LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Belagavi

ಮಕ್ಕಳಿಗೆ ಗಾಂಧೀಜಿಯವರ ಆದರ್ಶಗಳನ್ನು ತಿಳಿಸುವುದು ಅಗತ್ಯ: ಶಾಸಕ ಅಶೋಕ ಪಟ್ಟಣ


ರಾಮದುರ್ಗ: ರಾಷ್ಟ್ರಪಿತ ಮಹಾತ್ಮಾ ಗಾಂಧಿಜೀಯವರ ಜೀವನ ಹಾಗೂ ಅವರು ದೇಶಕ್ಕಾಗಿ ಹೋರಾಟ ನಡೆಸಿದ ಬಗೆಗಿನ ಮಾಹಿತಿಯನ್ನು ಇಂದಿನ ಮಕ್ಕಳು ತಿಳಿದುಕೊಳ್ಳದೇ ಇರುವದು ಬೇಸರ ಸಂಗತಿ. ಗಾಂಧಿಜೀಯವರ ವಿಚಾರಧಾರೆಯನ್ನು ನಮ್ಮೇಲ್ಲ ಮಕ್ಕಳಿಗೆ ತಿಳಿಸುವ ಮೂಲಕ ಅವರ ಆದರ್ಶಗಳನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಮುಂದಾಗಬೇಕು ಎಂದು ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ಪ್ರಶ್ನಿಸಿದರು.
ಪಟ್ಟಣದ ಗುರುಭವನದಲ್ಲಿ ಸ್ಥಳೀಯ ಬ್ಯಾಂಕ್ ಆಪ್ ಬರೋಡಾ ಶಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಲಯದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಗಾಂಧಿ ಜಯಂತಿ ಹಾಗೂ ಬಹುಮಾನ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. 
ಗಾಂಧೀಜಿಯವರ ಸತ್ಯ, ಅಹಿಂಸೆ, ಸರಳತೆ ಹಾಗೂ ಸ್ವಚ್ಛತೆಯಂತಹ ತತ್ವಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಗಾಂಧೀಜಿಯವರ ಆದರ್ಶಗಳನ್ನು ಪರಿಚಯಿಸಿ, ಅವರ ಜೀವನ ಸಂದೇಶವನ್ನು ತಿಳಿಸಬೇಕು ಎಂದು ಸಲಹೆ ನೀಡಿದರು.
ತಾಲೂಕಿನ ಮನಿಹಾಳ ಸುರೇಬಾನ ಗ್ರಾಮದ ಹ್ತತಿರವಿರುವ ಗಾಂಧೀಜಿಯವರ ಚಿತಾಭಸ್ಮ ಸ್ಥಳವನ್ನು ಸರ್ಕಾರದ ಸುಪರ್ದಿಗೆ ಪಡೆದು, ಅಗತ್ಯ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು. ಸ್ಥಳವನ್ನು ಅಭಿವೃದ್ಧಿಪಡಿಸಿ ಮುಂದಿನ ಪೀಳಿಗೆಗೆ ಗಾಂಧೀಜಿಯವರ ನೆನಪು ಹಾಗೂ ಸಂದೇಶ ತಲುಪುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕರು ಭರವಸೆ ನೀಡಿದರು. 
ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ರಾಮನಗೌಡ ಕನ್ನೊಳ್ಳಿ ಮಾತನಾಡಿ, ಮಹಾತ್ಮ ಗಾಂಧೀಜಿ ಅವರ ದೇಹವನ್ನು ಮಾತ್ರ ಕೊಂದಿಲ್ಲ, ಅವರ ಧ್ಯೇಯಗಳನ್ನೂ ಕೊಲ್ಲಲಾಗಿದೆ. ಗಾಂಧೀಜಿ ತೋರಿಸಿಕೊಟ್ಟ ಬದುಕಿನ ದಾರಿ ಹಾಗೂ ಆದರ್ಶಗಳನ್ನು ವ್ಯಂಗ್ಯ ಮಾಡುವ ಪ್ರವೃತ್ತಿ ಇತ್ತೀಚಿಗೆ ಕಂಡು ಬರುತ್ತಿರುವುದು ದುರ್ದೈವದ ಸಂಗತಿ. ದೇಶದ ಸ್ವಾತಂತ್ರ್ಯಕ್ಕಾಗಿ ರಕ್ತ ಚೆಲ್ಲಿದ ಮಹನೀಯರನ್ನು ಸ್ಮರಿಸುವುದು ಪ್ರತಿಯೊಬ್ಬರ ಕರ್ತವ್ಯ. ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಹಾಗೂ ದೇಶಪ್ರೇಮವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಆಗಬೇಕು ಎಂದರು.
ಬದುಕಿನಲ್ಲಿ ಏನನ್ನಾದರೂ ಸಾಧಿಸಬೇಕಾದರೆ ಓದುವುದು ಹಾಗೂ ಜ್ಞಾನ ಸಂಪಾದಿಸುವುದೇ ಪ್ರಮುಖ ದಾರಿ. ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ, ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಗಾಂಧೀಜಿ ಅವರ ವಿಚಾರಧಾರೆಗಳನ್ನು ಕೇವಲ ಜಯಂತಿ ಆಚರಣೆಗೆ ಸೀಮಿತಗೊಳಿಸದೆ, ನಿತ್ಯ ಜೀವನದಲ್ಲಿ ಅನುಸರಿಸಬೇಕು ಎಂದು ಹೇಳಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಂದ್ರ ಕಾಂಬಳೆ, ವಕೀಲರಾದ ಶ್ರೀನಿವಾಸ ಕೊಂಡಗೂಳಿ, ಅರವಿಂದ ಹಗೇದ ಮಾತನಾಡಿದರು. ಇದೇ ವೇಳೆ ಗಾಂಧಿ ಜಯಂತಿ ಪ್ರಯುಕ್ತ ಏರ್ಪಡಿಸಿದ ಮುಕ್ತ ಭಾಷಣ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಮಾರಂಭಕ್ಕೂ ಮುನ್ನ ಪಟ್ಟಣದ ತೇರ ಬಜಾರ್‌ದ ಗಾಂಧಿಜಿ ಪುತ್ಥಳಿಯಿಂದ ಪ್ರಮುಖ ಬೀದಿಗಳ ಮೂಲಕ ಗುರುಭವನದ ವರೆಗೆ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಯೋಜನಾಧಿಕಾರಿ ಸಚಿನ್, ವಿದ್ಯಾ ಪ್ರಸಾರಕ ಸಮಿತಿ ಅಧ್ಯಕ್ಷ ಪ್ರೊ. ಎಸ್.ಎಸ್. ಸುಲ್ತಾನಪುರ, ಡಾ. ಶಾನೂರಲಿ ಅಲ್ಲಿಸಾಬನ್ನವರ, ವಕೀಲ ತೋಟಪ್ಪ ರಾಜೂರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಶಿಕ್ಷಕರು ಉಪಸ್ಥಿತರಿದ್ದರು.
ಶಾಖಾ ವ್ಯವಸ್ಥಾಪಕ ಹಣಮಂತ್ರಾಯ ಬಿರಾದಾರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಚಂದ್ರಕುಮಾರ ಕಲ್ಲೂರ ವಂದಿಸಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಿತ್ತೂರು ಉತ್ಸವ ನಿಮಿತ್ತ ವೈಭವದ 'ಪಾರಂಪರಿಕ ನಡಿಗೆ'. ಸಂಸ್ಕೃತಿ, ಇತಿಹಾಸದ ರಕ್ಷಣೆ ಎಲ್ಲರ ಹೊಣೆ: ಸಾಹಿತಿ ಮಂಜುನಾಥ ಕಳಸಣ್ಣವರಹಿಂದೂ ಸಮಾಜದ ಸಂಘಟನೆಯೇ ದೇಶದ ಶಕ್ತಿಗೆ ಆಧಾರ: ನರೇಂದ್ರಜೀಕಬ್ಬಡಿ ಪುರುಷರ ಪಂದ್ಯಾವಳಿ ಸವದತ್ತಿ  ತಂಡಕ್ಕೆ ಜಯ.ವೀರರಾಣಿ ಚೆನ್ನಮ್ಮಳ ಧೈರ್ಯ, ಸಾಹಸ, ದೇಶಪ್ರೇಮ ಯುವಜನರಿಗೆ ಪ್ರೇರಣೆ: ತಹಸೀಲ್ದಾರ್ ಸಿದರಾಯ ಬೋಸಗಿ ಅಭಿಮತಬಸವರಾಜ ಶಿವಲಿಂಗಪ್ಪ ಯಾದವಾಡ ನಿಧನಜನರಲ್ಲಿ ದೇಶಾಭಿಮಾನ ಬೆಳಿಸಿದ ವೀರ ರಾಣಿ ಚೆನ್ನಮ್ಮ - ನಿರಾಣಿ    ಕಿತ್ತೂರು ಚನ್ನಮ್ಮಾಜಿ ಆದರ್ಶ, ಹೋರಾಟ ಜೀವನದಲ್ಲಿ ಬಳಸಿಕೊಳ್ಳಿ : ಬಾಬಾಸಾಹೇಬ ಪಾಟೀಲ.  ಸಿಕಂದರ ಬಾದಹ ಅರಬ ನಿಧನರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾವಳಿ: ಲಚ್ಯಾಣ ಸರಕಾರಿ ಶಾಲೆಯ ಬಾಲಕಿಯರಿಗೆ ತೃತೀಯ ಸ್ಥಾನಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಸಮಸ್ಯೆ ಪರಿಹರಿಸಿಕೊಳ್ಳಿ: ಕಾಗವಾಡ ತಹಶೀಲ್ದಾರ ರವೀಂದ್ರ ಹಾದಿಮನಿ ಕರೆ