಲ ನಡಹಳ್ಳಿಶೈಕ್ಷಣಿಕ ಉತ್ಕೃಷ್ಟತೆ, ಸಂಶೋಧನೆ ಹಾಗೂ ನಾವೀನ್ಯತೆಗೆ ಒತ್ತು : ಡಾ. ಪ್ರಭಾಕರ ಕೋರೆ ಎಮ್ಮೆ ಹಾಲು ಪೂರೈಕೆಯಲ್ಲಿನ ಕುಸಿತ : ತೀವ್ರ ಕಳವಳ ವ್ಯಕ್ತಪಡಿಸಿದ ಬಾಲಚಂದ್ರ ಜಾರಕಿಹೊಳಿ ದಿ. 22-07-2026 ರಂದು ಶಾಸಕ ಬಾಬಾಸಾಹೇಬ ಪಾಟೀಲರ ಜನ್ಮದಿನದ ಪ್ರಯುಕ್ತ ರಕ್ತಧಾನ ಶಿಬಿರಆರೋಗ್ಯ ಕಾಳಜಿ ಮತ್ತು ಸುತ್ತ-ಮುತ್ತಲಿನ ಪರಿಸರ ಸ್ವಚ್ಛತಾ ಉಪನ್ಯಾಸದಲ್ಲಿ ಡಾ.ಜಗದೀಶ ಜಿಂಗಿ ಅಭಿಪ್ರಾಯಪ್ರತಿಭಾವಂತರಿಗೆ ಪುರಸ್ಕಾರ, ಬಸವ ಭವನ ನಿರ್ಮಾಣಕ್ಕೆ ವೇಗ: ವೀರಶೈವ ಲಿಂಗಾಯತ ಮಹಾಸಭಾ ನಿರ್ಧಾರಜಿಲ್ಲೆಯ ನರಗುಂದ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ನಡೆಸಿದ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ಪಿಂಚಣಿ ಸೇರಿದಂತೆ ಯಾವುದೇ ನಿವೃತ್ತಿ ಸೌಲಭ್ಯ ಸಿಗುವ ಮುನ್ನವೇ ಮುಖ್ಯೋಪಾಧ್ಯಾಯರ ನಿಧನ: ಎಸ್.ವಿ. ಸಂಕನೂರರ ತೀವ್ರ ಸಂತಾಪವಿಜಯನಗರ ಜಿಲ್ಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ಹಕ್ಕುಗಳ ರಕ್ಷಣೆಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ