ಬಳ್ಳಾರಿ. ಜೂ. 15: ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆಯು ಮಹಿಳೆಯರು ಆರ್ಥಿಕವಾಗಿ ಸಾವಲಂಬಿಯಾಗಿ ಸದೃಢಗೊಳ್ಳಲು ಹೊಲಿಗೆ ತರಬೇತಿ ಎಂಬ್ರಾಡಿಂಗ್ ತರಬೇತಿ ಸೇರಿದಂತೆ ಹಲವಾರು ಸ್ವಯಂ ಉದ್ಯೋಗ ತರಬೇತಿಗಳನ್ನು ನೀಡುತ್ತಿದೆ ಅದೇ ಪ್ರಕಾರವಾಗಿ ಇಂದು
ಗಾಂಧಿನಗರ ವಲಯದ ದೇವಿ ನಗರ ಕಾರ್ಯಕ್ಷೇತ್ರದ ಬಸವನ ಕುಂಟೆ ಬಸವೇಶ್ವರ ದೇವಸ್ಥಾನದ ಹತ್ತಿರ ಶ್ರೀ ಶಾಂತಿ ಜ್ಞಾನ ವಿಕಾಸ ಕೇಂದ್ರದಲ್ಲಿ ಸ್ವಉದ್ಯೋಗ ಪ್ರೇರಣಾ ಶಿಬಿರ ಕಾರ್ಯಕ್ರಮ ಹಮ್ಮಿಕೊಂಡಿದ್ದು ಈ ಕಾರ್ಯಕ್ರಮದಲ್ಲಿ ಸೀರೆ ಕುಚ್ಚು ಕಟ್ಟುವ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಇದರಿಂದ ಮಹಿಳೆಯರು ಸ್ವಉದ್ಯೋಗವನ್ನು ಕಂಡುಕೊಂಡು ಆರ್ಥಿಕವಾಗಿ ಸಬಲರಾಗಬಹುದು ಎಂದು ಸೀರೆ ಕುಚ್ಚು ಕಟ್ಟುವ ತರಬೇತಿ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು. ಸೀರೆ ಕುಚ್ಚು ಕಟ್ಟುವ ತರಬೇತಿಯನ್ನು ಮಂಜುಳಾ ಅವರು ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ತಾಲೂಕಿನ ಸಮನ್ವಯ ಅಧಿಕಾರಿ ಆಶಾ ಮತ್ತು ಸ್ಥಳೀಯ ಸೇವಾ ಪ್ರತಿನಿಧಿ ಭಾಗ್ಯಮ್ಮ ಹಾಗೂ ಕೇಂದ್ರದ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.