Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಚೇತಕ್ ಸ್ಕ್ರೀನ್ ಅವಾರ್ಡ್ಸ್: 24 ನಾಮನಿರ್ದೇಶನಗಳೊಂದಿಗೆ ಮುನ್ನಡೆ ಕಾಯ್ದುಕೊಂಡ 'ಧುರಂಧರ್';





















ಮಾರ್ಚ್ 24, 2026: ಇಂಡಿಯನ್ ಎಕ್ಸ್‌ ಪ್ರೆಸ್ ಸಮೂಹದ 'ಸ್ಕ್ರೀನ್ ಅಕಾಡೆಮಿ', ತನ್ನ ಬಹುನಿರೀಕ್ಷಿತ 'ಚೇತಕ್ ಸ್ಕ್ರೀನ್ ಅವಾರ್ಡ್ಸ್ ನ 31 ವಿಭಾಗಗಳ ಸಂಪೂರ್ಣ ನಾಮನಿರ್ದೇಶಿತರ ಪಟ್ಟಿ ಬಿಡುಗಡೆ ಮಾಡಿದೆ. ಈ ಪ್ರಶಸ್ತಿ ಪ್ರದಾನ ಸಮಾರಂಭವು ಏಪ್ರಿಲ್ 5 ರಂದು ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ 2025ರ ಸಾಲಿನಲ್ಲಿ ಬಿಡುಗಡೆಯಾದ ಅತ್ಯುತ್ತಮ ಹಿಂದಿ ಚಲನಚಿತ್ರಗಳು ಮತ್ತು ಓಟಿಟಿಯಲ್ಲಿ ಬಿಡುಗಡೆಯಾದ ಸಿನಿಮಾಗಳಿಗೆ ಪುರಸ್ಕಾರ ನೀಡಿ ಗೌರವಿಸಲಾಗುವುದು.








ಆದಿತ್ಯ ಧರ್ ಅವರ ಸ್ಪೈ ಥ್ರಿಲ್ಲರ್ ಸಿನಿಮಾ 'ಧುರಂಧರ್' ಒಟ್ಟು 24 ವಿಭಾಗಗಳಲ್ಲಿ ನಾಮನಿರ್ದೇಶನಗೊಳ್ಳುವ ಮೂಲಕ ಅಗ್ರಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಮೋಹಿತ್ ಸೂರಿ ಅವರ 'ಸೈಯಾರ' (17 ನಾಮನಿರ್ದೇಶನ) ಮತ್ತು ನೀರಜ್ ಘೈವಾನ್ ಅವರ 'ಹೋಮ್‌ ಬೌಂಡ್' (15 ನಾಮನಿರ್ದೇಶನ) ಸಿನಿಮಾಗಳಿವೆ. ಚಿತ್ರಮಂದಿರ ಹಾಗೂ ಓಟಿಟಿಯಲ್ಲಿ ಬಿಡುಗಡೆಯಾಗಿರುವ ಸಿನಿಮಾಗಳನ್ನು ಒಳಗೊಂಡಿರುವ ಈ ಪಟ್ಟಿಯು ಸಮಕಾಲೀನ ಭಾರತೀಯ ಸಿನಿಮಾಗಳ ವಿಸ್ತಾರ ಮತ್ತು ವಿಕಾಸವನ್ನು ಪ್ರತಿಬಿಂಬಿಸುತ್ತದೆ.

ಅರ್ಹತೆ ಆಧಾರಿತ ಆಯ್ಕೆ :

1995ರಲ್ಲಿ ಸ್ಥಾಪನೆಯಾದ 'ಸ್ಕ್ರೀನ್ ಅವಾರ್ಡ್ಸ್' ಸಂಪಾದಕೀಯ ಪ್ರಾಮಾಣಿಕತೆಗೆ ಹೆಸರುವಾಸಿಯಾಗಿದೆ. ಈ ಪ್ರಶಸ್ತಿ ಆಯ್ಕೆ ಪ್ರಕ್ರಿಯೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭವನ್ನು 50ಕ್ಕೂ ಹೆಚ್ಚು ಖ್ಯಾತ ಚಲನಚಿತ್ರ ಪರಿಣತರು, ಕಲಾವಿದರು ಮತ್ತು ಸಾಂಸ್ಕೃತಿಕ ಗಣ್ಯರನ್ನು ಒಳಗೊಂಡ ಸ್ವತಂತ್ರ, ಲಾಭರಹಿತ ಸಂಸ್ಥೆಯಾದ 'ಸ್ಕ್ರೀನ್ ಅಕಾಡೆಮಿ' ನಿರ್ವಹಿಸುತ್ತದೆ.

ಅಕಾಡೆಮಿಯ ಶೇ. 95 ಕ್ಕಿಂತ ಹೆಚ್ಚು ಸದಸ್ಯರು ಈ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದಾರೆ. ನಿಷ್ಪಕ್ಷಪಾತ ಮತ್ತು ತಟಸ್ಥತೆಯನ್ನು ಖಚಿತಪಡಿಸಿಕೊಳ್ಳಲು 'ಟ್ರಿಮ್ಡ್ ಮೀನ್ (ಒಲಿಂಪಿಕ್)' ವಿಧಾನ ಬಳಸಿ, ಪ್ರತಿ ವಿಭಾಗವನ್ನು ಸರಾಸರಿ 38-40 ಸದಸ್ಯರು ಮೌಲ್ಯಮಾಪನ ಮಾಡಿದ್ದಾರೆ. ಈ ಪ್ರಕ್ರಿಯೆಯನ್ನು ಮತ್ತಷ್ಟು ಬಲಪಡಿಸಲು, ಸದರ್ನ್ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಿನಿಮಾಟೋಗ್ರಫಿ ವಿಭಾಗದ ಪ್ರೊಫೆಸರ್ ಪ್ರಿಯಾ ಜೈಕುಮಾರ್ ಅವರು ಸದಸ್ಯರಿಗಾಗಿ ವಿವರವಾದ ಅಂಕಗಳ ಮಾರ್ಗಸೂಚಿ ಸಿದ್ಧಪಡಿಸಿದ್ದಾರೆ.

ಕಳೆದ 20 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ, ಚಲನಚಿತ್ರ ಪ್ರಶಸ್ತಿ ಸಮಾರಂಭವೊಂದು ನೇರ ಪ್ರಸಾರವಾಗುತ್ತಿದೆ. ಯೂಟ್ಯೂಬ್ ಜೊತೆಗಿನ ವಿಶೇಷ ಸಹಭಾಗಿತ್ವದೊಂದಿಗೆ ಈ ಪ್ರಶಸ್ತಿ ಪ್ರದಾನ ಸಮಾರಂಭವು ಜಾಗತಿಕ ಪ್ರೇಕ್ಷಕರಿಗೆ ಲಭ್ಯವಾಗಲಿದೆ. ಇದರ ಜೊತೆಗೆ ಸೋನಿ ಎಂಟರ್‌ ಟೈನ್‌ ಮೆಂಟ್ ಟೆಲಿವಿಷನ್ ಮತ್ತು ಸೋನಿ ಲೈವ್ ಚಾನೆಲ್‌ ಗಳಲ್ಲೂ ಪ್ರಶಸ್ತಿ ಪ್ರದಾನ ಸಮಾರಂಭ ನೇರ ಪ್ರಸಾರವಿರಲಿದೆ.


















Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ನದಾಫ್-ಪಿಂಜಾರ ಸಂಘ ತಾಲೂಕ ಘಟಕದ ಕಚೇರಿ ಉದ್ಘಾಟನೆ ಟ್ರಕ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ : ಅಕ್ಕ-ತಮ್ಮ ದಾರುಣ ಸಾವುತಾಲೂಕಾ ಅಧಿಕಾರಿಗಳ ಸಾಮಾನ್ಯ ಸಭೆ; ರೈತರಿಗೆ ಬೀಜ, ಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಿ: ಬಸವರಾಜ್ ಅಡವಿಮಠ್ ಸೂಚನೆಕೊಪ್ಪಳ ಕಾರ್ಯನಿರತ ಪತ್ರಕರ್ತರ ಸಂಘದ ಸಭೆನೂತನ ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ ಅವರಿಗೆ ಅಭಿನಂದಿಸಿದ ಲಕ್ಷ್ಮೀ  ಹೆಬ್ಬಾಳಕರ.ಸಿದ್ದರಾಮಯ್ಯ ಭೇಟಿ ಮಾಡಿ ಧನ್ಯವಾದ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ ಅವರಿಗೆ ಸತ್ಕರಿಸಿದ ಯುವ ಮುಖಂಡ  ರಾಹುಲ  ಜಾರಕಿಹೊಳಿ.ಸಚಿವ ಸತೀಶ ಜಾರಕಿಹೊಳಿ, ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ ಬೇಟಿ ಪರಸ್ಪರ ಶುಭ ಕೋರಿಕೆಗ್ಲೋಬಲ್ ಕ್ಯಾಪೆಬಿಲಿಟಿ ಸೆಂಟರ್‌ಗಳ ಬೆಳವಣಿಗೆಗೆ ಉತ್ತೇಜನ*ಶರಣು ಕಾರ್ಯಾಲಯ ಆರಂಭಿಸುವ ಮೂಲಕ ಬಡವರ ಕಣ್ಣಿರು ಒರೆಸುವ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ : ಬಳಗಾನೂರು ಶ್ರೀಗಳು,,*