Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ವೈದ್ಯರ ನಿರ್ಲಕ್ಷ್ಯಕ್ಕೆ ಡೆಂಗ್ಯೂಗೆ ಮಗು ಸಾವು: ಪೋಷಕರ ರೋಧನೆ

ಹೊಸಪೇಟೆ( ವಿಜಯನಗರ )ಮೇ.09: ಮರಿಯಮ್ಮನಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಬರುವ ತಾಳೆ ಬಸಾಪುರ ತಾಂಡದ ನಿವಾಸಿಯಾದ ತುಳುಚನಾಯ್ಕ್, ವಿಜಿಬಾಯಿ ದಂಪತಿಗಳ ಮಗನಾದ ಗೌತಮ್ ನಾಯ್ಕ್ (9) ವರ್ಷ ತೀರ್ವ ಜ್ವರ ಕಾಣಿಸಿಕೊಂಡಾಗ ಮರಿಯಮ್ಮನಹಳ್ಳಿಯ ಸಂಜೀವಿನಿ ಚಿಕಿತ್ಸಾಲಯದ ಡಾಕ್ಟರ್ ಕಿರಣ್ ಕುಮಾರ್ ಅವರ ಬಳಿ ತೋರಿಸಿದ್ದಾರೆ.


ಅದು ಡೆಂಗ್ಯೂ ಜ್ವರ ಎಂದು  ಖಚಿತವಾದ ಮೇಲೆ ಹೆಚ್ಚಿನ ಚಿಕಿತ್ಸೆ ಗಾಗಿ  ಹೊಸಪೇಟೆಯ"  ಶರಣಂ " ಆಸ್ಪತ್ರೆಗೆ  :07/05/2024ರಂದು ಮಧ್ಯಾಹ್ನ 2ಘಂಟಿಗೆ ಧಾಖಲು ಮಾಡಿದ್ದ  ವೈದ್ಯರು ರಕ್ತ ಪರೀಕ್ಷೆ ಮಾಡಿ ಚಿಕಿತ್ಸೆ ಪ್ರಾರಂಭಿಸಿದ್ದರು,  ಮರುದಿನ ದಿ.8.ರಂದು 4:00ಘಂಟೆಯ ಸುಮಾರಿಗೆ ಡಾ.ವಿನಯ್ ರಾಘವೇಂದ್ರ ರವರು ಬಿಳಿ ರಕ್ತಕಣ ಕಡಿಮೆ ಇದೆ,ರಕ್ತ ಹಾಕುವ  ವ್ಯವಸ್ಥೆ   ನಮ್ಮಲ್ಲಿ  ಇಲ್ಲ. ಎಂದು ರೋಗಿಯನ್ನು, ಕೊಪ್ಪಳ ಅಥವಾ ಬಳ್ಳಾರಿಗೆ ತೆಗೆದುಕೊಂಡು ಹೋಗಲು ತಿಳಿಸಿದರು.


ಅದೇ ದಿನ  4:30ರ ಸುಮಾರಿಗೆ ಆಸ್ಪತ್ರೆಯಿಂದ ಬಳ್ಳಾರಿಗೆ ಹೋಗುವ ಸಂದರ್ಭದಲ್ಲಿ,ಹೊಸಪೇಟೆಯ ಬಳ್ಳಾರಿ ಸರ್ಕಲ್ ಹತ್ತಿರ ಹೋಗುವಷ್ಟರಲ್ಲಿ  ಮಗು ಮೃತ ಹೊಂದಿದೆ  ಎಂದು ಪೋಷಕರು ಆರೋಪಿಸುತ್ತಾ, ಈ ವ್ಯದ್ಯರಿಗೆ  ತಕ್ಕ ಶಿಕ್ಷಯಾಗಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂಧರ್ಭದಲ್ಲಿ ಪೋಷಕರ

 ರೋದನೆ ಹೇಳತೀರದಂತಿತ್ತು.


ಗಂಭೀರ ಸಮಸ್ಯೆ ಇದ್ದಲ್ಲಿ ಸಮಯ ಪ್ರಜ್ಞೆಯಿಂದ ಮುಂಚಿತವಾಗಿ ಹೇಳಬೇಕಿತ್ತು ಅವರ ನಿರ್ಲಕ್ಷ್ಯದಿಂದ ನಮ್ಮ ಮಗುವಿನ ಸಾವಾಗಿದೆ ಎಂದು ಪೋಷಕರು ಮತ್ತು ಸಂಘಟನೆಯವರು ನ್ಯಾಯ ಬೇಕೆಂದು ಆಸ್ಪತ್ರೆಯ ಮುಂದೆ ರಾತ್ರಿ 8:30ರವರೆಗೆ ಬಾಲಕನ ಶವವಿಟ್ಟು ಪ್ರತಿಭಟನೆ ಮಾಡಿದರು.


ಸ್ಥಳಕ್ಕೆ  ಭೇಟಿ : ಜಿಲ್ಲಾ ವೈದ್ಯಧಿಕಾರಿ ಶಂಕರ್ ನಾಯ್ಕ್ ಆಸ್ಪತ್ರೆಗೆ ಭೇಟಿಮಾಡಿ ಕೂಡಲೇ ತನಿಖಾ ತಂಡ ರಚಿಸಿ ಪರಿಶೀಲಿಸಲಾಗುವುದು ತಪ್ಪು ಕಂಡು ಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.


 ಶಾಸಕ ಗವಿಯಪ್ಪ ಆಸ್ಪತ್ರೆ ಗೆ ಭೇಟಿನೀಡಿ  ಮುಂದೆ ಈರೀತಿ ಸಾವು  ಗಳು ಸಂಭವಿಸದಂತೆ ಏಚ್ಚರ ವಹಿಸಿ ಎಂದು ಶರಣಂ ಆಸ್ಪತ್ರೆಯ ವೈದ್ಯರಿಗೆ ತಾಕಿತು ಮಾಡಿದರು. ವೈದ್ಯಧಿಕಾರಿಗೂ ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ತಿಳಿಸಿದರು. ಅವರು  ಸಂತ್ರಸ್ತರ ಪೂಷಕರಿಗೆ ತಮ್ಮ ಸ್ವಂತ ಹಣ  ರೂ.50,000(ಐವತ್ತು ಸಾವಿರ ) ನೆರವು ನೀಡಿದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ