Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸರಕಾರಿ ಶಾಲೆಗಳಿಗೆ ಮಾದರಿಯಾಗಿ ಚನ್ನಮ್ಮ ನಗರ ಶಾಲೆ ಅಭಿವೃದ್ಧಿಯಾಗಿದೆ - ಬಿಇಒ ರವಿ ಭಜಂತ್ರಿ





ಬೆಳಗಾವಿ : ಬೆಳಗಾವಿಯ ರಾಣಿ ಚನ್ನಮ್ಮ ನಗರದ ಸರಕಾರಿ ಶಾಲೆ ಕಳೆದ 4 -5 ವರ್ಷದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ಸರಕಾರಿ ಶಾಲೆಯನ್ನು ಮಾದರಿಯಾಗಿ ಹೇಗೆ ತಯಾರಿ ಮಾಡಬಹುದು ಎನ್ನುವುದಕ್ಕೆ ಈ ಶಾಲೆ ಆದರ್ಶವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರವಿ ಭಜಂತ್ರಿ ಪ್ರಶಂಸಿಸಿದ್ದಾರೆ.


ಸೋಮವಾರ, ಶಾಲೆಗೆ ಪ್ರಯತ್ನ ಸಂಘಟನೆ ನೀಡಿದ ವಿಜ್ಞಾನ ಉಪಕರಣಗಳನ್ನು ಹಸ್ತಾಂತರಿಸಿಕೊಳ್ಳುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಈ ಸರಕಾರಿ ಶಾಲೆಗೆ ದಾನಿಗಳ ಕೊಡುಗೆ ಬಹಳ ದೊಡ್ಡದಿದೆ. ಶಾಲೆ ಉತ್ತಮ ಶಿಕ್ಷಕರನ್ನು ಹೊಂದಿದೆ. ಅವರಿಂದಾಗಿ ಸರಕಾರಿ ಶಾಲೆಗೆ ಒಳ್ಳೆಯ ಕೊಡುಗೆ ಸಿಗುತ್ತಿದೆ. ನಮ್ಮ ಮನೆ ಮತ್ತು ಮನಸ್ಸನ್ನು ಕಾಯುವವರು ಸರಕಾರಿ ಶಾಲೆಯ ಮಕ್ಕಳು, ಮಕ್ಕಳಿಗೆ ಸಂಸ್ಕಾರ ಸಿಗುವುದು ಸರಕಾರಿ ಶಾಲೆಗಳಲ್ಲಿ ಮಾತ್ರ. ದೇಶವನ್ನು ಕಾಯುವ ಗಟ್ಟಿಗಾರಿಕೆ ಸರಕಾರಿ ಶಾಲೆಯ ಮಕ್ಕಳಲ್ಲಿದೆ ಎಂದು ಅವರು ಹೇಳಿದರು.


ನಮ್ಮ ಮಕ್ಕಳು ಮೊಬೈಲ್ ದಾಸರಾಗಿದ್ದಾರೆ, ನಾವು ದಾಸಶ್ರೇಷ್ಟರಾಗಿದ್ದೇವೆ. ನಮ್ಮ ತನವನ್ನೇ ಕಳೆದುಕೊಂಡಿದ್ದೇವೆ. ಮಕ್ಕಳೆದುರು ನಾವು ಔಟ್ ಡೇಟೆಡ್, ಅವರು ಅಪ್ ಡೇಟೆಡ್ ಆಗುತ್ತಿದ್ದಾರೆ. ಇಂದಿನ ಅಗತ್ಯಕ್ಕೆ ತಕ್ಕಂತೆ ಅವರಿಗೆ ಶಿಕ್ಷಣ ಕೊಡಬೇಕಾದ ಅಗತ್ಯವಿದೆ. ಶಿಕ್ಷಣ ಇಲಾಖೆ ಹೊಸ ಹೊಸ ಕಾರ್ಯಕ್ರಮಗಳ ಮೂಲಕ ಮಕ್ಕಳ ಶಿಕ್ಷಣ ಮತ್ತು ಶಾಲೆಗಳ ಅಭಿವೃದ್ಧಿಗೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ದಾನಿಗಳನ್ನು ಒಳಗೊಳಿಸಿಕೊಳ್ಳುವಂತಹ ಉತ್ತಮ ಕಾರ್ಯಕ್ರಮವನ್ನು ಇಲಾಖೆ ಆರಂಭಿಸಿದೆ ಎಂದು ರವಿ ಭಜಂತ್ರಿ ಹೇಳಿದರು.


ವಿಜ್ಞಾನ ಉಪಕರಣಗಳನ್ನು ದೇಣಿಗೆಯಾಗಿ ನೀಡಿರುವ ಪ್ರಯತ್ನ ಸಂಘಟನೆಯ ಕಾರ್ಯವನ್ನು ಪ್ರಶಂಸಿಸಿದ ಭಜಂತ್ರಿ, ಸರಕಾರಿ ಶಾಲೆಗಯ ಕುರಿತ ಕಾಳಜಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮಕ್ಕಳಲ್ಲಿ ವಿಜ್ಞಾನಿಗಳಾಗುವ, ಸಾಧಕರಾಗುವ ಕನಸನ್ನು ಬಿತ್ತಿದ್ದೀರಿ ಎಂದ ಅವರು, ಮಕ್ಕಳಿಗಾಗಿ ಆರಂಭಿಸಲಾಗಿರುವ ವಿವಿಧ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ಮಕ್ಕಳಲ್ಲಿ ಮಾತನಾಡುವುದನ್ನು ಕಲಿಸಲು ಶಾಲೆಯ ಹಂತದಲ್ಲೇ ಮಾತೆಂಬುದು ಜ್ಯೋತಿರ್ಲಿಂಗ ಕಾರ್ಯಕ್ರಮದ ಮೂಲಕ ಪ್ರಯತ್ನಿಸಲಾಗುತ್ತಿದೆ. ಈ ಶಾಲೆಗೆ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸಲು ಮತ್ತು ಹೈಸ್ಕೂಲ್ ಆರಂಭಿಸಲು ಕ್ರಮ ತೆಗೆದುಕೊಲ್ಳಲಾಗುವುದು ಎಂದು ತಿಳಿಸಿದರು.


ಪ್ರಯತ್ನ ಸಂಘಟನೆ ಅಧ್ಯಕ್ಷೆ ಶಾಂತಾ ಆಚಾರ್ಯ ಮಾತನಾಡಿ ಪ್ರಯತ್ನ ಸಂಘಟನೆಯ ಕಾರ್ಯಚಟುವಟಿಕೆಗಳನ್ನು ವಿವರಿಸಿದರು. ಕಳೆದ 12 ವರ್ಷಗಳಿಂದ ಪ್ರತಿ ವರ್ಷ ಕನಿಷ್ಟ 6 ಶಾಲೆ, ಅನಾಥಾಶ್ರಮ, ವೃದ್ಧಾಶ್ರಮ ಮೊದಲಾದ ಅಗತ್ಯವಿರುವ ಸಂಸ್ಥೆಗಳಿಗೆ ದೇಣಿಗೆ ನೀಡಲಾಗುತ್ತಿದೆ. ಚನ್ನಮ್ಮ ನಗರ ಶಾಲೆ ಸರ್ವತೋಮುಖ ಅಭಿವೃದ್ಧಿಯನ್ನು ಕಾಣುತ್ತಿದೆ. ವಿಜ್ಞಾನ ಶಿಕ್ಷಕಿ ಶುಭಾ ಭಟ್ ಅವರು ಬಹಳ ಆಸಕ್ತಿಯಿಂದ ಮಕ್ಕಳನ್ನು ಬೆಳೆಸುತ್ತಿದ್ದು, 6 ತಿಂಗಳ ಹಿಂದೆಯೇ ವಿಜ್ಞಾನ ಉಪಕರಣದ ಅಗತ್ಯತೆ ಕುರಿತು ನಮಗೆ ಪ್ರಸ್ತಾವನೆ ಸಲ್ಲಿಸಿದ್ದರು. ಹಾಗಾಗಿ ಇಂತಹ ಶಾಲೆಗಳಿಗೆ ದೇಣಿಗೆ ನೀಡಲು ನಮಗೆ ಖುಷಿಯಾಗುತ್ತಿದೆ. ಮಕ್ಕಳು ಎಲ್ಲ ಉಪಕರಣಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮವಾಗಿ ಓದುವ ಮೂಲಕ ಭವಿಷ್ಯ ರೂಪಿಸಿಕೊಂಡರೆ ನಾವು ಕೊಟ್ಟಿದ್ದು ಸಾರ್ಥಕವೆನಿಸುತ್ತದೆ ಎಂದು ಅವರು ಹೇಳಿದರು.


ಹಿರಿಯ ಪತ್ರಕರ್ತ ಎಂ.ಕೆ.ಹೆಗಡೆ ಮಾತನಾಡಿ, ಕ್ಷೇತ್ರ ಶಿಕ್ಷಣಾಧಿಕಾರಿ ರವಿ ಭಜಂತ್ರಿ ಅವರು ಯಾವುದೇ ತಾಲೂಕಿಗೆ ಹೋದರೂ ಹೊಸ ಹೊಸ ಯೋಜನೆಗಳ ಮೂಲಕ ಅಲ್ಲಿ ತಮ್ಮ ಹೆಜ್ಜೆ ಗುರುತನ್ನು ಮೂಡಿಸಿಯೇ ಬರುತ್ತಾರೆ. 25 ವರ್ಷ ಸೇವೆ ಸಲ್ಲಿಸಿರುವ ಶಿಕ್ಷಕರಿಗೆ ಅವರಿದ್ದಲ್ಲೇ ಹೋಗಿ ಅವರ ಸಮಸ್ಯೆ ಬಗೆಹರಿಸಿ, ನೀವು ಇಲಾಖೆಯ ಆಸ್ತಿ ಎಂದು ಸನ್ಮಾನಿಸಿ ಬರುವ ಹೊಸ ಸಂಪ್ರದಾಯವನ್ನು ಆರಂಭಿಸಿದ್ದಾರೆ ಎಂದರು.

ಪ್ರಯತ್ನ ಸಂಘಟನೆ ಕಳೆದ 12 ವರ್ಷಗಳಿಂದ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದೆ. ಇದ್ದವರಿಂದ ಪಡೆದು ಇಲ್ಲದವರಿಗೆ ಹಂಚುವ ಕಾರ್ಯವನ್ನು ವ್ಯವಸ್ಥಿತವಾಗಿ ಮಾಡಿಕೊಂಡು ಬರುತ್ತಿದೆ. ಈ ಶಾಲೆಯ ಅಭಿವೃದ್ಧಿಗೆ ಕಳೆದ 4 -5 ವರ್ಷದಿಂದ ನಾವೆಲ್ಲ ಸೇರಿ ಪ್ರಯತ್ನಿಸುತ್ತಿದ್ದೇವೆ. ಇನ್ನೂ ಹಲವಾರು ಕೆಲಸಗಳು ಆಗಬೇಕಿದೆ. ಮುಂದಿನ ದಿನಗಳಲ್ಲಿ ಶಾಲೆಗೆ ಅಗತ್ಯವಾದ ಸಭಾಗ್ರಹ, ಸ್ಮಾರ್ಟ್ ಬೋರ್ಡ್, 9ನೇ ತರಗತಿ ಆರಂಭ ಮತ್ತಿತರ ಸೌಲಭ್ಯಗಳ ಕುರಿತು ಪ್ರಯತ್ನಿಸಲಗುವುದು ಎಂದು ಅವರು ಹೇಳಿದರು.


ಈ ವೇಳೆ ಬಿಇಒ ರವಿ ಭಜಂತ್ರಿ, ಪ್ರಯತ್ನ ಸಂಘಟನೆ ಅಧ್ಯಕ್ಷೆ ಶಾಂತಾ ಆಚಾರ್ಯ ಮತ್ತು ದಾನಿ ಶೋಭಾ ರಘುನಾಥ ಅವರನ್ನು ಸನ್ಮಾನಿಸಲಾಯಿತು. ಎಂ.ಎಸ್. ಮಾನೆ ಸ್ವಾಗತಿಸಿದರು. ಶುಭಾ ಭಟ್ ಕಾರ್ಯಕ್ರಮ ನಿರೂಪಿಸಿದರು. ಮುಖ್ಯಾಧ್ಯಾಪಕ ಎಸ್.ಬಿ.ಹುಬ್ಬಳ್ಳಿ ವಂದಿಸಿದರು. ಶೋಭಾ ರಘುನಾಥ, ಮಹಾದೇವ ಗೋಕಾಕ, ಶೀಲಾ ದೇಶಪಾಂಡೆ, ಸುನಿತಾ ಭಟ್, ವರದಾ ಭಟ್, ಮಂಗಳಾ ಧಾರವಾಡಕರ್, ವೀಣಾ ದೇಶಪಾಂಡೆ, ಉಷಾ ಬಾಳಿಗಾ, ವೀಣಾ ಕುಲಕರ್ಣಿ, ಪದ್ಮಾ ವೆರ್ಣೇಕರ್, ಪೂಜಾ ಆಚಾರ್ಯ, ವಂದನಾ ಬರ್ಗೆ, ರೇಣುಕಾ ಕುಲಕರ್ಣಿ, ಬಿ.ಎಫ್.ನದಾಫ್, ಎ.ಕೆ.ಜೋಶಿ, ನಿರ್ಮಲಾ ತೋಟಗಿ, ಲೀಲಾವತಿ ಹೊಸಮನಿ, ಸೌಮ್ಯಾ ಮಾನೆ, ಯಶ್ ಬಡಾಲೆ ಮೊದಲಾದವರು ಇದ್ದರು.






Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ