ಬೆಳಗಾವಿ: ತಾಲೂಕು ವ್ಯಾಪ್ತಿಯ ಧಾಮಣೆ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ʻನಮ್ಮೂರು ನಮ್ಮ ಕೆರೆʼ ಕಾರ್ಯಕ್ರಮದ ಅನುದಾನದಲ್ಲಿ ಪುನಶ್ಚೇತನಗೊಳ್ಳಲಿರುವ ಮಾದರಿ ನಮ್ಮೂರು ನಮ್ಮ ಕೆರೆ ಹೂಳೆತ್ತುವ ಗಣೇಶ ಕೆರೆಯ ಕಾಮಗಾರಿಗೆ ಕೆರೆ ಸಮೀತಿ ಅಧ್ಯಕ್ಷರಾದ ಮಹಾದೇವ ಚೌಗಲೆ ಅವರು ಭೂಮಿ ಪೂಜೆ ನೆರವೇರಿಸಿದರು.
ತಾಲೂಕು ಯೋಜನಾಧಿಕಾರಿಗಳು ಪಾರ್ವತಿ ಅವರು ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸಮುದಾಯ ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ , ದೇವಸ್ಥಾನ ಜೀರ್ಣೋದ್ಧಾರ, ಸಮುದಾಯ ಭವನ ಕಟ್ಟಡಗಳಿಗೆ ಅನುದಾನ, ಸರ್ಕಾರಿ ಶಾಲೆಗಳಿಗೆ ಡೆಸ್ಕ್ ಬೆಂಚು ವಿತರಣೆ , ವೃತ್ತಿ ಪರ ಶಿಕ್ಷಣಕ್ಕೆ ವಿದ್ಯಾರ್ಥಿನಿಯರಿಗೆ ಶಿಷ್ಯವೇತನ, ರುದ್ರಭೂಮಿ ಅನುದಾನ, (ಚೇಂಬರ್)ಜನಮಂಗಲ ಕಾರ್ಯಕ್ರಮ , ನಿರ್ಗತಿಕರಿಗೆ ಮಾಶಾಸನ ವಿತರಣೆ , ಈ ರೀತಿಯಾಗಿ ಹಲವಾರು ಕಾರ್ಯಕ್ರಮಗಳ ಜೊತೆ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮವು ಅತೀ ಪ್ರಮುಖವಾಗಿದೆ. ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ರಾಜ್ಯದ ಅಭಿವೃದ್ದಿಗೆ ಸಹಕಾರಿಯಾಗಿದೆ ಎಂದರು.
ರಾಜ್ಯದಾದ್ಯಂತ ಸುಮಾರು 1000 ಕೆರೆಗಳನ್ನು ಪುನಃಶ್ಚೇತನಗೊಳಿಸಿದ್ದಾರೆ. ನಮ್ಮೂರು ನಮ್ಮ ಕೆರೆ ಯೋಜನೆಯಿಂದ ಅಂತರ್ಜಲ ಮಟ್ಟ ಹೆಚ್ಚಳವಾಗಿದೆ. ಪ್ರಾಣಿ ಪಕ್ಷಿಗಳಿಗೆ ಕುಡಿಯಲು ನೀರಿನ ವ್ಯವಸ್ಥೆ ಆಗಿದೆ, ಇದರಿಂದಾಗಿ ಸಮಾಜ ಸಂಕುಲಕ್ಕೆ ಒಳಿತು ಆಗಿರುತ್ತದೆ. ಜನನದಿಂದ ಮರಣದವರೆಗೂ ಎಲ್ಲಾ ಕಾರ್ಯಕ್ರಮಗಳಿಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಮಾಜಕ್ಕೆ ಒಳಿತು ಆಗುವಂತೆ ಕಾರ್ಯಕ್ರಮ ಅನುಷ್ಠಾನ ಮಾಡುತ್ತಾ ಬಂದಿದೆ. ಜೀವ ಜಲ ಉಳಿಸಿ ಮುಂದಿನ ಪೀಳಿಗೆಗೆ ತಿಳಿಸಬೇಕು ಎಂದು ಹೇಳಿದರು.
ಧಾರವಾಡ ಪ್ರಾದೇಶಿಕ ವಿಭಾಗದ ಕೆರೆ ಅಭಿಯಂತರರು ನಿಂಗರಾಜ ಅವರು ಮಾತನಾಡಿ, ಗಣೇಶ ಕೆರೆ ಹೂಳು ತೆಗೆಯಲು ಕೆರೆ ಸಮೀತಿ ಅವರು ಉತ್ತಮ ರೀತಿಯಲ್ಲಿ ಸಹಕಾರ ನೀಡಬೇಕು. ಕೆರೆಗೆ ತಂತಿ ಬೇಲಿ ಹಾಕಿಸಿ, ಮಾದರಿ ಕೆರೆಯನ್ನಾಗಿ ರಚನೆ ಮಾಡಿ, ಬಳಿಕ ಹಸ್ತಾಂತರ ಮಾಡಲಾಗುವುದು. ಬಳಿಕ, ಕೆರೆಯನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಬೇಕು ಎಂದು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ತಲಾಟಿ ಸಿದ್ದು, ಆನಂದ ಜಯಾನಾಚೆ, ಊರಿನ ಪ್ರಮುಖರು, ಗ್ರಾಮಸ್ಥರು, ಕೆರೆ ಸಮೀತಿ ಸರ್ವ ಸದಸ್ಯರು, ಒಕ್ಕೂಟದವರು , ಸೇವಾಪ್ರತಿನಿಧಿ ರೇಖಾ , ವಿ ಎಲ್ ಈ ಪ್ರತೀಕ, ಉಪಸ್ಥಿತರಿದ್ದರು. ಕೃಷಿ ಮೇಲ್ವಿಚಾರಕ ಮಹಾಂತೇಶ ನಿರೂಪಿಸಿ , ವಂದಿಸಿದರು.
