Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಚೈತ್ರ ಸಂಸ್ಕೃತ ಶಿಬಿರದಲ್ಲಿ ಪ್ರಜ್ವಲಿಸಿದ ಮಕ್ಕಳು







ಬಳ್ಳಾರಿ, ಏ.15:..ಶ್ರೀ ಸನಾತನ ವೀರಶೈವ ಗುರುಕುಲಮಠ ಟ್ರಸ್ಟ್ ಹಾಗೂ ಸಂಸ್ಕೃತ ಭಾರತಿ ಕರ್ನಾಟಕ ಉತ್ತರದಿಂದ  ಮಕ್ಕಳಿಗಾಗಿ ಕಳೆದ ಹತ್ತು ತಿಂಗಳಿಂದ  ಈ ವರ್ಷದ   *ಚೈತ್ರ ಸಂಸ್ಕೃತ* ಶಿಬಿರದ ಸಮಾರೋಪ ಸಮಾರಂಭ ನಿನ್ನೆ ಸಂಜೆ  ರೇಣುಕಾಚಾರ್ಯ ನಗರದ  ಸನಾತನ ಗುರುಕುಲ ಮಠದ ಸಭಾಂಗಣದಲ್ಲಿ ನಡೆಯಿತು.

ಸಮಾರಂಭದ ಸಾನಿದ್ಯವನ್ನು ವೇದಮೂರ್ತಿ ಡಾ. ಜೆ.ಯಂ ಪಂಪಾಪತಿ ಶಾಸ್ತ್ರಿಗಳು ಸಂಸ್ಥಾಪಕ ಅಧ್ಯಕ್ಷರು ಶ್ರೀ ಸನಾತನ ವೀರಶೈವ ಗುರುಕುಲ ಮಠ ಟ್ರಸ್ಟ್ ಇವರು ವಹಿಸಿದ್ದರು

ಶಿಬಿರದ ಮಾರ್ಗದರ್ಶಕರಲ್ಲಿ ಒಬ್ವರಾಗಿದ್ದ ನಿವೃತ್ತ ದೈಹಿಕ ಶಿಕ್ಷಕ  ಸಿದ್ದಲಿಂಗ ಸ್ವಾಮಿ ಮಾತನಾಡಿ. ಮಕ್ಕಳಿಗಾಗಿ ಕಥೆಯ ಮೂಲಕ ಸಂಸ್ಕೃತ, ಸಂಸ್ಕಾರ, ಸಂಸ್ಕೃತಿಯ ವಿಚಾರದ ಬಗ್ಗೆ ತಿಳಿಸುವುದರ ಜೊತೆಗೆ ದರೋಜಿ ಕೆರೆ, ಗೋಶಾಲೆ ವೀಕ್ಷಣೆ ಮಾಡಿಸಲಾಗಿದೆ.  ಇದೊಂದು ಉತ್ತಮ ಶಿಬಿರ ಎಂದರು.

ವೀರಶೈವ ಸಮಾಜದ ಮುಖಂಡ ಕೆ.ಎಂ.ಮಹೇಶ್ವರ ಸ್ವಾಮಿ ಮಾತನಾಡಿ, ಯೋಗೇಶ್ ಅವರು ಇಂತಹ ಉತ್ತಮವಾದ ಶಿಬಿರವನ್ನು ಮಕ್ಕಳಿಗೆ ಆಯೋಜಿಸಿರುವುದು ಶ್ಲಾಘನೀಯ ಶಿಕ್ಷಣ ಕಲಿತವ ಭ್ರಷ್ಟನಾಗಬಹುದು. ಸಂಸ್ಕಾರ ಕಲಿತವ ಮಾತ್ರ ಭ್ರಷ್ಟನಾಗಲಾರ ಎಂದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಎನ್.ವೀರಭದ್ರಗೌಡ ಮಾತನಾಡಿ, ಕಲೆ, ಸಂಸ್ಕೃತಿ ಜೊತೆಗೆ ಮಕ್ಕಳು ಸಂಸ್ಕೃತ ಭಾಷೆಯನ್ನು ಕಲಿಯುವ   ಹತ್ತ  ದಿನಗಳ ಶಿಬಿರ ಸಾರ್ಥಕತೆಯಿಂದ ಕೂಡಿದೆಂದರು.

ಮಕ್ಕಳು ತಾವು ಹತ್ತು ದಿನಗಳ ಕಾಲ ಕಲಿತ ಸಂಸ್ಕೃತದಲ್ಲಿ ಹಾಡು, ಶ್ಲೋಕ, ಸಂಖ್ಯೆ ಜೊತೆಗೆ ಕಿರು ನಾಟಕಗಳ ಪ್ರದರ್ಶನ ಮಾಡಿ ಪೋಷಕರ ಗಮನ ಸೆಳೆದರು.ಸಾಧನಾ ಯೋಗ ಕೇಂದ್ರದಿಂದ ತರಬೇತಿ ಪಡೆದ  ಮಕ್ಕಳು ಯೋಗ ಪ್ರದರ್ಶನ ಮಾಡಿದರು.

ಸಮಾರಂಭದಲ್ಲಿ ಪಾಲ್ತೂರು ಶ್ರೀಗಳು, ಪಾಲಿಕೆ ಸದಸ್ಯೆ ಸುರೇಖ ಮಲ್ಲನಗೌಡ, ಸಿಮೆಂಟ್ ಬಿ.ಎಂ.ಮಲ್ಲಿಕಾರ್ಜುನಸ್ವಾಮಿ,  ಸಿದ್ಧಾಂತ ಶಿಖಾಮಣಿ ಬೋಧಕಿ ಅನುರಾಧ ಕೆ. ಎಂ., ಸಂಸ್ಕೃತ ಶಿಕ್ಷಕಿ ಚೆನ್ನಮ್ಮ, ಎಂ ಚಂದ್ರ ಮೌಳಿ, ಜೋಳದರಾಶಿ ಬಸವರಾಜ್, ಎರ್ರಿಸ್ವಾಮಿ, ಶಿವೇಶ್ವರಗೌಡ, ಶಿವಾನಂದ ಸ್ವಾಮಿ ಬೆಳಗಲ್, ಎಣ್ಣೆ ಎರ್ರಿಸ್ವಾಮಿ, ಓಂಕಾರಸ್ವಾಮಿ ಮಿಂಚೇರಿ, ಮೊದಲಾದವರು  ಪಾಲ್ಗೊಂಡಿದ್ದರು.

ಮಹಾಂತೇಶ ಮೂರ್ತಿ ಕೆ.ಎಂ. ನಿರೂಪಣೆ ಮಾಡಿದರು.ವೈಷ್ಣವಿ ಪ್ರಾರ್ಥನೆ ಮಾಡಿದರು. ಶಿಕ್ಷಕ  ಎಸ್.ಎಂ. ಸಿದ್ದೇಶ್ವರ ವಂದನಾರ್ಪಣೆ ಮಾಡಿದರು.







Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ