Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅತಿಕ್ರಮಣ ತೆರವು ಮಾಡಿ ಹದ್ದುಬಸ್ತಿ ಗುರುತಿಸಲು ಅಗ್ರಹ


ಬೈಲಹೊಂಗಲ‌ : ಸಮೀಪದ ಹೊಸೂರ ಗ್ರಾಮದಿಂದ‌  ಬೈಲಹೊಂಗಲ ಪಟ್ಟಣಕ್ಕೆ ಸಂಪರದಕಿಸುವ ಹಳೆಯ ಸಂತಿ  ರಸ್ತೆಯ ಅತಿಕ್ರಮಣ ತೆರವುಗೊಳಿಸಿ ರಸ್ತೆಯ ಹದ್ದುಬಸ್ತಿ ಗುರೂತಿಸುವಂತೆ ಆಗ್ರಹಿಸಿ ಗ್ರಾಮದ ರೈತರು ಉಪವಿಭಾಗಧಿಕಾರಿಗಳಿಗೆ ಸೋಮವಾರ ಮನವಿ ಅರ್ಪಿಸಿದರು.


  ಮನವಿ ನೀಡುವ ಸಂದರ್ಭದಲ್ಲಿ ಗ್ರಾಮದ ರೈತ ಮುಖಂಡರಾದ ಮಡಿವಾಳಪ್ಪ ಬೂದಿಹಾಳ ಬಸವರಾಜ ದುಗ್ಗಾಣಿ, ಮಹಾದೇವಪ್ಪ ಕಮತಗಿ ಮಾತನಾಡಿ, ಹೊಸೂರ ಗ್ರಾಮದಿಂದ‌ ಬೈಲಹೊಂಗಲ, ಆನಿಗೋಳ, ವಕ್ಕುಂದ ಗ್ರಾಮಕ್ಕೆ ಹಾಗೂ ನೂರಾರೂ ರೈತರ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ಹಳೆ ಬೈಲಹೊಂಗಲ ರಸ್ತೆ (ಸಂತಿರಸ್ತೆ)  ಸರಿ ಸುಮಾರು 33ಅಡಿ ಅಗಲ ಹೊಂದಿದ್ದ ರಸ್ತೆ ಇಂದು ಅತಿಕ್ರಮಣವಾಗಿ ವಾಹನ, ಚಕ್ಕಡಿ, ದನಕರುಗಳು ಚಲನವಲನಕ್ಕೆ ಹಾಗೂ ರೈತರ ಕೃಷಿ ಚಟುವಟಿಕೆಗೆ ಅತ್ಯಂತ ತೊಂದರೆಯಾಗಿದೆ. ಈ ರಸ್ತೆ ಬ್ರಿಟಿಷ್ ಸರ್ಕಾರಕ್ಕೆ ಮುಂಚೆ ಇದ್ದು ನಂತರ ಇದಕ್ಕೆ ಪರ್ಯಾಯವಾಗಿ ಬೈಲಹೊಂಗಲ- ಮುನವಳ್ಳಿ ಬೇರೆ ರಸ್ತೆ ನಿರ್ಮಾಣವಾಗಿದ್ದರಿಂದ ಇದು ಆನಿಗೊಳ, ವಕ್ಕುಂದ, ಚಿಕ್ಕೊಪ್ಪ  ಹಾಗೂ ಬೈಲಹೊಂಗಲ ಹದ್ದಿಯ ಜಮೀನುಗಳಿಗೆ ಪ್ರಮುಖ  ಸಂಪರ್ಕ ರಸ್ತೆಯಾಗಿದೆ.‌ ಈ ರಸ್ತೆಯನ್ನು  ಬೈಲಹೊಂಗಲ ಹಳೆ ಸಂತಿ ರಸ್ತೆ ಎಂದು ಕರೆಯಲಾಗುತಿದ್ದು, ಈ ರಸ್ತೆಯ ಬದಿಯಲ್ಲಿರುವ ಕೆಲ ರೈತರು ಈ ರಸ್ತೆಯನ್ನು ಅತಿಕ್ರಮಣ‌ ಮಾಡಿದ್ದರಿಂದ ರಸ್ತೆಯಲ್ಲಿ ಸಂಚಾರಮಾಡಲು ಆಗುತ್ತಿಲ್ಲ. ರಸ್ತೆ ಬದಿಯ ಗಟಾರು ಮುಚ್ಚಿದ್ದರಿಂದ ಮಳೆ ನೀರು ರಸ್ತೆಯ ಮೇಲೆ ಹರಿಯುತ್ತಿದ್ದು ರಸ್ತೆಯ ಮಣ್ಣು ಕೊಚ್ಚಿಕೊಂಡು ಹೋಗಿದ್ದು ಸಂಚಾರಾಕ್ಕೆ ಅಡಚಣೆಯಾಗಿದೆ.


 ಆದ್ದರಿಂದ ರಾಜ್ಯ ಸರ್ಕಾರ ಈಗಾಗಲೆ ಜಮೀನುಗಳಿಗೆ ಹೋಗುವ ರಸ್ತೆಗಳ ಅತಿಕ್ರಮಣ ತೆರುವಿಗೆ ಬಿಗಿಯಾದ ಕಾನೂನು ತಂದಿದ್ದು ಅದರಂತೆ ತಾಲೂಕಾ ಸರ್ವೆಕಛೇರಿಯದಾಖಲೆಗಳಲ್ಲಿರುವ ಅಳತೆಯ ಪ್ರಕಾರ ತಕ್ಷಣವಾಗಿ ಈ ರಸ್ತೆಯ ಅಗಲ ಮತ್ತು ನಕ್ಷೆಯ ಪ್ರಕಾರ ಇದು ಇರುವ ಅಸ್ತಿತ್ವವನ್ನು ಗುರುತಿಸಿ ಹದ್ದುಬಸ್ತು ಮಾಡಿ ರಸ್ತೆ ಅಭಿವೃದ್ಧಿಗೊಳಿಸಿ ರೈತರ ಕೃಷಿ ಚಟುವಟಿಕೆಗಳಿಗೆ ಸುಗಮ ದಾರಿ ಮಾಡಿಕೊಡಬೇಕೆಂದರು.


      ಮಲ್ಲಿಕಾರ್ಜುನ ಕರಡಿಗುದ್ದಿ, ಶ್ರೀಶೈಲ ಪಣದಿ, ಮಹಾಂತೇಶ ಹುರಕಡ್ಲಿ, ಬಸವರಾಜ ಮೂಗಬಸವ, ನಾಗಪ್ಪ ಹೊಸಮನಿ ಮಾತನಾಡಿ ಈ ರಸ್ತೆಯು ಅಗಲಿಕರಣಕ್ಕೆ ವಿಳಂಬವಾದಲ್ಲಿ ರೈತರ ಕೃಷಿ ಚಟುವಟಿಕೆಗೆ ಅಪಾರ ತೊಂದರೆಯಾಗಿ‌ ರೈತರು ನಷ್ಟ ಅನುಭವಿಸಬೇಕಾಗುತ್ತದೆ. ಅಲ್ಲದೆ ರೈತರು ಅನಿವಾರ್ಯವಾಗಿ ಬಿದಿಗಿಳಿದು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ರೈತರು ತಮಗಾಗೂವ ರಸ್ತೆಯ ತೊಂದರೆಯನ್ನು ಉಪವಿಭಾಗಧಿಕಾರಿಗಳ ಮುಂದೆ ಅಕ್ರೋಶವ್ಯಕ್ತಪಡಿಸಿದರು.


ಮನವಿ ಸ್ವೀಕರಿಸಿದ ಉಪವಿಭಾಗಧಿಕಾರಿಗಳು ಈ ರಸ್ತೆಯ ಸರ್ವೆ ಕಾರ್ಯವನ್ನು  ಆದಷ್ಟು ‌ಬೇಗನೆ ಮಾಡಿ ರಸ್ತೆಯ ಅಭಿವೃದ್ಧಿಗೆ ಸಂಬದಿಸಿದ ಇಲಾಖೆಯ ಗಮನಕ್ಕೆ ತಂದು ರೈತರಿಗೆ ಅನಕೂಲ ಮಾಡಿಕೊಡುವದಾಗಿ ಭರವಸೆ ನೀಡಿದರು.


ರೈತ ಮುಖಂಡರಾದ, ಯಲ್ಲಪ್ಪ ಮೂಗಬಸವ, ಈರಪ್ಪ ಚಿಕ್ಕೊಪ್ಪ, ಮಹಾದೇವಪ್ಪ ಗೌಡರ, ಶಿವಬಸ್ಸಪ್ಪ ಬುಡಶೆಟ್ಟಿ, ಮಹಾದೇವ ಅಪೋಜಿ, ಮೂರಾದಲಿ ಜಮಾದಾರ, ಮಡಿವಾಳಪ್ಪ ಚಿಕ್ಕೊಪ್ಪ, ಮಡಿವಾಳಪ್ಪ ಕಮತಗಿ, ಮಡಿವಾಳಪ್ಪ ಜೋಬಾಳಿ‌ ಸೇರಿದಂತೆ‌ ಮುಂತಾದವರು ಇದ್ದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ