ಗದಗ,ಮೇ,೧೯ : : ಜ್ಯೇಷ್ಠ ಶುದ್ಧ ತೃತೀಯಾ ದಿನವಾದ ಜೂನ್ ೧೭ ರಂದು ಗದಗ ಬೆಟಗೇರಿ ರಜಪೂತ ಸಮಾಜದಿಂದ ರಾಷ್ಟ್ರ ವೀರ ಪುರುಷ ಮಹಾರಾಣಾ ಪ್ರತಾಪಸಿಂಹರ ಜಯಂತಿ ಆಚರಿಸಲು ರವಿವಾರದಂದು ಸಮಾಜದ ಪದಾಧಿಕಾರಿಗಳ ಸಭೆಯಲ್ಲಿ ನಿರ್ಧರಿಸಲಾಯಿತು. ಅದರಂಗವಾಗಿ ಗದಗ ಬೆಟಗೇರಿ ರಜಪೂತ ಸಮಾಜದ ಎಸ್.ಎಸ್.ಎಲ್.ಸಿ., ಪಿ.ಯು.ಸಿ. ಹಾಗೂ ಅದರ ನಂತರದ ಇನ್ನಿತರ ಕೋರ್ಸ ಗಳಲ್ಲಿ ಉತ್ತೀರ್ಣರಾದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಲು ನಿರ್ಧರಿಸಲಾಯಿತು. ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ. ಯಲ್ಲಿ ಉತ್ತೀರ್ಣರಾದವರು ಶ್ರೀ ಟಿ.ಜಿ. ಕಾಟೇವಾಲ ಹಾಗೂ ಇನ್ನಿತರ ಕೋರ್ಸಗಳಲ್ಲಿ ಉತ್ತೀರ್ಣರಾದವರು ಶ್ರೀ ಶೇಡುಸಿಂಗ್ ಜಮಾದಾರ ಅವರ ಕಡೆಗೆ ತಮ್ಮ ಅಂಕ ಪಟ್ಟಿಯ ಝರಾಕ್ಸ್ ಪ್ರತಿಗಳನ್ನು ನೀಡಿ ಹೆಸರು ನೋಂದಾಯಿಸಬೇಕೆಂದು ಗದಗ ಬೆಟಗೇರಿ ರಜಪೂತ ಸಮಾಜದ ಅಧ್ಯಕ್ಷ ಗಣೇಶಸಿಂಗ್ ಬ್ಯಾಳಿ ವಿನಂತಿಸಿದ್ದಾರೆ.
