Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ವೃತ್ತಿಯಲ್ಲಿನ ಶಿಸ್ತು, ಸಂಯಮ, ಸಮಯ ಪ್ರಜ್ಞೆ ನಮ್ಮ ಗೌರವ ಹೆಚ್ಚಿಸುತ್ತದೆ: ಡಿ. ಚಾಮುಂಡೇಶ್ವರಿ 



ಧಾರವಾಡ : ಪೊಲೀಸ್ ಇಲಾಖೆಯು ತ್ಯಾಗ, ಶಿಸ್ತು, ಸಮಯಪ್ರಜ್ಞೆಗೆ ಸಾಕ್ಷಿಯಾಗಿದೆ. ಪೊಲೀಸ್ ಸಿಬ್ಬಂದಿಗಳಲ್ಲಿನ ಶಿಸು,್ತ ಸಾಮಾಜಿಕ ಕಳಕಳಿ ಮತ್ತು ಸಮಯ ಪ್ರಜ್ಞೆಯು ನಮ್ಮ ಗೌರವ ಹೆಚ್ಚಿಸುತ್ತದೆ. ಇಲಾಖೆಗೆ ಸೇರುವಾಗ ಕೇಳಿದ ಪಾಠ, ಇಲಾಖೆಯ ನೀತಿ ನಿಯಮಗಳನ್ನು ನಿವೃತ್ತಿಯವರೆಗೂ ಸ್ಮರಿಸಿ ಅಳವಡಿಸಿಕೊಂಡು ಮುನ್ನಡೆದರೆ, ಸಾರ್ಥಕ ಸೇವೆ ನಮ್ಮದಾಗುತ್ತದೆ ಎಂದು ನಿವೃತ್ತ ಪೋಲಿಸ್ ಉಪನಿರೀಕ್ಷಕಿ ಡಿ. ಚಾಮುಂಡೇಶ್ವರಿ ಅವರು ಹೇಳಿದರು.
ನಗರದ ಜಿಲ್ಲಾ ಸಶಸ್ತ್ರ ಮೀಸಲು ಪೋಲಿಸ್ ಪಡೆಯ ಕವಾಯತು ಮೈದಾನದಲ್ಲಿ ಜಿಲ್ಲಾ ಪೋಲಿಸ್ ಇಲಾಖೆ ಆಯೋಜಿಸಿದ ಪೋಲಿಸ್ ಧ್ವಜ ದಿನಾಚರಣೆ ಮತ್ತು ನಿವೃತ್ತರ ಸೇವಾ ಸ್ಮರಣೆ ಹಾಗೂ ಗೌರವ ಸಮರ್ಪಣೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಮಾತನಾಡಿದರು.ಪೋಲಿಸ್ ಇಲಾಖೆ ಒಂದು ಕುಟುಂಬವಿದ್ದಂತೆ, ಕೆಳಹಂತದ ಅಧಿಕಾರಿ ಸಿಬ್ಬಂದಿಗಳು ಆಕಸ್ಮಿಕವಾಗಿ ಮಾಡುವ ತಪ್ಪುಗಳನ್ನು ಮನ್ನಿಸಿ, ಹಿರಿಯ ಅಧಿಕಾರಿಗಳು ಮಾರ್ಗದರ್ಶನ ನೀಡಬೇಕು. ಇಲಾಖೆಯಿಂದ ಸಿಗುವ ಪ್ರೋತ್ಸಾಹ, ಗೌರವ, ಪ್ರೀತಿ, ವಿಶ್ವಾಸಗಳು ಸಿಬ್ಬಂದಿಗಳಲ್ಲಿ ಆತ್ಮವಿಶ್ವಾಸ ತುಂಬಿ ಅವರ ವೃತ್ತಿಪರತೆಯನ್ನು ಹೆಚ್ಚಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಪೋಲಿಸ್ ಇಲಾಖೆಯಲ್ಲಿ ಸಾಕಷ್ಟು ಆಧುನಿಕತೆ ಬಂದಿದೆ. ಅಪರಾಧ ಪತ್ತೆ, ಇಲಾಖೆಯಲ್ಲಿ ಚೈತನ್ಯ, ವೃತ್ತಿ ಕೌಶಲ್ಯ ತುಂಬಲು ವಿಜ್ಞಾನ ತಂತ್ರಜ್ಞಾನ ಬಳಸಲಾಗುತ್ತಿದೆ. ಎಲ್ಲರೂ ಹೊಸತನ್ನು ಅಳವಡಿಸಿಕೊಂಡು ಸುಗಮವಾಗಿ ಮತ್ತು ಅಕ್ಕರೆಯಿಂದ ತಮ್ಮ ಕೆಲಸಕಾರ್ಯಗಳನ್ನು ನಿರ್ವಹಿಸುವ ವಾತಾವರಣ ಎಲ್ಲಾ ಪೆÇಲೀಸ್ ಕಚೇರಿ ಮತ್ತು ಠಾಣೆಗಳಲ್ಲಿ ಮೂಡಬೇಕೆಂದು ಅವರು ಹೇಳಿದರು.

ನಮ್ಮ ಪೋಲಿಸ್ ಇಲಾಖೆಯಲ್ಲಿ ನಾವೆಲ್ಲರೂ ಒಂದು ಕುಟುಂಬದಂತೆ ಬದುಕುತ್ತಿದ್ದೇವೆ. ಒಬ್ಬರಿಗೆ ನೋವಾದರೆ ಇನ್ನೊಬ್ಬರು ಅದಕ್ಕೆ ಸಹಾಯಕವಾಗಿ ಸ್ಪಂದಿಸುವ ಮನೋಭಾವ ನಮ್ಮೆಲ್ಲರದು. ಎಲ್ಲಾ ರೀತಿಯ ಅಡೆತಡೆಗಳು ಇಲಾಖೆಯಲ್ಲಿ ಬರುತ್ತದೆ. ಅವುಗಳಿಗೆ ತಗ್ಗದೇ ಬಗ್ಗದೇ, ಹೆದರದೇ ಕರ್ತವ್ಯವನ್ನು ನಿರ್ವಹಿಸಬೇಕಾಗುತ್ತದೆ ಎಂದು ಡಿ.ಚಾಮುಂಡೇಶ್ವರಿ ಅವರು ಹೇಳಿದರು.

ನಾವು ಶಿಸ್ತಿನಿಂದ ನಡೆದರೆ ಅಧಿಕಾರಿಗಳು ನಮ್ಮನ್ನು ಗೌರವಿಸುತ್ತಾರೆ. ಮತ್ತು ಸಾರ್ವಜನಿಕರು ಸಹ ನಮ್ಮನ್ನು ಗೌರವಿಸುತ್ತಾರೆ. ಹಾಗೂ ನಮ್ಮ ಕುಟುಂಬ ನಮ್ಮನ್ನು ಬೆಳೆಸುತ್ತವೆ. ಅದಕ್ಕಾಗಿ ಯಾರಿಗೂ ಹೆದರಿ ಕರ್ತವ್ಯವನ್ನು ನಿರ್ವಹಿಸಬೇಕಾಗಿಲ್ಲ. ನಮ್ಮನ್ನು ಪ್ರಮಾಣಿಕತೆ ಕಾಪಾಡುತ್ತದೆ. ನಾವು ತೆಗೆದುಕೊಳ್ಳುವ ಸಂಬಳಕ್ಕೆ ಸಮನಾಗಿ ದುಡಿಯುವದರಿಂದ, ನಮ್ಮ ಪರಿಶ್ರಮ ಇಲಾಖೆಗೆ ಸಾರ್ಥಕತೆಯನ್ನು ತರುತ್ತದೆ. ಎಲ್ಲಾ ರೀತಿಯ ಸೇವೆಯನ್ನು ಸಹ ಇಲಾಖೆಯಲ್ಲಿ ಮಾಡಿ ಹಲವಾರು ಅಧಿಕಾರಿ, ಸಿಬ್ಬಂದಿಗಳು ನಿವೃತ್ತಿಯಾಗಿದ್ದಾರೆ ಎಂದು ಡಿ.ಚಾಮುಂಡೇಶ್ವರಿ ಅವರು ತಿಳಿಸಿದರು.

ಇಲಾಖೆಗೆ ಬಂದ ಮೇಲೆ ಇಲಾಖೆಯನ್ನು ಬೈಯುವುದು, ಹೀಯಾಳಿಸುವುದು ಅದು ನೌಕರರಿಗೆ ಶೋಭೆಯಲ್ಲ, ಒಂದು ಸಲ ನಮ್ಮ ಪಾಲಿಗೆ ಬಂದಿದ್ದು ಪಂಚಾಮೃತವೆಂದು ನಾವು ನಮ್ಮ ಆತ್ಮಸಂತೋಷದಿಂದ ಸ್ವೀಕರಿಸದರೆ, ಅದು ನಮ್ಮ ಜೀವನದ ವೈಭವವಾಗುತ್ತದೆ. ಮತ್ತು ಇಲಾಖೆಗೆ ಕಳಸವಾಗುತ್ತದೆ. ಪೋಲಿಸ್ ಇಲಾಖೆಯಲ್ಲಿ ಹಲವಾರು ರೀತಿಯ ಆಧುನಿಕ ತಂತ್ರಜ್ಞಾನ, ಅಪರಾಧ ಪತ್ತೆ ಹಚ್ಚುವ ಹಲವಾರು ವಿಧಾನಗಳು ಈಗಾಗಲೇ ಆವಿಷ್ಕಾರ ಮಾಡಿ ಅಳವಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಎಸ್.ಪಿ ಅವರು ಸೇರಿದಂತೆ ಎಲ್ಲ ಹಿರಿಯ ಅಧಿಕಾರಿಗಳನ್ನು ಇಲಾಖೆಯ ಇತರ ಅಧಿಕಾರಿ, ಸಿಬ್ಬಂದಿ ವರ್ಗದವರು ತಂಬಾ ಗೌರವದಿಂದ ಕಾಣುತ್ತಾರೆ. ಸಿಬ್ಬಂದಿ ಹಾಗೂ ಅಧಿಕಾರಿ ವರ್ಗದವರು ಸಮಯ ಸಂದರ್ಭಕ್ಕೆ ಅನುಗುಣವಾಗಿ ತಿಳಿಯದೇ ಆಕಸ್ಮಿಕವಾಗಿ ಮಾಡಿದಂತಹ ಕೆಲವು ಸಣ್ಣ ಪುಟ್ಟ ತಪ್ಪುಗಳನ್ನು ಉದಾರ ಮನಸ್ಸಿನಿಂದ ಮನ್ನಿಸುವುದೇ ದೊಡ್ಡ ಕೊಡುಗೆಯಾಗಿದೆ ಎಂದು ಅವರು ತಿಳಿಸಿದರು.

ಒಬ್ಬ ಕಟ್ಟ ಕಡೆಯ ಪೊಲೀಸ್ ಕಾನ್ಸಟೇಬಲನಿಂದ ಹಿಡಿದು ತಮ್ಮ ಆದೀನದಲ್ಲಿರುವ ಅಧಿಕಾರಿ ವರ್ಗದವರ ಸಮಸ್ಯೆಗಳನ್ನು ಆಲಿಸಿ ಇಲಾಖೆಯಲ್ಲಿ ಕಂಡು ಬರುವ ಸಣ್ಣ ಪುಟ್ಟ ಅವರ ತೊಂದರೆಗಳನ್ನು ಪರಿಹರಿಸಿ, ಅವರ ಎಲ್ಲಾ ಸಮಸ್ಯೆಗಳಿಗೆ ತಾವು ಸ್ಪಂದಿಸಬೇಕು ಎಂದು ಅವರು ಹಿರಿಯ ಅಧಿಕಾರಿಗಳಲ್ಲಿ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಅವರು ಸ್ವಾಗತಿಸಿ ಪೋಲಿಸ್ ಕಲ್ಯಾಣ ಚಟುವಟಿಕೆಗಳ ಕುರಿತು ವರದಿ ವಾಚನ ಮಾಡಿದರು. ಎಸ್‍ಆರ್‍ಎಸ್‍ಐಗಳಾದ ವೈಎಂ ದೊಡ್ಡಮನಿ ಹಾಗೂ ಪಿ.ಎಚ್.ಡಾವಣಗೇರಿ ಅವರು ಕಾರ್ಯಕ್ರಮ ನಿರೂಪಿಸಿದರು. ಡಿಎಆರ್ ಡಿಎಸ್‍ಪಿ ಡಿ.ಎಸ್.ಧನಗರ ಅವರು ವಂದಿಸಿದರು.

ನಿವೃತ್ತರಿಗೆ ಗೌರವ ಸಮರ್ಪಣೆ: ಪೊಲೀಸ್ ಇಲಾಖೆಯಲ್ಲಿ ದೀಘಾವದಿಗೆ ಸೇವೆ ಸಲ್ಲಿಸಿ ನಿವೃತ್ತರಾದ ಪೊಲೀಸ್ ಅಧಿಕಾರಿ ಸಿಬ್ಬಂದಿಗಳಾದ ಪಿಎಸ್‍ಐ ಎಂ.ಹೆಚ್.ಮುಂದಿನಮನಿ, ಪಿಎಸ್‍ಐ ಆರ್.ಬಿ.ಹಳ್ಳಿ, ಮಹಿಳಾ ಪಿಎಸ್‍ಐ ಕೆ.ವಿ ವಾಲಿಕಾರ ಹಾಗೂ ಎಎಸ್‍ಐಗಳಾದ ಎಸ್.ಐ.ಗದಗ, ಎಸ್.ಸಿ.ಗಂಡಲಾಟಿ, ಹೆಚ್.ಟಿ.ಬಂಡಿವಡ್ಡರ, ಐ.ಡಿ.ಭಾವಿಮನಿ, ಎಂ.ಆರ್.ಗೋಲಂದಾಜ್, ವೈ.ಎಸ್.ಮೇಟಿ, ಹೆಚ್.ಜೆ.ಜಾಧವ ಮತ್ತು ಸಿಹೆಚ್‍ಸಿಗಾಳದ ಡಿ.ವೈ.ಮುಮ್ಮಿಗಟ್ಟಿ, ಎನ್.ವಾಯ್.ಭರಮನ್ನವರ, ಯು.ಆರ್.ಮೆಟ್ಟಿನ, ಎ.ಎನ್.ಚಿಕಣಿ, ಎಂ.ಎಸ್.ಕೊಟಂಕಿ. ಅವರಿಗೆ ಸನ್ಮಾನಿಸಿ, ಗೌರವಿಸಲಾಯಿತು.

ಗೌರವವಂದನೆ: ಪೊಲೀಸ್ ಧ್ವಜ ದಿನಾಚರಣೆ ಅಂಗವಾಗಿ ಪರೇಡ್ ಕಮಾಂಡರ್ ಡಿಎಆರ್ ಆರ್.ಪಿ.ಐ.ಗಳಾದ ಎಫ್.ಆರ್.ಡೊಕ್ಕಣ್ಣನವರ ಮತ್ತು ಆರ್.ಎಸ್. ಗುಡನಟ್ಟಿ ಮುಂದಾಳತ್ವದಲ್ಲಿ ಆರ್ ಎಸ್‍ಐ ವಾಸು ರಕ್ಷೇದ ನೇತೃತ್ವದ 1ನೆ ತಂಡ, ಧಾರವಾಡ ಗ್ರಾಮೀಣ ಪೊಲೀಸ್ ಠಾಣೆ ಪಿ.ಎಸ್.ಐ. ಸುನೀಲಕುಮಾರ ಎಂ.ಎಲ್ ನೇತೃತ್ವದ 2ನೇ ತಂಡ ಹಾಗೂ ಎಸ್‍ಪಿ ಕಚೇರಿಯ ನಿಸ್ತಂತು ವಿಭಾಗದ ಜಿಲ್ಲಾ ನಿಯಂತ್ರಣದ ಕೊಠಡಿಯ ಮಹಿಳಾ ಪಿಎಸ್‍ಐ ನಿರ್ಮಲಾ ಜಂಬಗಿ, ಡಿಎಆರ್ ಆರ್‍ಎಸ್‍ಐ ಮಂಜುನಾಥ ಕುರುಗೋಡಿ ನೇತೃತ್ವದ 4ನೇ ತಂಡದ ಸದಸ್ಯರು ಆಕರ್ಷಕ ಪಥ ಸಂಚಲನದ ಮೂಲಕ ಗೌರವ ವಂದನೆ ಸಲ್ಲಿಸಿದರು.

ಎಆರ್‍ಎಸ್‍ಐ ವೈ.ಎಫ್. ಭಜಂತ್ರಿ ಹಾಗೂ ಎಪಿಸಿ. ಸಾಗರ ಬಸರಿಕೋಡಿ ಅವರ ನೇತೃತ್ವದ ಜಿಲ್ಲಾ ಪೊಲೀಸ್ ಬ್ಯಾಂಡ ತಂಡವು ಆಕರ್ಷಕವಾಗಿ ಮತ್ತು ಸುಶ್ರಾವ್ಯವಾಗಿ ರಾಷ್ಟ್ರಗೀತೆ ಹಾಗೂ ಸಂಗೀತ ನುಡಿಸಿತು.

ಕಾರ್ಯಕ್ರಮದಲ್ಲಿ ಕೆಎಸ್‍ಐಎಸ್‍ಎಫ್ ಕಮಾಂಡೆಂಟ್ ಗುರುನಾಥ, ಸಿಇಎನ್ ಪೊಲೀಸ್ ಠಾಣೆಯ ಡಿಎಸ್‍ಪಿ ಶಿವಾನಂದ ಕಟಗಿ, ಧಾರವಾಡ ಗ್ರಾಮೀಣ ವೃತ್ತದ ಡಿಎಸ್‍ಪಿ ವಿನೋದ ಮುಕ್ತೆದಾರ ಸೇರಿದಂತೆ ಪೊಲೀಸ್ ಇಲಾಖೆಯ ಜಿಲ್ಲಾ ಮಟ್ಟದ ಎಲ್ಲಾ ಪೆÇಲೀಸ್ ಅಧಿಕಾರಿಗಳು, ನಿವೃತ್ತ ಪೆÇಲೀಸ್ ಅಧಿಕಾರಿಗಳು, ಪೋಲಿಸ್ ಕುಟುಂಬದ ಸದಸ್ಯರು, ಸಾರ್ವಜನಿಕರು ಭಾಗವಹಿಸಿದ್ದರು.



Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ