Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಇಲಾಖೆ ಮಾರ್ಗದರ್ಶನದಲ್ಲಿ ಸಹಕಾರಿ ಸಂಘಗಳು ಕಾರ್ಯನಿರ್ವಹಿಸಲಿ:ಶಶಿಕಲಾ ಪಾಟೀಲ





ಹುಕ್ಕೇರಿ.ಸಹಕಾರ ಇಲಾಖೆ ನಿಯಮಗಳನ್ನು ಪಾಲಿಸಿದರೆ ಮಾತ್ರ ಸಹಕಾರಿ ಸಂಘಗಳು ಪ್ರಗತಿ ಪಥದಲ್ಲಿ ಸಾಗುವವು ಎಂದು ಹುಕ್ಕೇರಿ ಸಹಕಾರ ಅಭಿವೃದ್ಧಿ ಇಲಾಖೆ ನಿರ್ಗಮಿತ ಅಧಿಕಾರಿ ಶ್ರೀಮತಿ ಶಶಿಕಲಾ ಪಾಟೀಲ ಹೇಳಿದರು.


ಇತ್ತಿಚಿಗೆ ಹುಕ್ಕೇರಿ ಯಿಂದ ವರ್ಗಾವಣೆ ಗೊಂಡ ಸಹಕಾರ ಇಲಾಖೆ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಶಶೀಕಲಾ ಪಾಟೀಲ ಇವರನ್ನು ಹುಕ್ಕೇರಿ ತಾಲೂಕಿನ ವಿವಿಧ ಸಂಘ ಸಂಸ್ಥೆ ಪರವಾಗಿ ಬಿಳ್ಕೊಡುಗೆ ಮತ್ತು ನೂತನವಾಗಿ ನೇಮಕಗೊಂಡ ನವೀನ ಹುಲಕುಂದ ಇವರಿಗೆ ಸ್ವಾಗತ ಕಾರ್ಯಕ್ರಮವನ್ನು ನಗರದ ಅರ್ಬನ್ ಬ್ಯಾಂಕ ಸಭಾಂಗಣದಲ್ಲಿ ಜರುಗಿತು.

  ಶ್ರೀಮತಿ ಉಷಾ ರವದಿ ನಿರ್ಗಮಿತ ಅಧಿಕಾರಿ ಶಶಿಕಲಾ ಇವರಿಗೆ ಸತ್ಕರಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.

ನಂತರ ವಿವಿಧ ಅರ್ಬನ್ ಬ್ಯಾಂಕಗಳ ವ್ಯವಸ್ಥಾಪಕರು,ಹಣಕಾಸು ಸಂಸ್ಥೆಗಳ ಕಾರ್ಯದರ್ಶಿಗಳು , ನೂತನ ಅಧಿಕಾರಿ ನವೀನ ಹುಲಕುಂದ ರವರಿಗೆ ಸನ್ಮಾನಿಸಿ ಬರಮಾಡಿಕೊಂಡು ನಿರ್ಗಮಿಸುವ ಅಧಿಕಾರಿಗೆ ಆತ್ಮಿಯವಾಗಿ ಸತ್ಕರಿಸಿದರು.

ನಂತರ ಮಾತನಾಡಿದ ಶಶಿಕಲಾ ಪಾಟೀಲ ಸಹಕಾರಿ ಸಂಘಗಳು ಉಳಿಯಬೇಕಾದರೆ ಇಲಾಖೆ ನಿಯಮಗಳನ್ನು ಕಟ್ಟು ನಿಟ್ಟಾಗಿ ಅನುಸರಿಸಿ ಮರು ಪಾವತಿಯಾಗುವ  ಸದಸ್ಯರಿಗೆ ಮತ್ತು ಗ್ರಾಹಕರಿಗೆ ಸಾಲ ವಿತರಿಸಿದರೆ ಮಾತ್ರ ಸಹಕಾರಿ ಸಂಘಗಳು ಉಳಿಯಲು ಸಾಧ್ಯ . ನನ್ನ ಮೂರು ವರ್ಷಗಳ ಸೇವಾ ಅವಧಿಯಲ್ಲಿ ನಿಮ್ಮೆಲ್ಲರ ಸಹಕಾರದಿಂದ ಹುಕ್ಕೇರಿ ತಾಲೂಕಿನ ಸಹಕಾರಿ ಸಂಘಗಳ ಅಭಿವೃದ್ಧಿಗಾಗಿ ಶ್ರಮ ವಹಿಸಿದ್ದೆನೆ, ಅದೆ ರೀತಿ ಮುಂಬರುವ ಅಧಿಕಾರಿ ನವೀನ ಹುಲಕುಂದ ರವರಿಗೆ ಸ್ಪಂದನೆ ನೀಡಿ ಸಹಕರಿಸಬೇಕು ಎಂದರು.

ಈ ಸಂದರ್ಭದಲ್ಲಿ ಹುಕ್ಕೇರಿ ಅರ್ಬನ್ ಬ್ಯಾಂಕ ಪ್ರಧಾನ ವ್ಯವಸ್ಥಾಪಕ ಕಾಡಪ್ಪಾ ಬಂದಾಯಿ, ಬೆಳಗಾವಿ ಸಹಕಾರಿ ಸಂಘಗಳ ಯೂನಿಯನ್ ಮುಖ್ಯಸ್ಥ ಮಿಥುನ, ನಿವೃತ್ತ ಲೆಕ್ಕ ಪರಿಶೋಧಕ ಎ ಬಿ ಬಿಳಿಕಿಚಡಿ, ರವಿಂದ್ರ ಪಟ್ಟಣಶೇಟ್ಟಿ, ರಮೇಶ ಬಡಿಗೇರ, ಶ್ರೀಶೈಲ ಸಂಬಾಳ, ರಮೇಶ ಚಿಗರಿ, ಆರ್ ಎ ಕುಗಟೋಳಿ ಸೇರಿದಂತೆ ತಾಲೂಕಿನ ವಿವಿಧ ಸಹಕಾರಿ ಸಂಘಗಳ ಕಾರ್ಯದರ್ಶಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.






Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ