ಕೊಪ್ಪಳ ಜುಲೈ 14, ಕೆಪಿಟಿಸಿಎಲ್ ವತಿಯಿಂದ ಉದ್ದೇಶಿಸಿರುವ 765 ಕೆ ವಿ ದ್ಯುತ್ ಉಪ ಕೇಂದ್ರಕ್ಕೆ ಬೇಕಾಗಿರುವ ಭೂಮಿ ನೀಡಲು ಭೂಮಿಯ ಮಾಲಕರು ಮತ್ತು ರೈತರು ಸಿದ್ಧವಿದ್ದು ನಿಗದಿಪಡಿಸಿದ ಬೆಲೆ ಅಂದರೆ ಒಂದು ಎಕರೆ ಗೆ 32 ಲಕ್ಷ ರೂಪಾಯಿ ನೀಡಲು ಕೆಪಿಟಿಸಿಎಲ್ ಸಿದ್ಧವಿದ್ದರೆ ನಾವು ವಿದ್ಯುತ್ ಉಪ ಕೇಂದ್ರ ಸ್ಥಾಪನೆಗೆ ಭೂಮಿ ನೀಡಲು ಸಿದ್ದರಿದ್ದೇವೆ ಎಂದು ತಿಳಿಸಿ ನಿಗದಿಪಡಿಸಿದ ಹಣ ನೀಡುವಂತೆ ಭೂಮಿ ಮಾಲಕರು ಹಾಗೂ ರೈತರು ಜಿಲ್ಲಾಧಿಕಾರಿಗೆ ರೈತರ ಪರ ಮನವಿ ಪತ್ರ ಅರ್ಪಿಸಿ ಸಂತೋಷ್ ಬನ್ನಿಕೊಪ್ಪ ಒತ್ತಾಯಿಸಿದ್ದಾರೆ,
ಅವರು ಮಂಗಳವಾರ ನಗರದಲ್ಲಿರುವ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ಭವನದಲ್ಲಿ ಏರ್ಪಡಿಸಿದ ಸುದ್ದಿಗೋಷ್ಠಿಯಲ್ಲಿ ವಿದ್ಯುತ್ ಕೇಂದ್ರ ಕೆ ಭೂಮಿ ನೀಡಲು ಸಿದ್ಧಗೊಂಡಿರುವ ಭೂಮಿ ಮಾಲೀಕರು ಮತ್ತು ರೈತರ ಪರವಾಗಿ ಸಂತೋಷ ಬನ್ನಿ ಕೊಪ್ಪ ಅವರು ತಿಳಿಸಿದರು ಮಾಧ್ಯಮದೊಂದಿಗೆ ಮಾತನಾಡುತ್ತಾ ಈ ಕುರಿತು ಹೇಳಿಕೆ ನೀಡಿದ ಅವರು ಜಿಲ್ಲೆಯ ಚೆಂಡೂರು ಸೀಮೆಯ ಸರ್ವೆ ನಂಬರ್ 38 , 49 ,50, 56, 51, 47, 48 ಹಾಗೂ ಇನ್ನಿತರ ಸರ್ವೆ ನಂಬರುಗಳಿಗೆ ಸಂಬಂಧಿಸಿದ ಭೂಮಾಲೀಕರು ಸೇರಿ ಸರಕಾರಕ್ಕೆ ಒತ್ತಾಯಿಸಿ ಉದ್ದೇಶೀತ ಕೆಪಿಟಿಸಿಎಲ್ ವಿದ್ಯುತ್ ಉಪ ಕೇಂದ್ರದ ನಿರ್ಮಾಣಕ್ಕೆ ಭೂಮಿ ನೀಡಲು ಈ ಹಿಂದೆಯೇ ನಾವು ನಿರ್ಣಯಿಸಿದ್ದು ನಮಗೆ ನಾವು ನಿರ್ಣಯಿಸಿದ ಬೆಲೆ ನಿಗದಿ ಮಾಡಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ, ಅಲ್ಲದೆ ಕ್ಯಾದಿಗೊಪ್ಪ ವಿದ್ಯುತ್ ಉಪಕೇಂದ್ರ ನಿರ್ಮಾಣಕ್ಕೆ ಸಂಬಂಧಿಸಿದ ಭೂಮಿಗೆ ಈಗಾಗಲೇ 32 ಲಕ್ಷ ರೂ ನಿಗದಿ ಮಾಡಿ ಒಪ್ಪಿಗೆ ನೀಡಿದ್ದು ಅದರಂತೆ ನಮಗೂ ಕೂಡ ಪ್ರತೀ ಎಕರೆಗೆ 32 ಲಕ್ಷ ರೂ ನಿಗದಿ ಮಾಡಬೇಕು ಎಂದು ಕೆಪಿಟಿಸಿಎಲ್ ಗೆ ಹಾಗೂ ಸಂಬಂಧಿಸಿದ ಇಲಾಖೆಗೆ ಮತ್ತು ಸರ್ಕಾರಕ್ಕೆ ಜಿಲ್ಲಾಧಿಕಾರಿಗಳ ಮೂಲಕ ಭೂಮಿಯ ಮಾಲಕರು ಮತ್ತು ರೈತರು ಗಳ ಪರವಾಗಿ ಪತ್ರಿಕಾಗೋಷ್ಠಿಯಲ್ಲಿ ಸಂತೋಷ್ ಬನ್ನಿಕೊಪ್ಪ ರವರು ಒತ್ತಾಯಿಸಿದ್ದಾರೆ,
ಈ ಸಂದರ್ಭದಲ್ಲಿ ಮಂಜುನಾಥ ರಾಥೋಡ್ ಸ್ವಾರಪ್ಪ ಬಾವಿಮನಿ ಭೀಮಪ್ಪ ಕುರಿ ಮತ್ತು ಮಾಂತೇಶ್ ಪಾಟೀಲ್ ಸೇರಿದಂತೆ ಅನೇಕರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು,