ತಾಳಿಕೋಟೆ: ಶ್ರೀ ಶಿರಡಿ ಸಾಯಿಬಾಬಾರವರ ೧೦೮ ನೇ ಪುಣ್ಯಸ್ಮರಣೋತ್ಸವವನ್ನು ಸ್ಥಳೀಯ ಸಾಯಿ ಭಕ್ತರಿಂದ ಶ್ರೀ ಭಾವಸಾರ ಕ್ಷತ್ರೀಯ ಶ್ರೀ ಅಂಬಾಭವಾನಿ ಮಂದಿರದಲ್ಲಿ ಭಕ್ತಿಭಾವದಿಂದ ಜರುಗಿತು.
ರವಿವಾರರಂದು ಜರುಗಿದ ಈ ಮಹಾಪೂಜಾ ಕಾರ್ಯಕ್ರಮದಲ್ಲಿ ಶ್ರೀಮತಿ ಈಶ್ವರಿ ಮಹೀಂದ್ರಕರ ಅವರು ಮಾತನಾಡಿ ಸಬ್ ಕಾ ಮಾಲೀಕ್ ಎಕ್ ಹೈ ಕೋಯಿ ಕಿಸಿಕಾ ಮಾಲಿಕ ನಹಿ ಹೈ ಎಂಬ ಮಾತನ್ನು ಹೆಳಿದ ಶ್ರೀ ಸಾಯಿಬಾಬಾರವರು ದೇವನು ಒಬ್ಬನೇ ಇದ್ದಾನೆ ಅವನ ಮೇಲೆ ನಂಬಿಕೆ ಇಟ್ಟು ನಡೆಯಬೇಕೆಂಬುದರ ಕುರಿತು ದೀಪಾವಳಿ ಸಮಯದಲ್ಲಿ ಸಾಯಿಬಾಬಾರವರು ನೀರಿನಿಂದಲೇ ಪಣತಿಯನ್ನು ಬೆಳಗಿಸಿದವರಾಗಿದ್ದಾರೆಂದರು. ಸಾಮೂಹಿಕ ಪೂಜೆಯೆಂಬುದನ್ನು ಮಾಡುವದರಿಂದ ಪ್ರತಿಯೊಬ್ಬರಿಗೂ ಸಿಗುವಂತಹ ಪುಣ್ಯವೆಂಬುದು ಎಲ್ಲರಿಗೂ ದೊರಕಲಿದೆ ತಾಳಿದವನು ಬಾಳಿಯಾನು ಎಂಭಂತೆ ತಾಳುವ ಸ್ಥಿತಿ ಎಲ್ಲರಲ್ಲಿ ಇರಬೇಕೆಂದರು. ಇಂದಿನ ಯುಗದಲ್ಲಿ ಅವಲೋಕಿಸಿ ನೋಡಿದಾಗ ತಾಳ್ಮೆ ಎಂಬುದೇ ಅಲ್ಲಲ್ಲಿ ಹೆಚ್ಚಾಗಿ ಕಾಣುತ್ತಿಲ್ಲಾ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡುವ ಬದಲು ಮಕ್ಕಳು ಮೊಬೈಲ್ ಕೈಯಲ್ಲಿ ಹಿಡಿದಿದ್ದನ್ನು ಕಂಡರೂ ಸಹ ಪಾಲಕರು ಅವರಿಗೆ ಎಚ್ಚರಿಸುವ ಕಾರ್ಯ ಮಾಡುತ್ತಿಲ್ಲಾ ಇಂತಹ ಕಾರ್ಯ ಸುಧಾರಣೆಯತ್ತ ಕೊಂಡ್ಯೊಯ್ಯಬೇಕಾದರೆ ಎಲ್ಲರಲ್ಲಿಯೂ ಜ್ಞಾನ ಭಕ್ತಿಯೆಂಬುದು ಬೇಕು ಅಂತಹ ಭಕ್ತಿಯೆಂಬುದನ್ನು ಮಕ್ಕಳಲ್ಲಿ ಮೂಡಿಸಿದರೆ ಮಾತ್ರ ಮಕ್ಕಳಿಗೆ ಒಳ್ಳೆಯ ಮಾರ್ಗ ದೊರೆಯಲಿದೆ ಎಂದರು.
ಇನ್ನೋರ್ವ ಭಕ್ತರಾದ ಶ್ರೀಮತಿ ದೀಪಲಕ್ಷ್ಮೀ ಮಹೀಂದ್ರಕರ ಅವರು ಮಾತನಾಡಿ ಸಾಯಿಬಾಬಾರವರ ಮೇಲೆ ಶ್ರದ್ದಾ ಭಕ್ತಿಯನ್ನಿಟ್ಟುಕೊಂಡು ನಡೆದರೆ ಆತನ ಒಲುಮೆಯಾಗಲಿದೆ ಅವರ ಮಹಿಮೆ, ಪವಾಡಗಳನ್ನು ಹೇಳುತ್ತಾ ಸಾಗಿದರೆ ಸಾಕಷ್ಟು ದಿನಗಳು ಬೇಕಾಗುತ್ತವೆಂದರು.
ಇನ್ನೋರ್ವ ಹಿರಿಯ ಪತ್ರಕರ್ತರಾದ ಜಿ.ಟಿ ಘೋರ್ಪಡೆ ಅವರು ಮಾತನಾಡಿ ಶ್ರೀ ಸಾಯಿಬಾಬಾರವರ ೧೦೮ ನೇ ಪುಣ್ಯಸ್ಮರಣೋತ್ಸವವನ್ನು ಇಂದು ಆಚರಿಸಲು ಮುಂದಾಗಿರುವದು ಎಲ್ಲರನ್ನು ಭಕ್ತಿ ಮಾರ್ಗದತ್ತ ಕೊಂಡ್ಯೊಯ್ಯುವ ಕಾರ್ಯಕ್ರಮ ಇದಾಗಿದೆ ಎಲ್ಲ ಭಕ್ತರು ಒಗ್ಗಟ್ಟಿನಿಂದ ಕೂಡಿ ಈ ಮಹತ್ವದ ಕಾರ್ಯಕ್ರಮವನ್ನು ಏರ್ಪಡಿಸಿರುವದು ಭಕ್ತಿಮಾರ್ಗದತ್ತ ಕೊಂಡ್ಯೊಯ್ಯುತ್ತದೆ ಅಲ್ಲದೇ ಶ್ರೀ ಭವಾನಿ ಮಂದಿರದಲ್ಲಿ ಏರ್ಪಡಿಸಲಾದ ಈ ಕಾರ್ಯಕ್ರಮ ನಮಗೆಲ್ಲರಿಗೂ ಭವಾನಿಯ ಆಶೀರ್ವಾದ ಕೂಡಾ ಅಗತ್ಯವಿದೆ ಎಂದು ತಾಳಿಕೋಟೆಯಲ್ಲಿ ಶ್ರೀ ಶರಡಿ ಸಾಯಿಬಾಬಾರವರ ಹಾಗೂ ಶ್ರೀ ಅನ್ನಪೂರ್ಣೇಶ್ವರಿ ಭಜನಾ ಮಂಡಳಿಯವರು ಸಾಯಿ ಪೂಜಾ ಕಾರ್ಯಕ್ರಮ ನೆರವೇರಿಸಿಕೊಂಡು ಸಾಗಿಬಂದಿರುವದರ ಕುರಿತು ಹಾಗೂ ಸಾಯಿಬಾಬಾರವರಿಗೆ ನಡೆದುಕೊಳ್ಳುತ್ತಿರುವ ಭಕ್ತರ ಸಂಖ್ಯೆ ಹೆಚ್ಚಾಗಿದ್ದರ ಕುರಿತು ವಿವರಿಸಿದರು.
ಶ್ರೀ ಸಾಯಿಬಾಬಾರವರ ಪೂಜಾ ಕಾರ್ಯಕ್ರಮ ನೆರವೇರಿಸಿದ ಭೀಮಾಶಂಕರ ಜೋಷಿ ಹಾಗೂ ಆನಂದ ಕುಲಕರ್ಣಿ ಅವರು ಮಾತನಾಡಿ ಶ್ರೀ ಶಿರಡಿಸಾಯಿಬಾಬಾರವರ ಮಂತ್ರವನ್ನು ಪಠಿಸಲು ಎಲ್ಲ ಭಕ್ತ ಸಮೂಹಕ್ಕೆ ತಿಳಿಹೇಳಿ ಓಂ ನಮೋ ಭಗವತೇ ಸಾಯಿನಾಥಾಯ ನಮಃ ಎಂಬ ಮಹಾಮಂತ್ರವನ್ನು ಭಕ್ತವೃಂದಕ್ಕೆ ಹೇಳಲು ಸೂಚಿಸಿದರು. ಆಜ್ಞಾನುಸಾರ ಭಕ್ತರೆಲ್ಲರೂ ಮಹಾಮಂತ್ರವನ್ನು ಪಠಿಸಿದರು.
ಕಾರ್ಯಕ್ರಮದ ಮೊದಲಿಗೆ ಸಾಯಿ ಭಕ್ತರಿಂದ ಭಜನೆ ಜರುಗಿತಲ್ಲದೇ ಮಹಾ ಆರತಿ ಜರುಗಿ ಮಹಾಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮ ಮಂಗಲಗೊಂಡಿತು.
ಈ ಭಕ್ತಿದಾಯಕ ಕಾರ್ಯಕ್ರಮದಲ್ಲಿ ಅಸಂಖ್ಯಾತ ಮಹಿಳೆಯರು ಹಾಗೂ ಭಕ್ತರು ಪಾಲ್ಗೊಂಡಿದ್ದರು.