Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅಪರಾಧಕ್ಕೆ ಸವಾಲು ಯುಗಾದಿ ವಿಶೇಷಾಂಕ ಬಿಡುಗಡೆಗೊಳಿಸಿದ ಸಿಎಂ ಮಾಧ್ಯಮ ಸಲಹೆಗಾರ ಕೆ ವಿ ಪ್ರಭಾಕರ್



ವಿಜಯಪುರ : ಹಿರಿಯ ಪತ್ರಿಕೋದ್ಯಮಿ ಟಿ ಕೆ ಮಲಗೊಂಡ ಸಂಪಾದಕತ್ವದ ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ ಹೊರತಂದಿರುವ "ಯುಗಾದಿ ವಿಶೇಷಾಂಕ -2025" ವನ್ನು ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ ವಿ ಪ್ರಭಾಕರ್ ಅವರು ಅಧಿಕೃತವಾಗಿ ಬಿಡುಗೊಳಿಸಿದರು.

ನಂತರ ವಿಶೇಷಾಂಕ ಓದಿದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ ವಿ ಪ್ರಭಾಕರ್ ಅವರು ವಿಶೇಷಾಂಕ ಮೂಡಿಬಂದ ರೀತಿ ಮತ್ತು ಕಲರ್ ಫುಲ್ ವಿನ್ಯಾಸಕ್ಕೆ ಮಾರುಹೋದರು. ಅಷ್ಟೇ ಅಲ್ಲದೆ ಈ ವರ್ಷದ ವಿಶೇಷಾಂಕದ ಸಾಧಕರ ಲೇಖನಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವಿಶೇಷವಾಗಿ ಭೀಮಾತೀರದಲ್ಲಿ ಕೆ ವಿ ಪ್ರಭಾಕರ್ ಎನ್ನುವ ಶಿರ್ಷಿಕೆ ನೋಡಿ ಸಂತಸ ಪಟ್ಟು, ತಾವು ಬರೆದ ಹಳೆಯ ಸಮಗ್ರ ಲೇಖನಗಳನ್ನು ಸಂಪಾದಕ ಟಿ ಕೆ ಮಲಗೊಂಡರ ಮುಂದೆ ಸ್ಮರಿಸಿದರು.

ಸಾಧಕರ ಲೇಖನದಲ್ಲಿ ಅಕ್ಷರಕ್ಕಿಳಿಸಿದ ಸಾಧಕರ ಜೀವನ ಚರಿತ್ರೆಯ ಮಾಹಿತಿ ರೋಚಕವಾಗಿವೆ. ಯುಗಾದಿ ಹಬ್ಬದ ಕುರಿತ ಲೇಖನಗಳು, ಹಬ್ಬದಾಚರಣೆ ಸಂಪ್ರದಾಯದ ಬಗೆಗಿನ ವಿಶೇಷ ಬರಹಗಳು, ಇನ್ನಿತ ಲೇಖನಗಳು ಆಕರ್ಷಕವಾಗಿವೆ ಎಂದರು. ಒಟ್ಟಾರೆ ಇಡೀ ವಿಶೇಷಾಂಕದ ಸಂಗ್ರಹ ಯೋಗ್ಯವಾಗಿದೆ. ಜಿಲ್ಲಾಮಟ್ಟದ ಪತ್ರಿಕೆ ರಾಜ್ಯ ಮಟ್ಟದಲ್ಲಿ ಹೆಸರುವಾಸಿಯಾಗಲಿ ಎಂದು ಪತ್ರಿಕೆಗೆ ಶುಭ ಹಾರೈಸಿದರು.

ನಂತರ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್ ಸಿ ಮಹದೇವಪ್ಪ, ಕಾನೂನು ಸಂಸದೀಯ ಸಚಿವ ಎಚ್ ಕೆ ಪಾಟೀಲ್, ಏಷ್ಯಾ ನೆಟ್ ಸುವರ್ಣ ನ್ಯೂಸ್ ಸಂಪಾದಕ ಅಜೀತ್ ಹನಮಕ್ಕನವರ, ರಾಜಕೀಯ ಸುದ್ದಿ ವಿಶ್ಲೇಷಕ ಪ್ರಶಾಂತ ನಾತು, ಮಾಧ್ಯಮ ಅಕಾಡೆಮಿ ಕಾರ್ಯದರ್ಶಿ ಸಹನಾ ಎಮ್, ಕಾರ್ಮಿಕ ಇಲಾಖೆಯ ಜಂಟಿ ಕಾರ್ಯದರ್ಶಿ, ನಟ ನಿರ್ಮಾಪಕ ಡಾ.ಸಂಗಮೇಶ ಉಪಾಸೆ, ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ಆರ್ ಮಹಾದೇವ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಸೇರಿದಂತೆ ಗಣ್ಯರು ಯುಗಾದಿ ವಿಶೇಷಾಂಕ ಬಿಡುಗಡೆಗೊಳಿಸಿದರು.

ಯುಗಾದಿ ವಿಶೇಷಾಂಕದ ಮುಖಪುಟದಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ ವಿ ಪ್ರಭಾಕರ್, ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಷಾ ಖಾನಂ, ಕಾರ್ಮಿಕ ಇಲಾಖೆಯ ಜಂಟಿ ಕಾರ್ಯದರ್ಶಿ ಡಾ.ಸಂಗಮೇಶ ಉಪಾಸೆ, ಏಷ್ಯಾನೇಟ್ ಸುವರ್ಣನ್ಯೂಸ್ ನಿರೂಪಕಿ ಭಾವನಾ ನಾಗಯ್ಯ, ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಬಿ ನಿಂಬರಗಿ ಅವರ ಭಾವಚಿತ್ರಗಳಿವೆ.

ಈ ಸಂದರ್ಭದಲ್ಲಿ ಸಂಪಾದಕ ಟಿ ಕೆ ಮಲಗೊಂಡ, ಪತ್ರಕರ್ತ ಗುರುರಾಜ ಹೂಗಾರ ಸೇರಿದಂತೆ ಇನ್ನಿತರರು ಇದ್ದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ