Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬಸವ ಜಯಂತಿ ನಿಮಿತ್ತ ಏ.10 ರಿಂದ ಪ್ರತಿ ದಿನ ಪ್ರವಚನ


ಬಳ್ಳಾರಿ, ಏ.04.:  ನಗರದಲ್ಲಿ ಏ.20 ರಂದು ವಿಶ್ವಗುರು, ಸಾಂಸ್ಕೃತಿಕ ನಾಯಕ ಬಸವೇಶ್ವರ ಜಯಂತಿಯನ್ನು ಆಚರಿಸಲಾಗುತ್ತದೆ. ಈ ಕುರಿತು ಪೂರ್ವ ಭಾವಿ ಸಭೆ ನಗರದ ರಾಷ್ಟ್ರೀಯ ಬಸವದಳದ ಸಭಾಂಗಣದಲ್ಲಿ ನಿನ್ನೆ ಸಂಜೆ ನಡೆಯಿತು.

ಬಸವ ಜಯಂತಿಯನ್ನು ನಗರದಲ್ಲಿ ಈ ಮೊದಲು ಶರಣ ಸಕ್ಕರೆ ಕರಡೀಶ ಚೌಕಿಯಲ್ಲಿ  ವೀರಶೈವ ಯುವಕ ಸಂಘ ದಿಂದ ಆಚರಿಸುತ್ತಾ ಬಂದಿತ್ತು. 1988 ರಿಂದ  ರಾಷ್ಟ್ರೀಯ ಬಸವ ದಳ ಮಾಡುತ್ತಾ ಬಂದಿದೆ.

ಈ ವರ್ಷ ಏ.10 ರಿಂದ ಬಸವ ಜಯಂತಿ ವರೆಗೆ ಪ್ರತಿದಿನ ಸಂಜೆ ಇಲ್ಲಿ ಪ್ರವಚನ ಮಾಡಲಿದೆ. ಜೊತೆಗೆ ಆರೋಗ್ಯ ತಪಾಸಣಾ ಶಿಬಿರ ಮೊದಲಾದ ಸಾಮಜ ಸೇವಾ ಕಾರ್ಯಚಟುವಟಿಕೆಗಳನ್ನು ಕೈಗೊಳ್ಳಲಿದೆಂದು  ಸಭೆಗೆ ರವಿಶಂಕರ್ ಅವರು ತಿಳಿಸಿದರು.

ಏ.19 ರಂದು ಸಮಾಜದವರೆಲ್ಲ ಬಸವ ದಳದಲ್ಲಿ ಸೇರಿ ಕಾರ್ಯಕ್ರಮದ ಮೂಲಕ ಪ್ರಸಾದ ವ್ಯವಸ್ಥೆ ಮಾಡುವ ಚಿಂತನೆ ಇದೆಂದರು.

ಸಭೆಯಲ್ಲಿ ವೀರೇಶ್ ಗಂಗಾವತಿ ಅವರು ಮಾತನಾಡಿ,ಅಲ್ಲಂ ಪ್ರಶಾಂತ್ ಅವರು ಪ್ರಸಾದ ವ್ಯವಸ್ಥೆ ಮಾಡಲಿದ್ದಾರೆ.ನಗರದ ಸಂಗನಕಲ್ಲು ರಸ್ತೆಯ ಕೆಇಬಿ ಸರ್ಕಲ್ ಗೆ ಬಸವೇಶ್ವರ ಸರ್ಕಲ್  ಎಂದು ಕಳೆದ ವರ್ಷ ಪೂಜೆ ಮಾಡಿ ನಾಮಕರಣ ಮಾಡಲಾಗಿತ್ತು. ಅಂದು ಪಾಲ್ಗೊಂಡಿದ್ದ ನಮ್ಮ ಜನ ಪ್ರತಿನಿಧಿಗಳು ಇಲ್ಲಿ ಒಂದು ವರೆ ಕೋಟಿ ರೂ ವೆಚ್ಚದಲ್ಲಿ ಅಶ್ವಾರೂಡ ಬಸವೇಶ್ವರ ಪುತ್ಥಳಿ ಸ್ಥಾಪಿಸಲಿದೆಂದು ಹೇಳಿದ್ದರು.  ಆದರೆ ಈ ವರೆಗೆ ಆಗಲಿಲ್ಲ. ದಾನಿಗಳು ಬಸವ ಪುತ್ಥಳಿ ಮಾಡಲು ಎರೆಡು ಲಕ್ಷ ರೂ ನೀಡಿದ್ದಾರೆ. ಸರ್ಕಾರದಿಂದ ಆಗದಿದ್ದರೆ ಸಮಾಜದಿಂದಲೇ ಮಾಡಲು ಮುಂದಾಗಬೇಕೆಂಬ ಅಭಿಪ್ರಾಯ ತಿಳಿಸಿದರು.

ಕೇಣಿ ಬಸಪ್ಪ ಅವರು ಮಾತನಾಡಿ, ಬಸವ ಜಯಂತಿ ಸಮಾರಂಭದ ಪ್ರಸಾದ ವ್ಯವಸ್ಥೆಗೆ 50 ಸಾವಿರ ರೂ ದೇಣಿಗೆ ನೀಡುವುದಾಗಿ ಹೇಳಿದರು.

ಹತ್ತು ದಿನಗಳ ಕಾಲ ನಗರದ ಹಲವುಕಡೆ ಭಾವಚಿತ್ರದೊಂದಿಗೆ ತೆರಳಿ ಬಸವ ಜಯಂತಿಯ ಆಚರಣೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕುರಿತು ಸಹ ಚರ್ಚೆ ನಡೆಯಿತು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
೨೦ ವರ್ಷಗಳ ಹಿಂದೆ ಆದ ರಸ್ತೆ * ರಸ್ತೆ ತುಂಬೆಲ್ಲಾ ತಗ್ಗುದಿನ್ನಿಗಳದ್ದೇ ದರ್ಬಾರುಅದ್ದೂರಿ ಜನ್ಮದಿನ ಆಚರಣೆ ಬೇಡ; ಸೇವಾ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ: ಎ.ಎಸ್. ಪಾಟೀಲ ನಡಹಳ್ಳಿಶೈಕ್ಷಣಿಕ ಉತ್ಕೃಷ್ಟತೆ, ಸಂಶೋಧನೆ ಹಾಗೂ ನಾವೀನ್ಯತೆಗೆ ಒತ್ತು : ಡಾ. ಪ್ರಭಾಕರ ಕೋರೆ ಎಮ್ಮೆ ಹಾಲು ಪೂರೈಕೆಯಲ್ಲಿನ ಕುಸಿತ : ತೀವ್ರ ಕಳವಳ ವ್ಯಕ್ತಪಡಿಸಿದ ಬಾಲಚಂದ್ರ ಜಾರಕಿಹೊಳಿ ದಿ. 22-07-2026 ರಂದು ಶಾಸಕ ಬಾಬಾಸಾಹೇಬ ಪಾಟೀಲರ ಜನ್ಮದಿನದ ಪ್ರಯುಕ್ತ ರಕ್ತಧಾನ ಶಿಬಿರಆರೋಗ್ಯ ಕಾಳಜಿ ಮತ್ತು ಸುತ್ತ-ಮುತ್ತಲಿನ ಪರಿಸರ ಸ್ವಚ್ಛತಾ ಉಪನ್ಯಾಸದಲ್ಲಿ ಡಾ.ಜಗದೀಶ ಜಿಂಗಿ ಅಭಿಪ್ರಾಯಪ್ರತಿಭಾವಂತರಿಗೆ ಪುರಸ್ಕಾರ, ಬಸವ ಭವನ ನಿರ್ಮಾಣಕ್ಕೆ ವೇಗ: ವೀರಶೈವ ಲಿಂಗಾಯತ ಮಹಾಸಭಾ ನಿರ್ಧಾರಜಿಲ್ಲೆಯ ನರಗುಂದ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ನಡೆಸಿದ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ಪಿಂಚಣಿ ಸೇರಿದಂತೆ ಯಾವುದೇ ನಿವೃತ್ತಿ ಸೌಲಭ್ಯ ಸಿಗುವ ಮುನ್ನವೇ ಮುಖ್ಯೋಪಾಧ್ಯಾಯರ ನಿಧನ: ಎಸ್.ವಿ. ಸಂಕನೂರರ ತೀವ್ರ ಸಂತಾಪವಿಜಯನಗರ ಜಿಲ್ಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ಹಕ್ಕುಗಳ ರಕ್ಷಣೆಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ