Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಧರ್ಮೋ ರಕ್ಷಿತ ರಕ್ಷಿತಃ ; ಗವಿ ಸಿದ್ಧೇಶ್ವರ ಸ್ವಾಮಿ



ಬಳ್ಳಾರಿ. ಏ. 13..: ದೇವರು ಮನದಲ್ಲಿರಿಸಿಕೊಂಡು ಯಾವುದೇ ಕೆಲಸ, ದಾನ, ನಡೆ ನುಡಿಗಳನ್ನು ಶುದ್ಧ ಮನಸ್ಸಿನಿಂದ ಮಾಡಿದರೆ ಮಾತ್ರ ಜೀವನ ಸ್ವರ್ಗವಿದ್ದಂತೆರುತ್ತದೆ ಎಂದು ಶ್ರೀಕೊಪ್ಪಳ ಗವಿ ಮಠದ ಅಭಿನವ ಗವಿ ಸಿದ್ಧೇಶ್ವರ ಸ್ವಾಮಿ ಹೇಳಿದರು.

ಅವರು ತಾಲೂಕಿನ ಹಂದಿಹಾಳು ಗ್ರಾಮದ ಜಡೆಸಿದ್ಧೆಶ್ವರ ಮಠದ ಆವರಣದಲ್ಲಿ ಜಡೆಸಿದ್ಧೇಶ್ವರ ರಥೋತ್ಸವ ಹಿನ್ನೆಲೆ  ಪ್ರವಚನ ನೀಡುತ್ತಾ ಮಾತನಾಡಿ, ಧರ್ಮೋ ರಕ್ಷಿತ ರಕ್ಷಿತಹ ಎನ್ನುವಂತೆ  ಧರ್ಮದ ದಾರಿಯಲ್ಲಿ ನಡೆಯುವುದನ್ನು ಕಲಿಯಿರಿ ಅದು ನಿಮ್ಮನ್ನು ರಕ್ಷಿಸುತ್ತದೆ . ನಾನು ಎಂಬ ಅಹಂಕಾರ ಬಿಟ್ಟಲ್ಲಿ ಮಾತ್ರ ಜೀವನದಲ್ಲಿ ನೆಮ್ಮದಿ ಸುಖ ಶಾಂತಿಗಳನ್ನು ಕಾಣಲು ಸಾಧ್ಯ,. ಕಾಲ ಕೆಟ್ಟು ಹೋಗಿದೆ  ಎನ್ನುವ ಮನುಜರು ಮೊದಲು ಕೆಟ್ಟು ಹೋದ  ಅವರ ಮನಸ್ಸು, ಭಾವನೆಗಳ ದೃಷ್ಟಿಕೋನವನ್ನು ಬದಲಿಸಿಕೊಳ್ಳುವುದನ್ನು ಕಲಿಯಿರಿ ಎಂದು ಹೇಳಿದರು.

ಜೀವನದಲ್ಲಿ ಮನುಷ್ಯನಿಗೆ ದುಃಖ ಯಾಕೆ ಆಗುತ್ತದೆ ಎಂದರೆ ಇರುವುದನ್ನು ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳದಿರುವುದೇ ಮೂಲ ಕಾರಣವಾಗಿದೆ ಎಂದರು.

ಶ್ರೀಧರಗಡ್ಡೆ ಶಾಖಾ ವಿರಕ್ತ ಮಠದ ಮರಿ ಕೊಟ್ಟೂರು ಸ್ವಾಮಿ ಮಾತನಾಡಿದರು.

ಆಂಜನೇಯ ಸ್ವಾಮಿ ದೇವಾಲಯದಿಂದ ಜಡೆಸಿದ್ಧೆಶ್ವರ ಮಠದ ವರೆಗೆ ಶ್ರೀಕೊಪ್ಪಳ ಗವಿ ಮಠದ ಅಭಿನವ ಗವಿ ಸಿದ್ಧೇಶ್ವರ ಸ್ವಾಮಿ ಹಾಗೂ ಶ್ರೀಧರಗಡ್ಡೆ ಶಾಖಾ ವಿರಕ್ತ ಮಠದ ಮರಿ ಕೊಟ್ಟೂರು ಸ್ವಾಮಿ ಅವರನ್ನು ಭಜನೆ ಮೂಲಕ ಸ್ವಾಗತಿಸಲಾಯಿತು. ಕ್ಷೇತ್ರದ ಕಂಪ್ಲಿ ಶಾಸಕ  ಜೆ ಎನ್ ಗಣೇಶ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಗ್ರಾಮದ ಸಾರ್ವಜನಿಕರಿಗೆ ಶುಭ ಹಾರೈಸಿದರು. ಈ ಕಾರ್ಯಕ್ರಮದಲ್ಲಿ  ಊರಿನ ಹಿರಿಯರು, ಭಕ್ತ ಸಮೋಹ, ಸುತ್ತ ಮುತ್ತಲಿನ ಗ್ರಾಮಗಳಿಂದ ಬಂದ  ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ