Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕಾಲಕ್ಕೆ ತಕ್ಕಂತೆ ಕ್ಲಾಸರೂಮುಗಳು ಬದಲಾಗಬೇಕಾಗಿದೆ: ಪ್ರೊ.ಟಿ.ವಿ.ಕಟ್ಟಿಮನಿ

ಧಾರವಾಡ:  ಭಾರತೀಯ ಕ್ಲಾಸ ರೂಮಗಳು ವೈವಿಧ್ಯತೆಯಿಂದ ಕೂಡಿದ್ದು, ಕಾಲಕ್ಕೆ ತಕ್ಕಂತೆ ಕ್ಲಾಸರೂಮುಗಳು ಬದಲಾಗಬೇಕಾಗಿದ ಅವಶ್ಯಕತೆ ಇದೆ ಎಂದು ಆಂಧ್ರಪ್ರದೇಶದ ಬುಡಕಟ್ಟು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಟಿ.ವಿ.ಕಟ್ಟಿಮನಿ ಅಭಿಪ್ರಾಯಪಟ್ಟರು.


ಅವರು ಕರ್ನಾಟಕ ವಿಶ್ವವಿದ್ಯಾಲಯದ ಮಾಳವಿಯಾ ಮಿಷನ್ ಟೀಚರ್ಸ್ ಟ್ರೇನಿಂಗ್ ಸೆಂಟರ್ ಆಯೋಜಿಸಿದ ಎಂಟು ದಿನಗಳ 'ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ದೃಷ್ಟಿಕೋನ ಮತ್ತು ಸಂವೇದನಾಶೀಲತಾ', ಎಂಬ ಆನ್ ಲೈನ್ ಪುನಶ್ಚೇತನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.


ಹೆಚ್ಚಿನ ಉದ್ಯೋಗ ಅವಕಾಶ ಸೃಷ್ಟಿಸಲು ಪಠ್ಯಕ್ರಮದ ಬದಲಾವಣೆ ಅಗತ್ಯವಾಗಿದ್ದು, ತಂತ್ರಜ್ಞಾನ ಆಧಾರಿತ ಕಲಿಕೆಗೆ ಹೆಚ್ಚು ಒತ್ತು ನೀಡಬೇಕಾದ ಅವಶ್ಯಕತೆ ಇದ್ದು, ಸಮಾಜದ ಪರಿವರ್ತನೆ ಶಿಕ್ಷಣ ಬಹಳ ಅವಶ್ಯವಾಗಿದೆ.ಎಲ್ಲಾ ಸಮುದಾಯಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ಶಿಕ್ಷಣ ನೀತಿಯನ್ನು ಜಾರಿಗೊಳಿಸಲಾಗಿದೆ. ಮುಂಬರುವ ದಿನಗಳಲ್ಲಿ ಭಾರತೀಯ ಯುವ ಸಮುದಾಯಕ್ಕೆ ಹೆಚ್ಚು ವೃತ್ತಿಪರ ಅವಕಾಶಗಳನ್ನು ಹೆಚ್ಚಿಸಲು ಕೌಶಲ್ಯ ಆಧಾರಿತ ಶಿಕ್ಷಣವನ್ನು ನೀಡಬೇಕಾಗಿದ್ದು, ಈ ನಿಟ್ಟಿನಲ್ಲಿ  ಸರಕಾರವು ಎಲ್ಲ ವಿಷಯಗಳನ್ನು ಒಳಗೊಂಡ ಬಹುಶಿಸ್ತಿಯ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡುವದು ಇದರ ಪ್ರಮುಖ ಉದ್ದೇಶವಾಗಿದೆ ಎಂದ ಅವರು ಮಾತೃಭಾಷೆಯಲ್ಲೇ ಮಗುವಿನ ಶಿಕ್ಷಣ ನೀಡುವುದು ಹೆಚ್ಚು ಸೂಕ್ತವಾಗಿದೆ.ಇಂದಿನ ಯುವ ಶಿಕ್ಷಕರು ಬದಲಾದ ಕಾಲಕ್ಕೆ ತಕ್ಕಂತೆ ತಂತ್ರಜ್ಞಾನ ಸ್ನೇಹಿಯಾಗಿ ಜ್ಞಾನವನ್ನು ವೃದ್ಧಿಗೆ ಒಗ್ಗಿಕೊಳ್ಳಬೇಕು ಎಂದರು.


ಉನ್ನತ ಶಿಕ್ಷಣ ಮಂಡಳಿಯ ವಿಶ್ರಾಂತ ಅಧ್ಯಕ್ಷರಾದ ಪ್ರೊ.ಬಿ.ತಿಮ್ಮೇಗೌಡ ಅವರು 'ಸಮಗ್ರ ಬಹು ಶಿಸ್ತಿಯ ಶಿಕ್ಷಣ', ಎಂಬ ವಿಷಯದ ಕುರಿತು ಮಾತನಾಡಿ...ಹೊಸ ಶಿಕ್ಷಣ ನೀತಿಯಿಂದ ಶಿಕ್ಷಣ ಕ್ಷೇತ್ರದಲ್ಲಿ ಅಗಾಧವಾಗಿ ಬದಲಾವಣೆ ಆಗಿದೆ ಎಂದ ಅವರು ಹೊಸ ಶಿಕ್ಷಣ ನೀತಿಯಿಂದ ಪದವಿ ಪಡೆಯಲು ವಿದ್ಯಾರ್ಥಿ ಸ್ನೇಹಿ ಆಗಿದೆ ಎಂದ ಅವರು ಇಂದು ಎಲ್ಲಾ ವಿಷಯವನ್ನು ಒಳಗೊಂಡ ಬಹು ಶಿಸ್ತಿಯ ಶಿಕ್ಷಣವನ್ನು ನೀಡಬೇಕಾದ ಅವಶ್ಯಕತೆ ಇದ್ದು, ತಂತ್ರಜ್ಞಾನ ಒಳಗೊಂಡಂತೆ ವೃತ್ತಿಪರ ಕೌಶಲ್ಯ ಆಧಾರಿತ ಶಿಕ್ಷಣವನ್ನು ಎಲ್ಲಾ ಹಂತಗಳಲ್ಲಿ ನೀಡುವುದು ಬಹಳ ಅಗತ್ಯವಾಗಿದೆ ಎಂದ ಅವರು ಹೊಸ ಶಿಕ್ಷಣ ನೀತಿಯು ಯಾವುದೇ ಪೂರ್ವಾಗ್ರಹಿತ ಸಿದ್ದಾಂತವನ್ನು ಒಳಗೊಂಡಿಲ್ಲ. ಸಾಮಾಜಿಕ ಮತ್ತು ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಉದ್ಯೋಗ ಅವಕಾಶಗಳನ್ನು ಒದಗಿಸುವ ಸಲುವಾಗಿ ವಿಶ್ವ ದರ್ಜೆಯ ಶಿಕ್ಷಣವನ್ನು ನೀಡುವದು ರಾಷ್ಟ್ರೀಯ ಶಿಕ್ಷಣ ನೀತಿಯ ಉದ್ದೇಶವಾಗಿದೆ ಎಂದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ವಿಶ್ವವಿದ್ಯಾಲಯ ಮಾಳವೀಯಾ ಮಿಷನ್ ಟಿಚರ್ಸ ಟ್ರೇನಿಂಗ್ ಸೆಂಟರ್ ನಿರ್ದೇಶಕರಾದ ಪ್ರೊ.ಬಿ.ಎಚ್.ನಾಗೂರ ಮಾತನಾಡಿ...ಶಿಕ್ಷಣ ಸಂಸ್ಥೆ ಮತ್ತು ಉದ್ಯಮಗಳ ಸಹಯೋಗ ಬಹಳ ಅಗತ್ಯ. ಈ‌ ನಿಟ್ಟಿನಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಕಲಿಕಾ ಕೇಂದ್ರಿತ ಬೋಧನೆ ಹೆಚ್ಚು ಮಹತ್ವ ನೀಡಲಾಗಿದೆ. ಭಾರತದ ಇತಿಹಾಸದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಹೊಸ ಆಶಾಕಿರಣವನ್ನು ಹುಟ್ಟು ಹಾಕಿದೆ. ಭವಿಷ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಒಂದು ಗೇಮ್ ಚೆಂಜರ್ ಆಗಲಿದೆ. ಜಾತಿ, ಧರ್ಮ, ವರ್ಗಗಳ ಹೊರತಾಗಿ ಎಲ್ಲರ ಹಿತವನ್ನು ಕಾಪಾಡುವಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಗೆ ಹೆಚ್ಚು ಮಹತ್ವ ಬಂದಿದೆ ಎಂದರು.


ಕಾರ್ಯಕ್ರಮದಲ್ಲಿ ಪ್ರೊ.ಬಿ.ಹೆಚ್.ನಾಗೂರ, ಡಾ.ಭಾರತಿ‌ ಗಾಣಿಗೇರ, ಡಾ.ಶಿಲ್ಪಾ ರಾಮನಗೋಳ್, ಮಲ್ಲಿಕಾ ಕೆಂಗಾಳ ಸೇರಿದಂತೆ  ರಾಜ್ಯದ ಮತ್ತು ದೇಶದ ವಿವಿಧ ಪ್ರದೇಶಗಳ ಸುಮಾರು 130  ಪ್ರಾಧ್ಯಾಪಕರು, ಸಂಶೋಧಕರು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಪುನಶ್ಚೇತನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ