ಮುನವಳ್ಳಿ: ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ನಗರೋತ್ಥಾನ ಹಾಗೂ ಎಸ್.ಎಫ್.ಸಿ ಯೋಜನೆಯಡಿ ವಿವಿಧ ಸೌಲಭ್ಯಗಳ ಫಲಾನುಭವಿಗಳಿಗೆ ವಿತರಣಾ ಕಾರ್ಯಕ್ರಮ ಬುದವಾರ ಜರುಗಿತು.
ತ್ರೀಚಕ್ರ ವಾಹನ, ಹೊಲಗೆ ಯಂತ್ರ, ಲ್ಯಾಪ್ ಟ್ಯಾಪ್, ಸೋಲಾರ ಲೈಟ, ನೀಯೋಜನ ವಿಧ್ಯಾರ್ಥಿಗಳಿಗೆ ವಿಧ್ಯಾರ್ಥಿ ವೇತನ ಹೀಗೆ ಒಟ್ಟು ೨೨೧ ಫಲಾನುಭವಿಗಳಿಗೆ ಶಾಸಕ ವಿಶ್ವಾಸ ವೈದ್ಯ ಸಲಕರಣೆಗಳನ್ನು ವಿತರಿಸಿ ಮಾತನಾಡಿದರು ಪುರಸಭೆ ವ್ಯಾಪ್ತಿಗೆ ಬರುವ ಎಲ್ಲ ವಾರ್ಡಗಳಲ್ಲಿ ರಸ್ತೆ, ವಳಚರಂಡಿ, ಸಿ.ಸಿ ರಸ್ತೆ, ಪೀವರ್ಸ, ಉತ್ತಮರೀತಿಯಲ್ಲಿ ಕಾಮಗಾರಿ ಒಂದನೆ ಹಂತದಲ್ಲಿ ಮುಗದಿವೆ ಇನ್ನೂ ಉಳಿದ ಕಾಮಗಾರಿಗಳನ್ನು ಮುಂದಿನದಿನಮಾನಗಳಲ್ಲಿ ಕೈಗೊಳ್ಳಲಾಗುವುದು. ಪಟ್ಟಣದ ಪ್ರಾಥಮೀಕ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಿ ಸಮುದಾಯ ಕೇಂದ್ರವನ್ನಾಗಿ ಅತಿಶಿಘ್ರದಲ್ಲಿ ಮಾಡಿ ಕೊಡುತ್ತೆವೆ ಇದರಿಂದ ಬಡ ದಿನ ದಲಿತರಿಗೆ ಹೆಚ್ಚಿನ ಅನೂಕುಲ ವಾಗುವುದು ಎಂದರು.
ಪ್ರಾಸ್ತಾವಿಕವಾಗಿ ಪುರಸಭೆ ಮುಖ್ಯಾಧಿಕಾರಿ ಎಮ್.ಎಮ್.ತಿಮ್ಮಾಣಿ ಮಾತನಾಡಿ ಫಲಾನುಭವಿಗಳಿಗೆ ಕೊಡಮಾಡಿದ ಸಲಕರಣೆಗಳನ್ನು ಅವರೆ ಉಪಯೋಗಿಸಬೇಕು ಬೇರೆಯವರಿಗೆ ಕೊಡುವಂತಿಲ್ಲಾ ಎಂದು ಸರಕಾರದ ಕಟ್ಟುನಿಟ್ಟಿನ ಸೂಚನೆ ಇರುತ್ತದೆ. ಮುಂದಿನ ವರ್ಷದಲ್ಲಿ ಮತ್ತೆ ಪಲಾನುಬವಿಗಳಿಗೆ ಹೆಚ್ಚಿನ ಸಾಮಗ್ರಿಗಳನ್ನು ಹಂಚಲಾಗುವುದು ಇದರ ಸದುಪಯೋಗವನ್ನು ಸಾರ್ವಜನಿಕರು ಅರ್ಜಿ ಸಲ್ಲಿಸಿ ಪಡೆದುಕೊಳ್ಳಬೇಕೆಂದರು.
ಎಪಿ.ಎಮ್.ಸಿ ಅಧ್ಯಕ್ಷ ಚಂದ್ರು ಜಂಬ್ರಿ, ಪುರಸಭೆ ಅಧ್ಯಕ್ಷ ಈಶ್ವರ ಕರೀಕಟ್ಟಿ ಮಾತನಾಡಿದರು.
ಟಿ.ಎಪಿ.ಎಮ್.ಸಿ ರವೀಂದ್ರ ಯಲಿಗಾರ, ಎಮ್.ಆರ್.ಗೋಪಶೆಟ್ಟಿ, ಪುರಸಭೆ ಉಪಾಧ್ಯಕ್ಷ ಡಿ.ಡಿ.ಕಿನ್ನೂರಿ, ಸದಸ್ಯರುಗಳಾದ ಶ್ರೀಶ್ಯಲ ನೇಗಿನಾಳ, ಮೀರಾಸಾಬ ವಟ್ನಾಳ. ಸಮಿರುಲ್ಲಾ ಚೂರಿಖಾನ, ವಿನಾಯಕ ಕಟ್ಟೆಕಾರ, ಪಂಚುಬಾರಕೇರ, ಹನಮಂತ ಹಿರೇಮತ್ರಿ, ಪುರಸಬೆ ಸಿಬ್ಬಂದಿವರ್ಗ, ಸಾರ್ವಜನಿಕರು ಇತರರು ಉಪಸ್ಥಿತರಿದ್ದರು.
