Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News | Districts Bijapur

ಕನ್ನಡ ಭಾಷೆ, ಸಂಸ್ಕೃತಿ ಉಳಿಸಿ ಬೆಳೆಸುವುದು ಎಲ್ಲರ ಕರ್ತವ್ಯ-ಡಾ.ಸುಜಾತಾ


ತಾಳಿಕೋಟೆ,ನ,೦೨: ಪಟ್ಟಣದ ಎಸ್.ಕೆ. ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ಕನ್ನಡ ವಿಭಾಗ ಹಾಗೂ ರೋವರ್ಸ್ ಮತ್ತು ರೇಂಜರ್ಸ್ ಘಟಕದ ವತಿಯಿಂದ ನವೆಂಬರ್ ೧ರ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ಕವಿಗೋಷ್ಠಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
       ಕಾರ್ಯಕ್ರಮದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಸುಜಾತಾ ಚಲವಾದಿ ಪ್ರಾಸ್ತಾವಿಕವಾಗಿ ಮಾತನಾಡಿ, ಕನ್ನಡ ನಮ್ಮ ತಾಯಿಭಾಷೆ ಹಾಗೂ ನಾಡಿನ ಹೆಮ್ಮೆಯಾಗಿದೆ. ಎರಡು ಸಾವಿರ ವರ್ಷಗಳಿಗೂ ಅಧಿಕ ಇತಿಹಾಸ ಹೊಂದಿರುವ ಕನ್ನಡ ಭಾಷೆಯನ್ನು ಪ್ರತಿಯೊಂದು ಕ್ಷೇತ್ರದಲ್ಲಿಯೂ ಕಡ್ಡಾಯಗೊಳಿಸಬೇಕು. ನಮ್ಮ ದೈನಂದಿನ ವ್ಯವಹಾರಗಳಲ್ಲಿ ಕನ್ನಡ ಭಾಷೆಗೆ ಆದ್ಯತೆ ನೀಡಬೇಕು. ಕನ್ನಡವನ್ನು ಪ್ರತಿಯೊಬ್ಬರೂ ಹೃದಯಪೂರ್ವಕವಾಗಿ ಪ್ರೀತಿಸಿದಾಗ ಮಾತ್ರ ಭಾಷೆಯ ಉಳಿವು ಮತ್ತು ಬೆಳವಣಿಗೆ ಸಾಧ್ಯವಾಗುತ್ತದೆ ಎಂದರು. ಆಧುನಿಕತೆಯ ಪ್ರಭಾವಕ್ಕೆ ಒಳಗಾಗಿ ನಮ್ಮ ಸಂಸ್ಕೃತಿಯನ್ನು ಮರೆಯುತ್ತಿರುವುದು ವಿಷಾದನೀಯ. ತಾಯಿಭಾಷೆಯನ್ನು ಕಡೆಗಣಿಸದೆ ನಮ್ಮ ಭಾಷೆ, ಸಂಸ್ಕೃತಿ, ನೆಲ ಮತ್ತು ಜಲವನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.
       ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ದಯಾನಂದ ಮೂಗಡ್ಲಿಮಠ ಮಾತನಾಡಿ, ಕನ್ನಡ ನಾಡು-ನುಡಿಯ ಸೇವೆಗೆ ಎಲ್ಲರೂ ಸದಾ ಸಿದ್ಧರಾಗಿರಬೇಕು. ಕನ್ನಡಿಗರಾದ ನಾವು ಕೇವಲ ನವೆಂಬರ್ ೧ರಂದು ಮಾತ್ರವಲ್ಲದೆ, ವರ್ಷದ ಎಲ್ಲ ದಿನಗಳಲ್ಲಿಯೂ ಕನ್ನಡ ಭಾಷೆಯನ್ನು ಗೌರವಿಸಬೇಕು. ಮುಂದಿನ ಪೀಳಿಗೆಗೆ ಕನ್ನಡದ ಕಂಪನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
      ಕವಿಗೋಷ್ಠಿಯಲ್ಲಿ ವಿದ್ಯಾರ್ಥಿಗಳಾದ ನೇಹಾ, ಅರುಂಧತಿ, ಶ್ರೀದೇವಿ, ಸಾನಿಯಾ, ರಾಜೇಶ್ವರಿ, ಸೌಭಾಗ್ಯಾ, ಅನಸೂಬಾಯಿ, ಸ್ವಾತಿ, ವಿನಾಯಕ, ವೆಂಕಟೇಶ, ಸಿದ್ಧಾರ್ಥ, ಅಮಿತ್, ಮಧು ಹಾಗೂ ಪ್ರಶಾಂತ ಅವರು ಕನ್ನಡ ನಾಡು, ನುಡಿ, ಸಂಸ್ಕೃತಿ ಹಾಗೂ ಭಾಷಾಭಿಮಾನದ ಕುರಿತು ಕವಿತೆಗಳನ್ನು ವಾಚಿಸಿ ಗಮನ ಸೆಳೆದರು.
      ಕಾರ್ಯಕ್ರಮದಲ್ಲಿ ಸುವರ್ಣ ಪಾಟೀಲ, ಸಂಗೀತಾ ಕೊಡೇಕಲ್ಲಮಠ, ಡಾ. ಅಜೇಯ ಅಬ್ಬಾರ, ರಮೇಶ ಜಾಧವ, ಆಲ್ಯಾಳಮಠ, ಯಲ್ಲಾಲಿಂಗ ಚಿಗರಿ, ಯು.ಎ. ಖಾಜಿ, ಸಿ.ಬಿ. ಪಾಟೀಲ, ಶ್ರೀದೇವಿ ಮಾನೆ, ನೀಲಾಂಬಿಕಾ ಅಂಗಡಿ ಸೇರಿದಂತೆ ಮಹಾವಿದ್ಯಾಲಯದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
*ಕರ್ನಾಟಕೋತ್ಸವದಲ್ಲಿ ಕನ್ನಡದ ಕಲಾ ವೈಭವ ಅನಾವರಣ; ಪ್ರೇಕ್ಷಕರ ಕರತಾಡನ ಮುಗಿಲು ಮುಟ್ಟಿತು*ಹಿಡಕಲ್ ಜಲಾಶಯದಿಂದ ಮೂರು ಹಂತಗಳಲ್ಲಿ ನೀರು ಬಿಡುಗಡೆ ಆರಂಭ: ಸಚಿವ ಸತೀಶ್‌ ಜಾರಕಿಹೊಳಿಕನ್ನಡ ನಾಡು, ನುಡಿ ರಕ್ಷಣೆ ನಾವೆಲ್ಲರೂ ಒಗ್ಗಟ್ಟಾಗಿ ಶ್ರಮಿಸೋಣ :ಬಾಬಾಸಾಹೇಬ ಪಾಟೀಲ ಕನ್ನಡ ಭಾಷೆ, ಸಂಸ್ಕೃತಿ ಉಳಿಸಿ ಬೆಳೆಸುವುದು ಎಲ್ಲರ ಕರ್ತವ್ಯ-ಡಾ.ಸುಜಾತಾರಾಮದುರ್ಗದಲ್ಲಿ ಸಂಭ್ರಮದ ಕನ್ನಡ ರಾಜ್ಯೋತ್ಸವ: ಭುವನೇಶ್ವರಿ ಮೆರವಣಿಗೆಗೆ ಚಾಲನೆರೈತರ ಸಂಕಷ್ಟ: ಸರಕಾರ ಮತ್ತು ಕಂದಾಯ ಇಲಾಖೆಯ ವಿರುದ್ಧ ಮುಗಿಲು ಮುಟ್ಟಿದ ಆಕ್ರೋಶಕನ್ನಡದ ವಿಕಾಸ ಪ್ರತಿಯೊಬ್ಬರ ಮನೆಯಿಂದಲೇ ಸಾಧ್ಯ: ಧ್ವಜಾರೋಹಣ ನೆರವೇರಿಸಿ ಉಪವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ ಕರೆಗಣವೇಷಧಾರಿ ಸ್ವಯಂಸೇವಕರ ಮೇಲೆ ಪುಷ್ಪವೃಷ್ಟಿ; ಮೆರವಣಿಗೆಯಲ್ಲಿ ಮಕ್ಕಳೂ ಭಾಗಿಕನ್ನಡ ನಾಡು-ನುಡಿಯ ಉಳಿವಿಗೆ ನಿರಂತರ ಶ್ರಮ ಅಗತ್ಯ: ಹಟ್ಟಿ ಚಿನ್ನದ ಗಣಿ ನಿಗಮ ಅಧ್ಯಕ್ಷ ಅಭಿಮತ ಬೆಳಗಾವಿ: ರೈತ ಮುಖಂಡವಿರುದ್ಧ ಮಾನಹಾನಿ ಕೇಸು ಹಾಕುವುದಾಗಿ ಶಾಸಕ ಜೆ.ಟಿ. ಪಾಟೀಲ ಎಚ್ಚರಿಕೆ