ಮುದ್ದೇಬಿಹಾಳ:ಕುರಾನ್ ಉಲ್ಲೇಖ ಪ್ರಕಾರ ಇಬ್ರಾಹಿಂ ಅವರಿಗೆ ಕನಸಿನಲ್ಲಿ ದೇವನಿಂದ ಸಂದೇಶ ಬರುತ್ತದೆ,ನಿನಗೆ ಪವಿತ್ರವಾದ ಒಂದು ಜೀವವನ್ನು ಬಲಿ ಕೊಡು ಅಂತ,ಅವಾಗ ಆತನಿಗೆ ಪವಿತ್ರವಾದ ಜೀವ ಎಂದರೆ ಅವರ ಮಗ ಅವನನ್ನೆ ಬಲಿ ಕೊಡಲು ಮುಂದಾದಾಗ ದೇವನು ಭಕ್ತಿಗೆ ಮೆಚ್ಚಿ ಮಗನ ಜಾಗದಲ್ಲಿ ಕುರಿಯನ್ನು ಬದಲಾಯಿಸಿ ಬಲಿಯನ್ನು ಕೊಡುತ್ತಾರೆ,ಅವತ್ತಿನಿಂದ ಇದಕ್ಕೆ ಬಕ್ರೀದ್ ಹಬ್ಬ ಎಂದು ಆಚರಣೆ ಮಾಡುತ್ತಾರೆ, ಎಂದು ಮುದ್ದೇಬಿಹಾಳ ಸಿಪಿಐ ಮಹಮ್ಮದ್ ಫಸಿಯುದ್ಧಿನ ಹೇಳಿದರು.ಅವರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಗುರುವಾರ ಬಕ್ರೀದ್ ಹಬ್ಬದ ಶಾಂತಿ ಪಾಲನಾ ಸಭೆಯಲ್ಲಿ ಮಾತನಾಡಿದರು. ತಾಲ್ಲೂಕಿನ ಆದ್ಯಂತ ಶಾಂತಿ ಸೌಹಾರ್ದತೆಯಿಂದ ಅಹಿತಕರ ಘಟನೆಗಳು ನಡೆಯದಂತೆ ಹಬ್ಬವನ್ನು ಆಚರಿಸಿ ಎಂದರು.
ಅಪರಾಧ ವಿಭಾಗದ ಪಿಎಸ್‌ಐ ಆರ್.ಎಸ್.ಬಂಗಿ ಮಾತನಾಡಿ, ತ್ಯಾಗ ಬಲಿದಾನದ ಸಂಕೇತ ಈ ಬಕ್ರೀದ್ ಹಬ್ಬವಾಗಿದೆ,ಅದನ್ನು ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸಿ ಎಂದರು.
ಈ ವೇಳೆ ಸಭೆಗೆ ಆಗಮಿಸಿದ ಮುಖಂಡ ಹರೀಶ್ ನಾಟಿಕಾರ, ಸದ್ದಾಂ ಕುಂಟೋಜಿ, ರಫೀಕ ಶಿರೋಳ, ಸಿಕಂದರ್ ಜಾನವೇಕರ,ಬಾಬಾ ಪಟೇಲ್ ಮಾತನಾಡಿ, ಬಕ್ರೀದ್ ಹಬ್ಬದ ಹಿನ್ನೆಲೆ, ಆಚರಣೆ ಮತ್ತು ತಾಲ್ಲೂಕಿನಲ್ಲಿ ಶಾಂತಿ ಸೌಹಾರ್ದತೆಯಿಂದ ಆಚರಣೆ ಮಾಡುತ್ತಾರೆ. ಎಂದರು.
ಈ ಸಂದರ್ಭದಲ್ಲಿ ಪ್ರೋಬೆಷಿನರಿ ಪಿಎಸ್‌ಐ ಸತೀಶ,ಸಿಬ್ಬಂದಿಗಳಾದ ಸಲೀಂ ಹತ್ತರಕಿ,ಪ್ರಕಾಶ ಪೂಜಾರಿ,ರಾಘು ಇಂಗಳಗಿ,ಸೇರಿದಂತೆ ಇದ್ದರು
