Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕಾಂಗ್ರೆಸ್ ಸರಕಾರ ಹಿಂದು ಸಮಾಜದ ಮೇಲೆ ಅನ್ಯಾಯ ಮಾಡುತ್ತಿದೆ : ಬಸನಗೌಡ ಪಾಟೀಲ

ಇಂಡಿ : ಕಾಂಗ್ರೆಸ್ ಸರಕಾರ ಮುಸ್ಲಿಂರನ್ನು ತುಷ್ಠಿಕರಿಣ ಮಾಡುತ್ತಿದ್ದು ಹಿಂದು ಸಮಾಜದ ಮೇಲೆ ಅನ್ಯಾಯ ಮಾಡುತ್ತಿದೆ. ೨೦೨೮ ಕ್ಕೆ ಹಿಂದು ಸಮಾಜ ಬೆಂಬಲಿತ ಪಕ್ಷ ಅಧಿಕಾರಕ್ಕೆ ಬರಲಿದ್ದು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥರ ಮಾದರಿಯಲ್ಲಿ ಕರ್ನಾಟಕ ರಾಜ್ಯದಲ್ಲಿಯೂ   ಜೆಸಿಬಿ ಆಡಳಿತ ಸದ್ದು ಮಾಡಲಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲರು ಹೇಳಿದರು. 
 ತಾಲೂಕಿನ ಸುಕ್ಷೇತ್ರ ಬೊಳೆಗಾಂವ ಗ್ರಾಮದ ಶ್ರೀ ಮಾರುತೇಶ್ವರ ದೇವರ ನೂತನ ದೇವಸ್ಥಾನದ ವಾಸ್ತು ಶಾಂತಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಸಮಾರಂಭದಲ್ಲಿ ಮಾತನಾಡಿದರು. 
ರಾಜ್ಯ ಸರಕಾರ ಗ್ಯಾರಂಟಿ ಹೆಸರಿನಲ್ಲಿ ಅಭಿವೃದ್ದಿ ಮಾಡದೇ ಕಾಲಹರಣ ಮಾಡುತ್ತಿದೆ ಎಂದರು. ಇಂಡಿ ಮತಕ್ಷೇತ್ರದಲ್ಲಿ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಜನರ ಭಾವನೆ ಬೇರೆ ಕಡೆ ತಿರುಗಿಸಲು ಇಂಡಿ ಜಿಲ್ಲೆ ಮಾಡುವದಾಗಿ ಹೇಳುತ್ತಿದ್ದಾರೆ. ಮೊದಲು ಅಭಿವೃದ್ದಿ  ರಸ್ತೆ ಮಾಡಿ ನಂತರ ಜಿಲ್ಲೆ ಮಾಡಿ ಎಂದರು. 
ಕೂಡಲ ಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಜಯ ಮೃತ್ಯುಂಜಯ ಶ್ರೀಗಳು ಮಾತನಾಡಿ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಹೋರಾಟದ ಬಗ್ಗೆ ಮುಂದಿನ ದಿನಗಳಲ್ಲಿ ಸೂಕ್ತ ಸಮಯ ನೋಡಿ ನಿರ್ಧಾರ ತೆಗೆದುಕೊಳ್ಳಲಾಗುವದು ಎಂದರು. ಪಂಚಮಸಾಲಿ ಸಮಾಜದ ಮಿಸಲಾತಿಗಾಗಿ ಸಮಾಜದ ಒಳತಿಗಾಗಿ ಯಾವದೇ ಹೋರಾಟಕ್ಕೂ ಸಿದ್ದ ಎಂದರು. ಬೋಳೆಗಾಂವ ಗ್ರಾಮದಲ್ಲಿ ಮೂರು ಕೋಟಿ ರೂ ವೆಚ್ಚದಲ್ಲಿ ಮಾರುತೇಶ್ವರ ನೂತನ ದೇವಸ್ಥಾನ ಕಟ್ಟಿರುವದು ಇಡಿ ರಾಜ್ಯಕ್ಕೆ  ಮಾದರಿ ಗ್ರಾಮಸ್ಥರ ಕಾರ್ಯ ಶ್ಲಾಘನೀಯ ಎಂದರು..
ಶಿಕ್ಷಕ ಆನಂದ ಮೊರೆ, ಬಿ.ಟಿ.ತಳವಾರ ಮಾತನಾಡಿದರು.
 
ಇಂಡಿ ತಾಲೂಕಾ ಪಂಚಮಸಾಲಿ ಸಮಾಜದ ಅಧ್ಯಕ್ಷ ವಿ.ಎಚ್.ಬಿರಾದಾರ, ಜಗದೀಶ ಕ್ಷತ್ರಿ  ವೇದಿಕಯ ಮೇಲಿದ್ದರು.
ಈರಣ್ಣ ಕಪ್ಪೆನವರ, ಅನೀಲ ಹೂಗಾರ, ಗಣಪತಿ ನಾಗಶೆಟ್ಟಿ, ಪರಮೇಶ್ವರ ಬಿರಾದಾರ, ಭೀಮರಾಯ ಹೂಣಚ್ಯಾಳ, ಸಂತೋಷ ಗೊಳ್ಳಗಿ ಮತ್ತಿತರಿದ್ದರು. 
ಇದಕ್ಕೂ ಮುಂಚೆ ಬಸನಗೌಡರಿಗೆ ಜೆಸಿಬಿ ಮೂಲಕ ಮಾಲಾರ್ಪಣೆ ಮಾಡಿ ನೂರಾರು ದ್ವಿ ಚಕ್ರ ವಾಹನದೊಂದಿಗೆ ಭಾರಿ ಮೆರವಣೆಗೆ ಮಾಡಲಾಯಿತು. 
ಫೋಟೊ ಕ್ಯಾಪ್ಸನ್ ೨೭ ಇಂಡಿ ೦೪ : ತಾಲೂಕಿನ ಸುಕ್ಷೇತ್ರ ಬೊಳೆಗಾಂವ ಗ್ರಾಮದ ಶ್ರೀ ಮಾರುತೇಶ್ವರ ದೇವರ ನೂತನ ದೇವಸ್ಥಾನದ ವಾಸ್ತು ಶಾಂತಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಸಮಾರಂಭದಲ್ಲಿ ಶಾಸಕ ಬಸನಗೌಡ ಪಾಟೀಲರು ಮಾತನಾಡಿದರು. 

 

 

Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಾರ್ವಜನಿಕ ನೆಮ್ಮದಿಯ ಬದುಕಿಗೆ ಪೊಲೀಸ್ ವರ್ಗ ಪ್ರಮಾಣಿಕ ಸೇವೆ ಸಲ್ಲಿಸುತ್ತಿದೆ : ಯಶವಂತರಾಯಗೌಡ ಪಾಟೀಲ ಕಾಂಗ್ರೆಸ್ ಸರಕಾರ ಹಿಂದು ಸಮಾಜದ ಮೇಲೆ ಅನ್ಯಾಯ ಮಾಡುತ್ತಿದೆ : ಬಸನಗೌಡ ಪಾಟೀಲಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಪ್ರವೇಶಕ್ಕಾಗಿ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಸುವರ್ಣ ಸೌಧದಲ್ಲಿ ವೀರಣ್ಣ ವಾಲಿ, ಅಲ್ಲಾವುದ್ದೀನ್ ಅನ್ಸಾರಿಗೆ ಸಚಿವ ಸತೀಶ ಜಾರಕಿಹೊಳಿ ಅವರಿಂದ ಸನ್ಮಾನ.ನಿವೃತ್ತ ಪ್ರಾಚಾರ್ಯ ಡಾ.ಚನ್ನಪ್ಪ ಕಟ್ಟಿ ಅವರಿಗೆ ಮೇ.೧ರಂದು ಅಭಿನಂದನಾ ಸಮಾರಂಭಶಿವಯೋಗಿ ನಗರದ ನಾಮಫಲಕ ಅಧಿಕೃತವಾಗಿ ಅನಾವರಣಮಹಿಳಾ ಮೀಸಲಾತಿ ಮಸೂದೆ ಜಾರಿಗೆ ತಡೆದ ಕಾಂಗ್ರೆಸ್ ಮಿತ್ರಪಕ್ಷಗಳ ವಿರುದ್ಧ ಮಹಿಳಾ ಮೋರ್ಚಾ ಆಕ್ರೋಶಭೋವಿ ವಡ್ಡರ ಸಂಘದ ಜಿಲ್ಲಾ ಅಧ್ಯಕ್ಷರಾಗಿ ವಿ. ರಾಮಾಂಜಿನೇಯಲು ಮುಂದುವರಿಕೆಕಂಪ್ಲಿಯಲ್ಲಿ ನೂತನ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಉದ್ಘಾಟನೆ33% ಮಹಿಳಾ ಮೀಸಲಾತಿಗೆ ಒತ್ತಾಯಿಸಿ ನಾರಿ ಶಕ್ತಿ ಫೋರಂ ಜನಾಕ್ರೋಶ ಜಾಥಾ