ಘಟಪ್ರಭಾ.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ (ರಿ) ಗೋಕಾಕ ಬೆಳಗಾವಿ ಜಿಲ್ಲೆ ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಟ್ರಸ್ಟ್ (ರಿ) ಬೆಳ್ತಂಗಡಿ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, 2127 ನೇ ಮಧ್ಯವರ್ಜನ ವ್ಯವಸ್ಥಾಪನ ಸಮಿತಿ ಘಟಪ್ರಭಾ ಹಾಗೂ ವಿವಿಧ ಸಂಘ ಸಂಸ್ಥೆಗಳು ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಮಧ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದ ನೆರವೇರಿದ್ದು, ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನುಕೆಂಪಯ್ಯಸ್ವಾಮಿ ಸ್ವಾಮಿ ಮಠದ ಡಾ||ಮಲ್ಲಿಕಾರ್ಜುನ ಮಹಾಸ್ವಾಮಿಗಳು ಗುಬ್ಬಲ್ಗುಡ್ಡ ಕೆಂಪಯ್ಯ ಸ್ವಾಮಿ ಮಠ ಪೂಜ್ಯರು ಆಶೀರ್ವಚನವನ್ನು ನೀಡಿ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೋಮಶೇಖರ್ ಬ ಮಗದುಮ್ ಅವರು ಎಲ್ಲಾ ನವ ಜೀವನಕ್ಕೆ ಕಾಲಿಟ್ಟ ಸದಸ್ಯರನ್ನು ಉದ್ದೇಶಿಸಿ ಶುಭ ಹಾರೈಕೆ ನುಡಿಗಳನ್ನು ಆಡಿದರು, ಡಾ. ಮೋಹನ್ ಭಸ್ಮೆ ತಹಶೀಲ್ದಾರರು ಹಾಗೂ ದಂಡಾಧಿಕಾರಿಗಳು , ಗೋಕಾಕ್ ,ರಜೆಯ ದಿನಗಳಲ್ಲಿಯೂ ಕೂಡ ನಾವು ಕೆಲಸ ಮಾಡುವಂತೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಮಾಡುತ್ತಿರುವ ಕೆಲಸಗಳನ್ನು ನೋಡಿ ನಾವು ಕೂಡ ನಮ್ಮ ಸಮಯವನ್ನು ಇಂತಹ ಕಾರ್ಯಕ್ರಮಗಳಿಗೆ ಮೀಸಲಿಡಬೇಕೆಂದು ಬಯಸುತ್ತೇವೆ ಎಂದು ಎಲ್ಲಾ ನವಜೀವನ ಬಂಧುಗಳನ್ನ ಉದ್ದೇಶಿಸಿ ಶುಭ ಹಾರೈಕೆ ನುಡಿಗಳನ್ನು ಆಡಿದರು.
ಎಚ್ ಆರ್ ಲವಕುಮಾರ್ ಗೌರವಾನ್ವಿತ ಜಿಲ್ಲಾ ನಿರ್ದೇಶಕರು ಜಿಲ್ಲೆ ಕಾರ್ಯಕ್ರಮವನ್ನು ಉದ್ದೇಶಿಸಿ ಯೋಜನೆಯ ಬೇರೆ ಬೇರೆ ಕಾರ್ಯಕ್ರಮಗಳ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡುವುದರ ಜೊತೆಗೆ ನವ ಜೀವನ ಸಮಿತಿಯ ಸದಸ್ಯರಿಗೆ ಶುಭ ಹಾರೈಕೆ ನುಡಿಗಳನ್ನು ಆಡಿದರು,ಪ್ರಥಮ ದರ್ಜೆ ಗುತ್ತಿಗೆದಾರರಾದ ಜಯಶೀಲ ಶೆಟ್ಟಿ,ಪುರಸಭೆ ಮುಖ್ಯಧಿಕಾರಿಗಳಾದ ಶ್ರೀಮತಿ ಎಂ ಎಸ್ ಪಾಟೀಲ್ , ಅಶೋಕ್ ಎಸ್ ಕುಲಗುಡ್ ಮಾಜಿ ಅಧ್ಯಕ್ಷರು ಜಿಲ್ಲಾ ಜನಜಾಗೃತಿ ವೇದಿಕೆ,ಮಾಜಿ ಗ್ರಾ ಪಂ ಅಧ್ಯಕ್ಷರಾದ ಡಿ ಎಂ ದಳವಾಯಿ,ಪಿ ಕೆ ಪಿ ಎಸ್ ಅಧ್ಯಕ್ಷರಾದ ಮುತ್ತಣ್ಣ ಹತ್ತರವಾಟ, ಸುನಿಲ್ ರಾ ನಾಯಿಕ ಮುಖಂಡರು ಘಟಪ್ರಭಾ, ಡಿ ಕೆ ಬಡಿಗೇರ್, ಮೋಹನ್ ರಾ ಪೇಟೆ, ದರೇಪ್ಪ ಮಗದುಮ್, ರಮೇಶ್ ಜನೆಗೇರಿ, ಗಣೇಶ ಗಾಣಿಗ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರು , ಕಾರ್ಯಕ್ರಮದಲ್ಲಿ ವ್ಯವಸ್ಥಾಪನಾ ಸಮಿತಿಯ ಸರ್ವ ಸದಸ್ಯರು ಅಧ್ಯಕ್ಷರು ಪದಾಧಿಕಾರಿಗಳು ಭಾಗವಹಿಸಿದ್ದರು, ಒಕ್ಕೂಟದ ಪದಾಧಿಕಾರಿಗಳು ಸದಸ್ಯರು ಮತ್ತು ಶೌರ್ಯ ವಿಪತ್ತು ಸ್ವಯಂಸೇವಕರು, ನವ ಜೀವನ ಸಮಿತಿಯ ಸದಸ್ಯರು,Vle ಗಳು ತಾಲೂಕಿನ ಎಲ್ಲಾ ಮೇಲ್ವಿಚಾರಕ ಶ್ರೇಣಿ ಸಿಬ್ಬಂದಿಗಳು ಕಚೇರಿ ಸಹಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ತಿಮ್ಮಶ್ ಎಂ ಸಿ ಕ್ಷೆತ್ರ ಯೋಜನಾಧಿಕಾರಿಗಳು ಸ್ವಾಗತಿಸಿದರು, ಮಾಲದಿನ್ನಿ ವಲಯದ ಮೇಲ್ವಿಚಾರಕರು ನಿರೂಪಿಸಿದರು ಮಲ್ಲಾಪುರ ವಲಯದ ಮೇಲ್ವಿಚಾರಕರು ವಂದಿಸಿದರು.