Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಹಳ್ಳಿಯಲ್ಲಿ ಸಂಸ್ಕೃತಿ ಇಲಾಖೆಯ ‘ನಮ್ಮ ಹಳ್ಳಿ ಕಲಾ ಸಂಭ್ರಮ’

ಸಿರುಗುಪ್ಪ16:.: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಳ್ಳಿಗಳ ಮಟ್ಟದಲ್ಲಿ ಆಯೋಜಿಸುತ್ತಿರುವುದು ಪ್ರಶಂಸನೀಯ ಎಂದು ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ್ ಹೇಳಿದರು.
ತಾಲೂಕಿನ ಬೂದುಗುಪ್ಪ ಗ್ರಾಮದಲ್ಲಿ ಅಭಿನಯ ಕಲಾಕೇಂದ್ರ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಧನಸಹಾಯ ಯೋಜನೆಯಡಿ ನಿನ್ನೆ ರಾತ್ರಿ ಆಯೋಜಿಸಿದ್ದ ‘ನಮ್ಮ ಹಳ್ಳಿ ಕಲಾ ಸಂಭ್ರಮ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಘದ ಅಧ್ಯಕ್ಷ ಕೆ. ಜಗದೀಶ್ ಹೊಸ ನಾಟಕಗಳನ್ನು ರಚಿಸಿ ಗ್ರಾಮೀಣ ಭಾಗಗಳಲ್ಲಿ ನಿರಂತರ ಕಲಾಪ್ರದರ್ಶನ ಮಾಡುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರಾಜ್ಯಮಟ್ಟದ ಪ್ರಶಸ್ತಿ ಪುರಸ್ಕೃತರಾದ ಇಲಕಲ್ ಉಮಾರಾಣಿ, ಜಿಲಾನಿ ಭಾಷಾ ಹಾಗೂ ಭಾವಳ್ಳಿ ರೇಣುಕಾ ಅವರಂತಹ ಹಿರಿಯ ಕಲಾವಿದರನ್ನು ಗ್ರಾಮೀಣ ವೇದಿಕೆಗೆ ಆಹ್ವಾನಿಸಿರುವುದು ಸಂತಸದ ವಿಚಾರ ಎಂದರು.
ಹಿರಿಯ ಕಲಾವಿದೆ ಇಲಕಲ್ ಉಮಾ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಕರ್ನಾಟಕ ರಾಜ್ಯ ಬಯಲಾಟ ಕಲಾವಿದರ ಸಂಘದ ರಾಜ್ಯಾಧ್ಯಕ್ಷ ವಿಶ್ವನಾಥ ಸಾಹುಕಾರ, ರಂಗಭೂಮಿ ಕಲಾವಿದೆ ಭಾವಳ್ಳಿ ರೇಣುಕಾ ಹಾಗೂ ಕೂಡ್ಲಿಗಿ ದಿವ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಧ್ಯರಾತ್ರಿವರೆಗೆ ನಡೆದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನ ಸೆಳೆದವು. ಎಸ್‌.ಕೆ. ಸಮೀರ್ ಅವರ ಏಕವ್ಯಕ್ತಿ ನೃತ್ಯ, ಡಿ.ಎನ್. ರೇಣುಕಾ ಬಾವಳ್ಳಿ ಅವರ ರಂಗಗೀತೆ ಹಾಗೂ ಎಸ್‌.ಕೆ. ಜಿಲಾನಿ ಭಾಷಾ ತಂಡದ ಸಮೂಹ ನೃತ್ಯ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಉತ್ತನೂರು ರಾಮಣ್ಣ ಅವರ ಹಾರ್ಮೋನಿಯಂ ಸಾಥ್ ಹಳೆಯ ಹಾಡುಗಳ ನೆನಪು ಮೂಡಿಸಿತು.
ಗೀತಾ ಹೂಗಾರ ರಚಿಸಿದ ‘ಸಂಗಯ್ಯನ ಸಂಸಾರ’ ನಾಟಕದಲ್ಲಿ ಇಲಕಲ್ ಉಮಾ, ಕೂಡ್ಲಿಗಿ ದಿವ್ಯ ಹಾಗೂ ಬಿ. ಗುರುರಾಜರಾವ್ ಅಭಿನಯಿಸಿ ಪ್ರೇಕ್ಷಕರನ್ನು ರಂಜಿಸಿದರು. ಅತ್ತೆ–ಸೊಸೆಯರ ಸನ್ನಿವೇಶಗಳು ನಗೆಗಡಲಲ್ಲಿ ತೇಲಿಸಿದವು.
ಗಾಳಿ ಮಲ್ಲಯ್ಯ ವಿರಚಿತ ‘ಶ್ರೀ ರೇಣುಕಾ ಮಹಾತ್ಮೆ’ ಬಯಲಾಟಕ್ಕೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಬೂದುಗುಪ್ಪ ಎರಿಸ್ವಾಮಿ ಅವರ ಹಾರ್ಮೋನಿಯಂ ವಾದನ ಗಮನ ಸೆಳೆಯಿತು.
ರೇಣುಕಾ ಪಾತ್ರದಲ್ಲಿ ಹಿರೇಹಾಳು ಅನಿತಾ, ಮೇನಕಾ ಪಾತ್ರದಲ್ಲಿ ರಾರಾವಿ ನೂರ್ ಜಾ, ಜಮದಗ್ನಿ ಪಾತ್ರದಲ್ಲಿ ಶಂಕರ ಬಂಡೆ ಪೀರಸಾಬ್, ಪರಶುರಾಮ ಪಾತ್ರದಲ್ಲಿ ಬಸರಕೋಡು ಗಾದಿಲಿಂಗ ಹಾಗೂ ಕಾರ್ತ್ಯವೀರಾಜುನ ಪಾತ್ರದಲ್ಲಿ ಕೂರಿಗನೂರು ರಮೇಶ್ ಅಭಿನಯಿಸಿದರು. ತಬಲಾದಲ್ಲಿ ಗೋಟೂರು ಗಾದಿಲಿಂಗ ಹಾಗೂ ರಿದಂ ಪ್ಯಾಡ್‌ನಲ್ಲಿ ವಿಜಯಕುಮಾರ್ ಎಚ್. ವೀರಾಪುರ ಸಂಗೀತ ನೀಡಿದರು. ಶ್ರೀ ಬಸವೇಶ್ವರ ರಂಗಸಜ್ಜಿಕೆಯ ವೇಷಭೂಷಣಗಳು ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಿದವು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
೨೦ ವರ್ಷಗಳ ಹಿಂದೆ ಆದ ರಸ್ತೆ * ರಸ್ತೆ ತುಂಬೆಲ್ಲಾ ತಗ್ಗುದಿನ್ನಿಗಳದ್ದೇ ದರ್ಬಾರುಅದ್ದೂರಿ ಜನ್ಮದಿನ ಆಚರಣೆ ಬೇಡ; ಸೇವಾ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ: ಎ.ಎಸ್. ಪಾಟೀಲ ನಡಹಳ್ಳಿಶೈಕ್ಷಣಿಕ ಉತ್ಕೃಷ್ಟತೆ, ಸಂಶೋಧನೆ ಹಾಗೂ ನಾವೀನ್ಯತೆಗೆ ಒತ್ತು : ಡಾ. ಪ್ರಭಾಕರ ಕೋರೆ ಎಮ್ಮೆ ಹಾಲು ಪೂರೈಕೆಯಲ್ಲಿನ ಕುಸಿತ : ತೀವ್ರ ಕಳವಳ ವ್ಯಕ್ತಪಡಿಸಿದ ಬಾಲಚಂದ್ರ ಜಾರಕಿಹೊಳಿ ದಿ. 22-07-2026 ರಂದು ಶಾಸಕ ಬಾಬಾಸಾಹೇಬ ಪಾಟೀಲರ ಜನ್ಮದಿನದ ಪ್ರಯುಕ್ತ ರಕ್ತಧಾನ ಶಿಬಿರಆರೋಗ್ಯ ಕಾಳಜಿ ಮತ್ತು ಸುತ್ತ-ಮುತ್ತಲಿನ ಪರಿಸರ ಸ್ವಚ್ಛತಾ ಉಪನ್ಯಾಸದಲ್ಲಿ ಡಾ.ಜಗದೀಶ ಜಿಂಗಿ ಅಭಿಪ್ರಾಯಪ್ರತಿಭಾವಂತರಿಗೆ ಪುರಸ್ಕಾರ, ಬಸವ ಭವನ ನಿರ್ಮಾಣಕ್ಕೆ ವೇಗ: ವೀರಶೈವ ಲಿಂಗಾಯತ ಮಹಾಸಭಾ ನಿರ್ಧಾರಜಿಲ್ಲೆಯ ನರಗುಂದ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ನಡೆಸಿದ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ಪಿಂಚಣಿ ಸೇರಿದಂತೆ ಯಾವುದೇ ನಿವೃತ್ತಿ ಸೌಲಭ್ಯ ಸಿಗುವ ಮುನ್ನವೇ ಮುಖ್ಯೋಪಾಧ್ಯಾಯರ ನಿಧನ: ಎಸ್.ವಿ. ಸಂಕನೂರರ ತೀವ್ರ ಸಂತಾಪವಿಜಯನಗರ ಜಿಲ್ಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ಹಕ್ಕುಗಳ ರಕ್ಷಣೆಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ