Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕರ್ನಾಟಕ ಪುನಶ್ಚೇತನ ನಿಗಮದ ಅಡಿಯಲ್ಲಿ ವಸತಿಯ ಹಂಚಿಕೆ ತಾರತಮ್ಯ : ದಲಿತ ಸೇನೆ ಖಂಡನೆ




ಬಳ್ಳಾರಿ. ಆ.1 : ಜಿಲ್ಲೆಯ ಸಂಡೂರು ತಾಲೂಕಿನ ಬನ್ನಿಹಟ್ಟಿ ಗ್ರಾಮದ ಹರಿಜನ ಕಾಲೋನಿಯ ವಸತಿ ರಹಿತ ಫಲಾನುಭವಿಗಳಿಗೆ ಕಳೆದ 15 ದಿನಗಳ ಹಿಂದೆ ಗಣಿಪರಿಸರ ಪುನಶ್ಚೇತನ ನಿಯಮದಡಿಯಲ್ಲಿ ಗಣಿ ಪ್ರದೇಶದ ಗ್ರಾಮವಾದ ಬನ್ನಿಹಟ್ಟಿ ಗ್ರಾಮವು ಆಯ್ಕೆಯಾಗಿದ್ದು ವಸತಿಗಳ ಆಯ್ಕೆಯಾಗಿರುತ್ತದೆ. ಈ ವಸತಿ ಹಂಚಿಕೆ ಪ್ರಕ್ರಿಯೆಯನ್ನು ಸದರಿ ಗ್ರಾಮ ಪಂಚಾಯಿತಿಗೆ ವಹಿಸಲಾಗಿತ್ತು ಆದರೆ ವಸತಿ ಆಯ್ಕೆ ಪ್ರಕ್ರಿಯೆಯಲ್ಲಿ ಭಾರಿ ತಾರತಮ್ಯ ನಡೆಯುತ್ತಿದ್ದು  ಇದು ಮಾದಿಗ ಸಮಾಜದ ನಿಜವಾದ ಫಲಾನುಭವಿಗಳನ್ನು ಕಡೆಗಣಿಸಿರುವುದು ಖಂಡನೀಯ ಎಂದು ದಲಿತ ಸೇನೆಯ ಜಿಲ್ಲಾಧ್ಯಕ್ಷ,  ಸಂಡೂರು ತಾಲೂಕ ಅಧ್ಯಕ್ಷ ಮತ್ತು ಪದಾಧಿಕಾರಿಗಳು ಖಂಡಿಸಿದ್ದಾರೆ.


ಇದು ಮಾದಿಗ ಸಮುದಾಯಕ್ಕೆ  ಅನ್ಯಾಯ ಮಾಡಿದಂತಾಗಿದೆ ಬನ್ನಿಹಟ್ಟಿ ಗ್ರಾಮದಲ್ಲಿ  ಸುಮಾರು 30 ರಿಂದ 40 ಮನೆಗಳ ಮಾದಿಗ ಸಮುದಾಯದ ಕೇರಿ ಇದ್ದು ಇದರಲ್ಲಿ ಸುಮಾರು 40ಕ್ಕೆ ಹೆಚ್ಚು ವಸತಿ ರಹಿತ ಕುಟುಂಬಗಳಿದ್ದರೂ  ಮಾದಿಗ ಸಮಾಜಕ್ಕೆ ಒಂದೇ ಒಂದು ಫಲಾನುಭವಿಯನ್ನು  ಆಯ್ಕೆ ಮಾಡದೆ ಇರುವುದು ಮಾದಿಗ ಸಮುದಾಯವನ್ನೂ ನಿರ್ಲಕ್ಷ್ಯ ಮಾಡಿ ಕಡೆಗಣಿಸಲಾಗುತ್ತಿದೆ, ಇದು ಬಹಳ ಖಂಡನೀಯ ವಿಷಯವಾಗಿದೆ ಇದನ್ನು ಸರಿಪಡಿಸಿ ಮಾದಿಗ ಜನಾಂಗದಲ್ಲಿರುವ ವಸತಿ ರಹಿತ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಮನೆಗಳನ್ನು ನೀಡಬೇಕೆಂದು ಎಂದು ದಲಿತ ಸೇನೆಯ ಸಂಡೂರು ತಾಲೂಕು ಅಧ್ಯಕ್ಷರಾದ ರಾಜೇಶ್ ಹೆಗಡೆಯವರು ಅಗ್ರಹಿಸಿದ್ದಾರೆ.


ಈ ಸಂದರ್ಭದಲ್ಲಿ ದಲಿತಸೇನೆಯ ಜಿಲ್ಲಾಧ್ಯಕ್ಷ ಮುರಳಿ ಕೃಷ್ಣನವರು ಮಾತನಾಡಿ ಕರ್ನಾಟಕ ಪುನಃ ಚೇತನ್ ನಿಗಮದ ಅಡಿಯಲ್ಲಿ ಕೇವಲ ತಮ್ಮ ತಮ್ಮ ಅನುಕೂಲಸ್ತರನ್ನು ಮಾತ್ರ ಆಯ್ಕೆ ಮಾಡಿರುತ್ತಾರೆ, ಇದು ಖಂಡನೀಯ, ಈ ಪ್ರಕ್ರಿಯೆಯಲ್ಲಿ ಮಾದಿಗ ಸಮುದಾಯವನ್ನು ಕಡಿಗಣಿಸಿರುವುದು ದುರಂತ, ಕಾರಣ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಪಂದಿಸಿ ಆದಷ್ಟು ಬೇಗ ಈ ಲೋಪ ದೋಷವನ್ನು ಸರಿಪಡಿಸಿ ನ್ಯಾಯ ಒದಗಿಸದೆ ಹೋದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದೆಂದು ಎಚ್ಚರಿಕೆ ನೀಡಿದರು ತಿಳಿಸಿದರು.


 ಈ ಸಂದರ್ಭದಲ್ಲಿ ದಲಿತ ಸೇನೆಯ ಜಿಲ್ಲಾ ಕಾರ್ಯದರ್ಶಿಯಾದ ರತ್ನಯ್ಯ, ಸಂಡೂರು ತಾಲೂಕು ಉಪಾಧ್ಯಕ್ಷ ದೇವರಾಜ, ಕಾರ್ಯದರ್ಶಿ ಕಿರಣ್ ಕುಮಾರ್, ಹನುಮಂತ, ಮುಕ್ತಿಯರ್, ಹಾಗೂ ನಿರಾಶ್ರಿತರರಾದ ಮಲ್ಲಮ್ಮ, ಚೌಡಮ್ಮ ತಿಪ್ಪಮ್ಮ, ಈರಮ್ಮ , ಅಂಬಮ್ಮ,  ಗಾಳಮ್ಮ, ಗಂಗಮ್ಮ ಸೇರಿದಂತೆ ಇನ್ನೂ ಹಲವರು ಇದ್ದರು.








One attachment • Scanned by Gmail


Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ