Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

"ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಅಪ್ರತಿಮ ಶೌರ್ಯ ಮತ್ತು ಬಲಿದಾನದ ಅವಿಸ್ಮರಣಿಯ: ಚಿದಾನಂದ ಸವದಿ

ಅಥಣಿ: ಸಂಗೊಳ್ಳಿ ರಾಯಣ್ಣ ಉತ್ಸವವು ಸಂದರ್ಭದಲ್ಲಿ ಮಾತ್ರವಲ್ಲ, ರಾಯಣ್ಣನ ಧೈರ್ಯ, ಸ್ವಾತಂತ್ರ‍್ಯಕ್ಕಾಗಿ ಮಾಡಿದ ಯೋಧನ ಬಲಿದಾನದ ಸ್ಮರಣಾರ್ಥ ಕೂಡ ಆಗಿದೆ. ಉತ್ಸವ ಜ್ಯೋತಿ ಇದು ಕೇವಲ ದೀಪ ಬೆಳಕು ಮಾತ್ರವಲ್ಲ, ಅದು ಯುವಜನ, ಗ್ರಾಮೀಣ ಸಮುದಾಯ ಹಾಗೂ ಕನ್ನಡಿಗರ ಹೃದಯದಲ್ಲಿ ರಾಯಣ್ಣನ ಹೋರಾಟದ ಬೆಳಕಾಗಿದೆ ಎಂದು ಯುವ ಮುಖಂಡ ಚಿದಾನಂದ ಸವದಿ ಕರೆ ನೀಡಿದರು.
ಅಥಣಿ ಪಟ್ಟಣದ ಸಂಗೋಳ್ಳಿ ರಾಯಣ್ನ ವೃತ್ತದ ಬಳಿ ಆಗಮಿಸಿದ 'ಸಂಗೊಳ್ಳಿ ರಾಯಣ್ಣ ಉತ್ಸವ ಜ್ಯೋತಿ'ಯನ್ನು ತಾಲೂಕು ಆಡಳಿತ ದ ವತಿಯಿಂದ ಬರಮಾಡಿಕೊಂಡು, ರಾಯಣ್ಣನ ಭಾವಚಿತ್ರಕ್ಕೆ ಪೂಜೆ ಪುಷ್ಪ ನಮನ ಸಲ್ಲಿಸಿ ಯುವ ಮುಖಂಡ ಚಿದಾನಂದ ಸವದಿ ಮಾತನಾಡಿ ಸಂಗೊಳ್ಳಿ ರಾಯಣ್ಣ ಸ್ವಾತಂತ್ರ‍್ಯದ ಅನವರತ ಹೋರಾಟಗಾರ, ಕಿತ್ತೂರು ರಾಣಿ ಚೆನ್ನಮ್ಮನ ಆಧ್ಯಕ್ಷತೆಯಲ್ಲಿ ಬ್ರಿಟೀಶರ ವಿರುದ್ಧ ಹೋರಾಟ ಮಾಡಿದ ಧೀರ ಯೋಧ. ತನ್ನ ದೇಶಭಕ್ತಿಗೆ ಜೀವನಪರ್ಯಂತ ನೀಡಿದ ಅವರ ಸಾಹಸ ಇಂದಿಗೂ ಕನ್ನಡಿಗರ ಮನದಾಳದಲ್ಲಿ ಜೀವಂತವಾಗಿದೆ ಎಂದರು.
ಈ ವೇಳೆ ಮಾತನಾಡಿದ ಅಥಣಿ ತಾಲೂಕು ತಹಶೀಲ್ದಾರ್ ಸಿದ್ರಾಯ ಬೋಸಗಿ ಇಂದು ನಮ್ಮ ಅಥಣಿ ತಾಲ್ಲೂಕಿಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ವೀರ ಜ್ಯೋತಿಯು ಆಗಮಿಸಿರುವುದು ನಮ್ಮೆಲ್ಲರಿಗೂ ಅತ್ಯಂತ ಹೆಮ್ಮೆಯ ವಿಷಯವಾಗಿದೆ. ರಾಯಣ್ಣನವರು ಕೇವಲ ಒಬ್ಬ ವ್ಯಕ್ತಿಯಲ್ಲ, ಅವರು ಈ ನಾಡಿನ ಸ್ವಾಭಿಮಾನ ಮತ್ತು ದೇಶಪ್ರೇಮದ ಸಂಕೇತವಾಗಿದ್ದಾರೆ ಎಂದು ಹೇಳಿದರು.
ಅಥಣಿ ಪಟ್ಟಣಕ್ಕೆ ಆಗಮಿಸಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಮರ ಜ್ಯೋತಿಯ ರಥಕ್ಕೆ ಗಣ್ಯಮಾನ್ಯರಿಂದ ಪೂಜಿ ಸಲ್ಲಿಸಿದ ನಂತರ ವಿವಿಧ ವಾದ್ಯ ಮೇಳಗಳೊಂದಿಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಶಿವಯೋಗಿ ವೃತ್ತದ ವರೆಗೆ ಮೆರವಣಿಗೆಯ ಮೂಲಕ ರಾಯಬಾಗ ತಾಲೂಕಿಗೆ ಬಿಳ್ಕೊಡಲಾಯಿತು.
ಈ ವೇಳೆ ಪುರಸಭೆ ಅಧ್ಯಕ್ಷೆ ಶಿವಲೀಲಾ ಬುಟಾಳೆ, ತಹಸೀಲ್ದಾರ ಸಿದ್ರಾಯ ಬೋಸಗಿ, ಶಿಕ್ಷಣ ಸಂಯೋಜಕ ಎಸ್ ಎಸ್ ಗಸ್ತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಮಂಜುನಾಥ, ಕನ್ನಡಪರ ಹೋರಾಟಗಾರ ಅಣ್ಣಾಸಾಬ ತೆಲಸಂಗ, ಜಗನ್ನಾಥ ಬಾಮನೆ, ಉದಯ ಮಾಕಾಣಿ, ಶಬ್ಬೀರ ಸಾತಬಚ್ಚಿ, ವಿಲಾಸ ಕುಲಕರ್ಣಿ, ಅನಿಲ್ ಒಡೆಯರ, ಸುಕುಮಾರ ಮಾದರ, ಎಸ್ ಎಸ್ ಹೂಟಿ, ಸುರೇಶ್ ವಾಘಮೋರೆ, ಬೀರಪ್ಪ ಯಕ್ಕಂಚಿ, ಕಲ್ಲಪ್ಪ ಮೇತ್ರಿ, ವಿಠಲ ತಟ್ರಿ, ಅಪ್ಪು ಪೂಜಾರಿ, ಕಲ್ಲಪ್ಪ ಲಂಗುಟಿ, ಬೀರಪ್ಪ ಇಚಾರೆ ಸೇರಿದಂತೆ ಅಂಗನವಾಡಿಯ ಕಾರ್ಯಕರ್ತರು ಉಪಸ್ಥಿತರಿದ್ದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ