Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸ್ಪರ್ಧಾಳುಗಳು ಸೋಲು - ಗೆಲುವು ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕು : ನಾರಾ ಭರತ್ ರೆಡ್ಡಿ

ಜಿಕೆ ಫೌಂಡೇಶನ್ ಬಳ್ಳಾರಿ ಆಶ್ರಯದಲ್ಲಿ ಕ.ಕ.ವಿಭಾಗ ಮಟ್ಟದ ಪುರುಷರ, ಮಹಿಳೆಯರ ದೇಹದಾಡ್ಯ ಸ್ಪರ್ಧೆ, ಪವರ್ ಲಿಫ್ಟಿಂಗ್ ಸ್ಪರ್ಧೆ


ಬಳ್ಳಾರಿ: 23..ಸ್ಪರ್ಧೆಗಳಲ್ಲಿ ಸೋಲು, ಗೆಲುವು ಸಾಮಾನ್ಯ. ಆದರೆ, ಭಾಗವಹಿಸುವುದು ಮುಖ್ಯ, ಸ್ಪರ್ಧಾಳುಗಳು   ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕು. ಕೆ.ಕ.ಭಾಗದ ಯುವಕರಿಗೆ ಮತ್ತಷ್ಟು ಪ್ರೋತ್ಸಾಹ ನೀಡಲು ಜಿಕೆ ಫೌಂಡೇಶನ್  ವಿಜಯ್ ಅವರಿಗೆ ಅತ್ಯಂತ ಅಭಿನಂದನೆಗಳನ್ನು ಸಲ್ಲಿಸುವೆ ಎಂದು ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಹೇಳಿದರು.

ನಗರದ ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ಜಿಕೆ ಫೌಂಡೇಶನ್, ಬಳ್ಳಾರಿ ಫಿಟ್ನೆಸ್ ಅಸೋಸಿಯೇಶನ್ ಆಶ್ರಯದಲ್ಲಿ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಕ.ಕ.ವಿಭಾಗ ಮಟ್ಟದ ಪುರುಷರ, ಮಹಿಳೆಯರ ದೇಹದಾಡ್ಯ ಸ್ಪರ್ಧೆ, ಪವರ್ ಲಿಫ್ಟಿಂಗ್ ಸ್ಪರ್ಧೆಗಳಿಗೆ ಚಾಲನೆ ನೀಡಿ ಮಾತನಾಡಿದರು. ಕ್ರಿಕೆಟ್, ಫುಟ್ಬಾಲ್, ಟೆನ್ನಿಸ್, ಫುಟ್ಬಾಲ್ ಸೇರಿ ನಾನಾ ಕ್ರೀಡೆಗಳನ್ನು ಆಯೋಜಿಸುವುದು ಸಾಮಾನ್ಯ. ಆದರೆ, ಜಿ.ಕೆ.ಫೌಂಡೇಶನ್ ಅಧ್ಯಕ್ಷ ವಿಜಯ್ ಜಿ.ಕೆ.ಅವರು ಯುವಕರನ್ನು ಪ್ರೋತ್ಸಾಹಿಸಲು ಕ.ಕ. ವಿಭಾಗ ಮಟ್ಟದ ದೇಹದಾಡ್ಯ ಸ್ಪರ್ಧೆಗಳನ್ನು ಅಚ್ಚುಕಟ್ಟಾಗಿ ಆಯೋಜಿಸಿರುವುದು ಸಂತಸ ಮೂಡಿಸಿದೆ.

ಜಿ.ಕೆ.ಸ್ವಾಮಿ (ವಿಜಯ್) ಅವರು ಸಿಂಗಪುರ ನಲ್ಲಿ ಕೆಲಸ ಮಾಡಿ, ನಾನು ಹುಟ್ಟಿದ ನಾಡಿಗೆ ಏನಾದ್ರೂ ಮಾಡ್ಬೇಕು ಎನ್ನುವ ಹಂಬಲಲ್ಲಿದ್ದಾರೆ, ಅವರ ಕಾಳಜಿಗೆ ನನ್ನ ಸಂಪೂರ್ಣ ಸಹಕಾರ, ಬೆಂಬಲ ಇರಲಿದೆ. ಇಂದಿನ ಯುವಕರೇ ದೇಶದ ಮುಂದಿನ ಸ್ಫೂರ್ತಿ, ಜಿ.ಕೆ.ಸ್ವಾಮಿ ಅವರು ಯುವಕರಾಗಿದ್ದು, ಹೈ.ಕ.ಭಾಗದ ಯುವಕರಿಗೆ ಪ್ರಾಧಾನ್ಯತೆ ನೀಡಬೇಕು ಎನ್ನುವ ಉದ್ದೇಶದಿಂದ ಮುಂದೆ ಬಂದಿದ್ದಾರೆ. ಜಿಕೆ ಫೌಂಡೇಶನ್ ವತಿಯಿಂದ ಜಿಕೆ ಸ್ವಾಮಿ ಅವರು, ಬಡವರು, ಮಹಿಳೆಯರು, ವೃದ್ಧರ ಸೇವೆ ಜೊತೆಗೆ ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿ ಮಾದರಿಯಾಗಿದ್ದಾರೆ. ಅವರೊಂದಿಗೆ ನಾನಿರುವೆ ಎಂದರು. ಜಿ.ಕೆ.ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಜಿ.ಕೆ.ಸ್ವಾಮಿ ಅವರು ಮಾತನಾಡಿ, ಯುವಕರಿಗೆ ಪ್ರೋತ್ಸಾಹಿಸಲು ವೇದಿಕೆ ಕಲ್ಪಿಸಬೇಕು ಎನ್ನುವ ಉದ್ದೇಶ ನನ್ನದು, ನಮ್ಮ ಫೌಂಡೇಶನ್ ಆಶ್ರಯದಲ್ಲಿ ಇಲ್ಲಿವರೆಗೂ ಶಿಕ್ಷಣ, ಆರೋಗ್ಯ, ಸಾಮಾಜಿಕ ಕ್ಷೆತ್ರದಲ್ಲಿ ಸಾಕಷ್ಟು ಸೇವೆ ಮಾಡಿಕೊಂಡು ಬರುತ್ತಿದ್ದು, ಕ.ಕ.ವಿಭಾಗ ಮಟ್ಟದ  ದೇಹದಾಡ್ಯ ಸ್ಪರ್ಧೆಯನ್ನು ಆಯೋಜಿಸಿದ್ದು, ಬರುವ ದಿನಗಳಲ್ಲಿ ರಾಜ್ಯಮಟ್ಟದ ಸ್ಫರ್ಧೆ ಆಯೋಜಿಸುವ ಕನಸಿದೆ. ಎಲ್ಲರ ಸಹಕಾರ ಅತ್ಯಗತ್ಯ ಎಂದರು.

ಇದಕ್ಕೂ ಮುನ್ನ ಬೆಳಿಗ್ಗೆ ಕೊಪ್ಪಳ, ವಿಜಯನಗರ, ಕಲಬುರ್ಗಿ, ರಾಯಚೂರು, ಬೀದರ್, ಬಳ್ಳಾರಿ ಸೇರಿ ನಾನಾ ಕಡೆಯಿಂದ ಆಗಮಿಸಿದ್ದ ಸ್ಪರ್ಧಾಳುಗಳು, ತೂಕ, ಎತ್ತರ ಮಾಡಿಸಿಕೊಂಡು ತಮ್ಮ ಹೆಸರುಗಳನ್ನು ನೊಂದಾಯಿಸಿಕೊಂಡು, ಸ್ಪರ್ಧೆಗಳಲ್ಲಿ ಭಾಗವಹಿಸಲು ಸಿದ್ಧತೆ ನಡೆಸಿದರು.

ಈ ಸಂದರ್ಭದಲ್ಲಿ  ಪಾಲಿಕೆ ಮಾಜಿ ಮೇಯರ್ ರಾಜೇಶ್ವರಿ ಸುಬ್ಬರಾಯಡೂ, ಮುಖಂಡರಾದ ಲೋಕೇಶ್, ಕರಾಟೆ ಕಟ್ಟೆಸ್ವಾಮೀ, ಸುರೇಶ್ ಸೇರಿದಂತೆ ಇತರರಿದ್ದರು.

ತೀರ್ಪುಗಾರರಾಗಿ ಮಿಸ್ಟರ್. ಏಶಿಯಾ ಚಿನ್ನದ ಪ್ರಶಸ್ತಿ ವಿಜೇತ ಬಿ.ಮಾರುತೇಶ, ಗದಗನ ಅನಿಲ ಬೆಳವಣಿಕೆ, ಸೂರಜ್, ಶಶಿಕುಮಾರ್ ಅವರುಆಗಮಿಸಿದ್ದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
೨೦ ವರ್ಷಗಳ ಹಿಂದೆ ಆದ ರಸ್ತೆ * ರಸ್ತೆ ತುಂಬೆಲ್ಲಾ ತಗ್ಗುದಿನ್ನಿಗಳದ್ದೇ ದರ್ಬಾರುಅದ್ದೂರಿ ಜನ್ಮದಿನ ಆಚರಣೆ ಬೇಡ; ಸೇವಾ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ: ಎ.ಎಸ್. ಪಾಟೀಲ ನಡಹಳ್ಳಿಶೈಕ್ಷಣಿಕ ಉತ್ಕೃಷ್ಟತೆ, ಸಂಶೋಧನೆ ಹಾಗೂ ನಾವೀನ್ಯತೆಗೆ ಒತ್ತು : ಡಾ. ಪ್ರಭಾಕರ ಕೋರೆ ಎಮ್ಮೆ ಹಾಲು ಪೂರೈಕೆಯಲ್ಲಿನ ಕುಸಿತ : ತೀವ್ರ ಕಳವಳ ವ್ಯಕ್ತಪಡಿಸಿದ ಬಾಲಚಂದ್ರ ಜಾರಕಿಹೊಳಿ ದಿ. 22-07-2026 ರಂದು ಶಾಸಕ ಬಾಬಾಸಾಹೇಬ ಪಾಟೀಲರ ಜನ್ಮದಿನದ ಪ್ರಯುಕ್ತ ರಕ್ತಧಾನ ಶಿಬಿರಆರೋಗ್ಯ ಕಾಳಜಿ ಮತ್ತು ಸುತ್ತ-ಮುತ್ತಲಿನ ಪರಿಸರ ಸ್ವಚ್ಛತಾ ಉಪನ್ಯಾಸದಲ್ಲಿ ಡಾ.ಜಗದೀಶ ಜಿಂಗಿ ಅಭಿಪ್ರಾಯಪ್ರತಿಭಾವಂತರಿಗೆ ಪುರಸ್ಕಾರ, ಬಸವ ಭವನ ನಿರ್ಮಾಣಕ್ಕೆ ವೇಗ: ವೀರಶೈವ ಲಿಂಗಾಯತ ಮಹಾಸಭಾ ನಿರ್ಧಾರಜಿಲ್ಲೆಯ ನರಗುಂದ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ನಡೆಸಿದ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ಪಿಂಚಣಿ ಸೇರಿದಂತೆ ಯಾವುದೇ ನಿವೃತ್ತಿ ಸೌಲಭ್ಯ ಸಿಗುವ ಮುನ್ನವೇ ಮುಖ್ಯೋಪಾಧ್ಯಾಯರ ನಿಧನ: ಎಸ್.ವಿ. ಸಂಕನೂರರ ತೀವ್ರ ಸಂತಾಪವಿಜಯನಗರ ಜಿಲ್ಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ಹಕ್ಕುಗಳ ರಕ್ಷಣೆಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ