Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನೇಸರಗಿಯಲ್ಲಿ ಧರ್ಮಸ್ಥಳ ಸಂಘದ ಪೌಷ್ಟಿಕ ಆಹಾರ ಶಿಬಿರ




ನೇಸರಗಿ:  ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಸಹಯೋಗದಲ್ಲಿ ನೇಸರಗಿ ಗ್ರಾಮದ   ಶ್ರೀ ವೀರಭದ್ರೇಶ್ವರ ಕಲ್ಯಾಣ ಮಂಟಪದ ಶ್ರೀ ವೀರಭದ್ರೇಶ್ವರ  ಜ್ಞಾನವಿಕಾಸ ಕೇಂದ್ರದಲ್ಲಿ ಪೌಷ್ಟಿಕ ಆಹಾರ  ಮಾಹಿತಿ ಕಾರ್ಯಕ್ರಮ ನೆರವೇರಿತು.


      ಕಾರ್ಯಕ್ರಮದ ಉದ್ಘಾಟನೆಯನ್ನು  ಸರಕಾರಿ ಆಸ್ಪತ್ರೆ ವೈದ್ಯಾಧಿಕಾರಿ  ಡಾ. ಎ ಬಿ. ಜಮಾದಾರ,  ಊರಿನ ಹಿರಿಯರಾದ  ಮಲ್ಲಿಕಾರ್ಜುನ ಮದನಬಾವಿ , ತಾಲೂಕಿನ ಜ್ಞಾನವಿಕಾಸ ಸಮನ್ವೇಧಿಕಾರಿ ಶೈಲಾ ಜೆ,  ಮೇಲ್ವಿಚಾರಕರಾದ ಪ್ರವೀಣ್ ದೊಡ್ಡಮನಿ  ಮತ್ತು ಅನೇಕರು ದೀಪ  ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.


      ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ  ಡಾ. ಜಮಾದಾರ್ ಮಾತನಾಡಿ  ಪೌಷ್ಟಿಕ ಆಹಾರ ಸೇವನೆ,  ಬಳಕೆ, ಸಿರಿಧಾನ್ಯಗಳನ್ನು ಉಪಯೋಗಿಸುವುದರಿಂದ,ಪೌಷ್ಟಿಕ ಆಹಾರ ಸೇವನೆ, ನಿತ್ಯ ಜೀವನದಲ್ಲಿ ಸಿರಿಧಾನ್ಯ, ಹಸಿರು ತರಕಾರಿ ಸೊಪ್ಪು ಇದರಲ್ಲಿ ಸಿಗುವಂತ ವಿಟಮಿನ್  ಪೌಷ್ಠಿಕವಾಗಿ, ಪರಿಸರ ಮತ್ತು ನೈತಿಕವಾಗಿ ಒಳ್ಳೆಯದು. ಸಿರಿಧಾನ್ಯಗಳ ವಿಧಗಳು, ಅವುಗಳಿಂದ ಆರೋಗ್ಯಕ್ಕೆ ಇರುವ ಪ್ರಯೋಜನಗಳ ಬಗ್ಗೆ ಗರ್ಭಿಣಿಯರಿಗೆ, ವಯಸ್ಕರರಿಗೆ,  ವೃದ್ಧರಿಗೆ ಬಳಕೆ ಮಾಡುವ ಸಿರಿಧಾನ್ಯವು ಪೌಷ್ಟಿಕಾಂಶದ ಧಾನ್ಯಗಳಲ್ಲಿ ಒಂದಾಗಿದೆ, ಏಕೆಂದರೆ ಇದು ಕಬ್ಬಿಣ, ಪ್ರೋಟೀನ್, ಉತ್ಕರ್ಷಣ ನಿರೋಧಕಗಳು, ಆಹಾರದ ಫೈಬರ್, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ಫೋಲೇಟ್ - ಗರ್ಭಾವಸ್ಥೆಯಲ್ಲಿ ಹೆಚ್ಚು ಅಗತ್ಯವಿರುವ ಎಲ್ಲಾ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಇದರ ಹೆಚ್ಚಿನ ಕಬ್ಬಿಣದ ಅಂಶವು ಹಿಮೋಗ್ಲೋಬಿನ್ ಮಟ್ಟವನ್ನು ಸುಧಾರಿಸುತ್ತದೆ ಎಂದು ಹೇಳಿದರು.


  ಶಿಬಿರದಲ್ಲಿ ಸಂಘದ ಸದಸ್ಯರಿಂದ  ಪೌಷ್ಟಿಕ ಆಹಾರ  ತಯಾರಿಯನ್ನು ಪ್ರಾತ್ಯಕ್ಷಿತೆ ಮೂಲಕ ಮಾಡಲಾಯಿತು. ಅಧ್ಯಕ್ಷ ಸ್ಥಾನ ವಹಿಸಿದಂತ ಮಲ್ಲಿಕಾರ್ಜುನ ಮದನಬಾವಿ ಮಾತನಾಡಿ ಶ್ರೀ ಧರ್ಮಸ್ಥಳ  ಕ್ಷೇತ್ರದಿಂದ ನಡೆಯುವಂತ ಕೆಲಸ ಕಾರ್ಯಗಳ ಬಗ್ಗೆ ಮತ್ತು ಈಗಿನ ಆಹಾರಕ್ಕೂ ಹಿಂದಿನ ಆಹಾರ ಬಳಕೆ ವ್ಯತ್ಯಾಸಗಳ ಬಗ್ಗೆ ಹಾಗೂ ಮಕ್ಕಳ ಬೆಳವಣಿಗೆ ಬಗ್ಗೆ ಪೂಜ್ಯರು  ನೀಡುವಂತ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.


      ನಿರೂಪಣೆಯನ್ನು  ಜ್ಞಾನವಿಕಾಸ ಸಮನ್ವಯಾಧಿಕಾರಿ ಶೈಲಾ ಜೆ, ಸ್ವಾಗತವನ್ನು ಸೇವಾ ಪ್ರತಿನಿಧಿ  ನಾಗವೇಣಿ   ನೆರವೇರಿಸಿದರು. ವಂದನಾರ್ಪಣೆ  ಸೇವಾ ಪ್ರತಿನಿಧಿ ಶಾಂತಾ  ಹಾಗೂ ಗೌರಿ ಪಾರ್ವತಿ ಮತ್ತು  ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು.






Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ