Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನರೇಗಾ ಹೆಸರು ಬದಲಾವಣೆ ವಿರುದ್ದ ಕಾಂಗ್ರೆಸ್ ಪ್ರತಿಭಟನಾ ಧರಣಿ

ಬಳ್ಳಾರಿ, ಜ.31..: ನಗರದ ಡಿಸಿ ಕಚೇರಿ ಎದುರಿನ ಮಹಾತ್ಮಾ ಗಾಂಧಿ ಪ್ರತಿಮೆ ಮುಂಭಾಗದಲ್ಲಿ ಇಂದು ಕಾಂಗ್ರೆಸ್ ಜಿಲ್ಲಾ ಘಟಕದಿಂದ ನರೇಗಾ ಹೆಸರು ಬದಲಾವಣೆ ವಿರುದ್ದ ನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ಲಂ ಪ್ರಶಾಂತ್ ನೇತೃತ್ವದಲ್ಲಿ    ತಲೆಗೆ ಟವಲ್ ಕಟ್ಟಿಕೊಂಡು   ಪ್ರತಿಭಟನಾ ಧರಣಿ ನಡೆಸಲಾಯ್ತು.

ಕೇಂದ್ರ ಸರ್ಕಾರದಿಂದ ದೇಶದ ಬಡ ಜನತೆಗೆ ಅವಶ್ಯವಾದ ಉದ್ಯೋಗವನ್ನು ನೀಡುವ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಹೆಸರನ್ನು ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಬದಲಾವಣೆ ಮಾಡಿರುವುದರ ವಿರುದ್ದ ಧರಣಿಯಲ್ಲಿ ಪಾಲ್ಗೊಂಡಿದ್ದ ಮುಖಂಡರು, ಕಾರ್ಯಕರ್ತರು ಘೋಷಣೆ ಕೂಗಿ. ನರೇಗಾ ಹೆಸರು ಬದಲಾವಣೆ ಮಾಡದಂತೆ ಆಗ್ರಹಿಸಲಾಯ್ತು.

ಈ ವೇಳೆ ಮಾತನಾಡಿದ ಮುಖಂಡರು. ದೇಶಕ್ಕೆ ಸ್ವಾತಂತ್ರ್ಯ ದೊರಕಿಸಲು ಮುಖ್ಯ ಕಾರಣರಾದ ಮಹಾತ್ಮಾ ಗಾಂಧಿಯ ಹೆಸರನ್ನೇ ತೆಗೆದು. ಅದನ್ನು ಜಿ. ರಾಮ್ ಜಿ ಎಂದು ಬದಲಾವಣೆ ಮಾಡಿರುವ ಬಿಜೆಪಿ ಧೋರಣೆಯನ್ನು ವಿರೋಧಿಸಲಾಯ್ತು.

ಯೋಜನೆಯಲ್ಲಿ ಆಗುತ್ತಿದ್ದ ಭ್ರಷ್ಟಾಚಾರ ತಡೆಯಲು "ವಿಕಸಿತ ಭಾರತ ಗ್ಯಾರೆಂಟಿ  ಫರ್ ರೋಜಗಾರ್ ಆಜೀವಿಕ  ಮಿಷನ್  ಗ್ರಾಮೀಣ" ಎಂದು ಬದಲು ಮಾಡಿದೆ ಎಂದು ಹೇಳುತ್ತಿದೆ ಬಿಜೆಪಿ. ಭ್ರಷ್ಟಾಚಾರ ತಡೆಯಲಿ ಆದರೆ ಮಹಾತ್ಮನ ಹೆಸರು ಬದಲಾವಣೆ ಯಾಕೆ ಬೇಕು. ಜೊತೆಗೆ ರಾಜ್ಯ ಸರ್ಕಾರಗಳಿಗೆ ಹೆಚ್ಚಿನ ಹೊರೆ ಮಾಡಿ, ಬಡವರ ಹೊಟ್ಟೆಗೆ ಕಂಟಕ ತರುವ ರೀತಿಯಲ್ಲಿ ಕಾಯ್ದೆ ತಿದ್ದುಪಡಿ ಅವಶ್ಯ ಇಲ್ಲ ಎನ್ನಲಾಯ್ತು.

ಪ್ರತಿಭಟನೆಯಲ್ಲಿ ಲಿಡ್ಕರ್ ಅಧ್ಯಕ್ಷ ಮುಂಡ್ರಿಗಿ ನಾಗರಾಜ್, ಮಾಧ್ಯಮ ವಕ್ತಾರ ವೆಂಕಟೇಶ್ ಹೆಗಡೆ, ಪ್ರಚಾರ ಸಮಿತಿಯ ಈರನಗೌಡ, ಮುಖಂಡರುಗಳಾದ ಎ.ಮಾನಯ್ಯ, ಕಮಲಮ್ಮ, ಹೆಚ್.ಸಿದ್ದೇಶ್, ಅಲುವೇಲು ಸುರೇಶ್ ಮೊದಲಾದವರು ಪಾಲ್ಗೊಂಡಿದ್ದರು
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
೨೦ ವರ್ಷಗಳ ಹಿಂದೆ ಆದ ರಸ್ತೆ * ರಸ್ತೆ ತುಂಬೆಲ್ಲಾ ತಗ್ಗುದಿನ್ನಿಗಳದ್ದೇ ದರ್ಬಾರುಅದ್ದೂರಿ ಜನ್ಮದಿನ ಆಚರಣೆ ಬೇಡ; ಸೇವಾ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ: ಎ.ಎಸ್. ಪಾಟೀಲ ನಡಹಳ್ಳಿಶೈಕ್ಷಣಿಕ ಉತ್ಕೃಷ್ಟತೆ, ಸಂಶೋಧನೆ ಹಾಗೂ ನಾವೀನ್ಯತೆಗೆ ಒತ್ತು : ಡಾ. ಪ್ರಭಾಕರ ಕೋರೆ ಎಮ್ಮೆ ಹಾಲು ಪೂರೈಕೆಯಲ್ಲಿನ ಕುಸಿತ : ತೀವ್ರ ಕಳವಳ ವ್ಯಕ್ತಪಡಿಸಿದ ಬಾಲಚಂದ್ರ ಜಾರಕಿಹೊಳಿ ದಿ. 22-07-2026 ರಂದು ಶಾಸಕ ಬಾಬಾಸಾಹೇಬ ಪಾಟೀಲರ ಜನ್ಮದಿನದ ಪ್ರಯುಕ್ತ ರಕ್ತಧಾನ ಶಿಬಿರಆರೋಗ್ಯ ಕಾಳಜಿ ಮತ್ತು ಸುತ್ತ-ಮುತ್ತಲಿನ ಪರಿಸರ ಸ್ವಚ್ಛತಾ ಉಪನ್ಯಾಸದಲ್ಲಿ ಡಾ.ಜಗದೀಶ ಜಿಂಗಿ ಅಭಿಪ್ರಾಯಪ್ರತಿಭಾವಂತರಿಗೆ ಪುರಸ್ಕಾರ, ಬಸವ ಭವನ ನಿರ್ಮಾಣಕ್ಕೆ ವೇಗ: ವೀರಶೈವ ಲಿಂಗಾಯತ ಮಹಾಸಭಾ ನಿರ್ಧಾರಜಿಲ್ಲೆಯ ನರಗುಂದ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ನಡೆಸಿದ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ಪಿಂಚಣಿ ಸೇರಿದಂತೆ ಯಾವುದೇ ನಿವೃತ್ತಿ ಸೌಲಭ್ಯ ಸಿಗುವ ಮುನ್ನವೇ ಮುಖ್ಯೋಪಾಧ್ಯಾಯರ ನಿಧನ: ಎಸ್.ವಿ. ಸಂಕನೂರರ ತೀವ್ರ ಸಂತಾಪವಿಜಯನಗರ ಜಿಲ್ಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ಹಕ್ಕುಗಳ ರಕ್ಷಣೆಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ