Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಯುವ ಜನತೆ ಸಾಹಿತ್ಯದಲ್ಲಿ ತೊಡಗಿಕೊಳ್ಳುವದರಿಂದ ಸೃಜನಶೀಲತೆ: ಡಾ.ಬಸು ಬೇವಿನಗಿಡದ

ಧಾರವಾಡ: ಯುವ ಜನತೆ ಸಾಹಿತ್ಯದ ಕೃಷಿಯಲ್ಲಿ ತೊಡಗಿಕೊಳ್ಳುವದರಿಂದ ಸೃಜನಶೀಲತೆ ಹೆಚ್ಚಿಸಿಕೊಳ್ಳಲು ಸಹಾಯಕವಾಗಲಿದೆ  ಎಂದು  ಧಾರಾವಾಡ ಆಕಾಶವಾಣಿ ನಿವೃತ್ತ ನಿರ್ದೇಶಕ ಡಾ. ಬಸು ಬೇವಿನಗಿಡದ ಅಭಿಪ್ರಾಯಪಟ್ಟರು.


ಅವರು ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಮತ್ತು ಪ್ರೊ. ಎಸ್. ಎಸ್. ಪಟಗುಂದಿ ಕುಟುಂಬ  ಕರ್ನಾಟಕ ವಿದ್ಯಾವರ್ಧಕ ಸಂಘದ ಆಯೋಜಿಸಿದ  ವೇದಾ ಸಿದ್ದಾರ್ಥ ಪಟುಗುಂದಿ ಅವರು ಬರೆದ “ದ ಜರ್ನಿ ಆಫ್ ಮೈ ಸ್ಕೂಲ್ ಲೈಫ್” ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದರು.


ಪುಸ್ತಕವನ್ನು ಓದುವ ಬರೆಯುವ ಗುಣಮಟ್ಟ ಈಗಿನ ಕಾಲದಲ್ಲಿ ಕ್ಷೀಣಿಸುತ್ತಿದ್ದು, ವೇದಾ ಬರೆದಿರುವ ಪುಸ್ತಕವು ಅವಳ ಓದುವ ಬರೆಯುವ ಪ್ರತಿಭೆಯನ್ನು ಬಿಂಬಿಸುತ್ತದೆ. ಈ ಹಿನ್ನೆಲೆಯಲ್ಲಿ ಇಂತಹ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದಾಗ ಮಾತ್ರ ಓದುವ ಬರೆಯುವ ಅಭಿರುಚಿಯನ್ನು ವಿದ್ಯಾರ್ಥಿಗಳಲ್ಲಿ ಹೆಚ್ಚಿಸಲು ಸಾಧ್ಯವಾಗುತ್ತದೆ ಎಂದರು.


ಸಾಹಿತಿಗಳಾದ ಡಾ. ಮಲ್ಲಿಕಾರ್ಜುನ ಗುಮ್ಮಗೋಳ ಸಮಾಜದಲ್ಲಿ ಗಣ್ಯ ವ್ಯಕ್ತಿಗಳು ಅವರು ಅಧಿಕಾರದ ಸ್ಥಾನಮಾನಕ್ಕಿಂತಲೂ ಸಾಹಿತ್ಯಕ್ಕೆ ಅವರು ಕೊಟ್ಟ ಕೊಡುಗೆಯ ಮೇಲೆ ಸಮಾಜವು ಅವರನ್ನು ಗುರುತಿಸುತ್ತದೆ, ಸಮಾಜದಲ್ಲಿ ಅಧಿಕಾರಕ್ಕಿಂತ ಜ್ಞಾನಕ್ಕೆ ಹೆಚ್ಚಿನ ಮಹತ್ವ ಇರುತ್ತದೆ ಎಂದ ಅವರು ವೇದಾವಪುಸ್ತಕ ಬರೆದಿರುವ ಪ್ರತಿಭೆಯನ್ನು ನಾವೆಲ್ಲರು ಪ್ರೋತ್ಸಾಹಿಸಿ ವಿದ್ಯಾರ್ಥಿಗಳಲ್ಲಿ ಬರವಣಿಗೆಯ ಆಸಕ್ತಿಯನ್ನು ಬೆಳೆಸುವ ಅವಶ್ಯಕತೆ ಇದೆ ಎಂದರು.


ಹಿರಿಯ ಕೆಎಎಸ್ ಅಧಿಕಾರಿಗಳಾದ ಡಾ. ವಿಜಯಕುಮಾರ ತೊರಗಲ ಮಾತನಾಡಿ... ವೇದಾಳ ಪುಸ್ತಕವು ಸಣ್ಣ ಕಥೆಯ ರೂಪಕದಲ್ಲಿ ಬಂದರೂ ಸಹ ಅದು ಆಕೆಯ ೧೦ ವರ್ಷದ ಶಾಲೆಯ ಜೀವನದ ಅನುಭವ ಮತ್ತು ಮೌಲ್ಯಗಳನ್ನು ಸ್ಪಷ್ಟಪಡಿಸುತ್ತದೆ. ಇದೆಲ್ಲವೂ ಭವಿಷ್ಯದಲ್ಲಿ ವಿದ್ಯಾರ್ಥಿಗಳಿಗೆ ಸ್ಪೂರ್ತಿಯ ಸೆಲೆಯಾಗುವ ಲಕ್ಷಣಗಳು ಪೂರ್ತಿಯಾಗಿ ತೋರುತ್ತಿವೆ ಎಂದು ಹೇಳಿದರು.


ಗಜಾನನ ಮಣ್ಣಿಕೇರಿಯವರು ವೇದಾಳ ಪ್ರತಿಭೆಯನ್ನು ನೋಡಿ ಡಾ. ಡಿ. ಸಿ. ಪಾವಟೆ ಮತ್ತು ಮಮದಾಪುರ ಮಾಸ್ತರ ಅವರ ಮಮದಾಪುರ ಗ್ರಾಮದ ಮಣ್ಣಿನಲ್ಲಿರುವ ಡಿ. ಎನ್. ಎ ಗುಣವು ವೇದಾಳಲ್ಲಿ ಕಂಡುಬರುತ್ತದೆ ಎಂದು ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷರಾದ  ಸಂಗಮೇಶ ಬಬಲೇಶ್ವರ ಮಾತನಾಡಿ... ವೇದಾ ಈ ಪುಸ್ತಕ ಬರೆಯುವ ಮುಖಾಂತರ ತನ್ನಲ್ಲಿರುವ ಪ್ರತಿಭೆಯನ್ನು ಇಷ್ಟು ಚಿಕ್ಕ ವಯಸ್ಸಿನಲ್ಲಿ ಸ್ಪಷ್ಟವಾಗಿ ತೋರಿಸಿದ್ದಾಳೆ.  ಇಂದಿನ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವದರಿಂದ ಅವರ ಪ್ರತಿಭೆ ಗುರುತಿಸಲು ಸಾಧ್ಯ. ಈ ನಿಟ್ಟಿನಲ್ಲಿ ಬಾಲ ವಿಕಾಸ ಅಕಾಡೆಮಿಯು ವೇದಾ ಪಟಗುಂದಿಯವರಿಗಿದ್ದ ಪ್ರತಿಭೆಯನ್ನು ಪರಿಗಣಿಸಿ ಎಲ್ಲ ಮಕ್ಕಳಲ್ಲಿ ಸ್ಪೂರ್ತಿಯನ್ನುಂಟುಮಾಡಲು ವೇದಾಳೊಂದಿಗೆ ಸಂದರ್ಶನದ ಕಾರ್ಯಕ್ರಮವನ್ನು ರೂಪಿಸಿಲಾಗುವುದು ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ಶಂಕರ ಕುಂಬಿ, ಪ್ರೊ. ಸವಿತಾ ಸಿ. ಪಟಗುಂದ, ಕವಿವಿ ನಿವೃತ್ತ ಪ್ರಾಧ್ಯಾಪಕ  ಪ್ರೊ. ಎಸ್, ಎಸ್. ಪಟಗುಂದಿ, ಡಾ.ಮಲ್ಲಿಕಾರ್ಜುನ ಗುಮ್ಮಗೋಳ ,ಗಜಾನನ ಮನ್ನಿಕೇರಿ, ಕೃತಿಕಾರ್ತಿ ವೇದಾ ಪಟಗುಂದಿ ಸೇರಿದಂತೆ ಪಟಗುಂದಿ ಕುಟುಂಬ ವರ್ಗದ ಸದಸ್ಯರು ಹಾಜರಿದ್ದರು.

Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ