ಮಹಾಲಿಂಗಪುರ, ಜೂನ್ ೧೯: ಇದೇ ಜೂನ್ ೨೬ ರಂದು ನಡೆಯಲಿರುವ ಮೊಹರಂ ಹಬ್ಬವನ್ನು ಮಹಾಲಿಂಗಪುರ ನಗರದಲ್ಲಿ ಯಾವುದೇ ಜಾತಿ, ಧರ್ಮ ಹಾಗೂ ಭೇದಭಾವವಿಲ್ಲದೆ ಸಹೋದರತ್ವ, ಸೌಹಾರ್ದತೆ ಮತ್ತು ಶಾಂತಿಯುತ ವಾತಾವರಣದಲ್ಲಿ ಆಚರಿಸಬೇಕೆಂದು ಸಿಪಿಐ ಆರ್.ಆರ್. ಪಾಟೀಲ ಕರೆ ನೀಡಿದರು.
ನಗರ ಪೊಲೀಸ್ ಠಾಣೆಯಲ್ಲಿ ಮೊಹರಂ ಹಬ್ಬದ ಅಂಗವಾಗಿ ಆಯೋಜಿಸಲಾಗಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಮಹಾಲಿಂಗಪುರ ನಗರವು ಸದಾ ಸೌಹಾರ್ದತೆಗೆ ಹೆಸರಾಗಿದ್ದು, ಎಲ್ಲಾ ಸಮುದಾಯದ ಜನರು ಪರಸ್ಪರ ಸಹಕಾರದಿಂದ ಹಬ್ಬ-ಹರಿದಿನಗಳನ್ನು ಆಚರಿಸುತ್ತ ಬಂದಿದ್ದಾರೆ. ಈ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕರ ಮೇಲಿದೆ ಎಂದು ತಿಳಿಸಿದರು.
ನಂತರ ಮಾತನಾಡಿದ ಸ್ಥಳೀಯ ಪಿಎ ಕಿರಣ ಸತ್ತಿಗೇರಿ, ಮೊಹರಂ ಆಚರಣೆಯ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಎಲ್ಲರ ಕರ್ತವ್ಯವಾಗಿದೆ. ಯಾವುದೇ ರೀತಿಯ ವದಂತಿಗಳಿಗೆ ಕಿವಿಗೊಡದೆ, ಶಾಂತಿ ಹಾಗೂ ಸಹಕಾರದಿಂದ ಹಬ್ಬವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು. ಹಬ್ಬದ ವೇಳೆ ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಅವರು ತಿಳಿಸಿದರು.
ಸಭೆಯಲ್ಲಿ ವಿವಿಧ ಸಮಾಜಗಳ ಮುಖಂಡರು, ಮೊಹರಂ ಸಮಿತಿಯ ಪದಾಧಿಕಾರಿಗಳು, ಗಣ್ಯರು ಹಾಗೂ ಸಾರ್ವಜನಿಕರು ಭಾಗವಹಿಸಿ ಹಬ್ಬವನ್ನು ಶಾಂತಿಯುತವಾಗಿ ಆಚರಿಸುವ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.ನಗರದ ಸೌಹಾರ್ದತೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವ ಸಂಕಲ್ಪವನ್ನು ವ್ಯಕ್ತಪಡಿಸಿದರು.
ಇದೇ ವೇಳೆ ಮಹಮ್ಮದ ಹುಲಿಕಟ್ಟಿ, ಶಂಕರಗೌಡ ಪಾಟೀಲ, ಅಶೋಕ ಅಂಗಡಿ ಮಹಾಲಿಂಗಪ್ಪಾ ಹಡಪದ, ಪತ್ರಕರ್ತ ಮೀರಾ ತಟಾಗಾರ,ಜಯರಾಮ್ ಶೆಟ್ಟಿ ಅವರು ಮಾತನಾಡಿದರು.
ಇದೆ ಸಂಧರ್ಭದಲ್ಲಿ ವಿಷ್ಣು ಗೌಡ ಪಾಟೀಲ,ಬಾಬು ಸನದಿ , ಶೇಮ್ಸುದಿನ್ ತೇರದಾಳ, ರಸೂಲ ಕಾಲೇಕಾನ, ಜಬಿವುಲ್ಲಾ ಮುಲ್ಲಾ ,ಸಿರಾಜ್ ಮುಲ್ಲಾ, ಶ್ಯಾಮ ನದಾಫ್, ಮೈಹಿಬೂಬು ಮಲಾದಾರ, ಮೋಸಿನ ಅತ್ತಾರ , ಪ್ರಭು ಪಟ್ಟಣಶೆಟ್ಟಿ , ಬಸವರಾಜ ಜಂಬಗಿ , ಮೆಹಬೂಬ್ ಪೆಂಡಾರಿ , ಸಿಂಕದರ ಸಾಂಗ್ಲಿಕರ , ಪ್ರಲ್ಹಾದ ನೂಲಿ, ರಾಘು ಪವಾರ, ಉಸ್ಮಾನ್ ಪೆಂಡಾರಿ, ಸದಾಶಿವ ನಾವಿ, ಪೊಲೀಸ್ ಸಿಬ್ಬಂದಿಗಳಾದ ಜಗದೀಶ ದಳವಾಯಿ, ಭೀಮಶಿ ಹಡಪದ , ಬಸವರಾಜ ದೇಸಾಯಿ , ವಿರೇಶ ಮಸ್ಕಿ , ಮಂಜುನಾಥ ಸಣ್ಣಕ್ಕಿ, ಎಸ್ ಎಸ್ ಸರೂರ , ಪ್ರಶಾಂತ ಚಿಲ್ಲಾಪುರ, ಸೇರಿದಂತೆ ಇತರರಿದ್ದರು.