ಬಳ್ಳಾರಿ. ಜು. 18: ವಿದ್ಯೆ ಕಲಿತು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಬೇಕೆಂದು ಬಳ್ಳಾರಿ ಸೇವಾ ಸಮಿತಿಯ ಸದಸ್ಯ ಉದ್ಯಮಿ ಶ್ರೀನಿವಾಸರಾವ್(ವಾಸು) ವಿದ್ಯಾರ್ಥಿಗಳಿಗೆ ಕರೆ ನೀಡಿದರು . ಶುಕ್ರವಾರ ಬಳ್ಳಾರಿ ಸೇವಾ ಸಮಿತಿ ವತಿಯಿಂದ ಆಂಧ್ರಾಳು ಡಿ.ಸಿ.ನಗರದ ಸರ್ಕಾರಿ ಶಾಲೆಯ ಆವರಣದಲ್ಲಿ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸೇವಾ ಸಮಿತಿ ಕಾರ್ಯದರ್ಶಿ ಉದ್ಯಮಿ ವಿ ರಾಮಚಂದ್ರ
ಮಾತನಾಡಿ, ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಉತ್ತಮ ಶಿಕ್ಷಕರಿಂದ ಗುಣಮಟ್ಟದ ಶಿಕ್ಷಣ ಪಡೆದು ಕಷ್ಟಪಟ್ಟು ಓದಿ ಉನ್ನತ ಅಧಿಕಾರಿಗಳಾಗಿ ಸಮಾಜಕ್ಕೆ ನೀವು ಒಂದು ಕೊಡುಗೆಯನ್ನು ನೀಡಬೇಕು ಎಂದರು. ಸಮಿತಿ ಅಧ್ಯಕ್ಷ ಸುರೇಂದ್ರ ಕುಮಾರ ಬಾಪ್ನ ಮಾತನಾಡಿ ಸಮಿತಿ ವತಿಯಿಂದ ಕಳೆದ ಹತ್ತು ವರ್ಷಗಳಿಂದ ಪುಸ್ತಕ, ಬಾಗ್ಸ್, ಪೆನ್ಸ್ ಉಚಿತ ವಾಗಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ, ಈ ವರ್ಷವು ಎಂಟು ಸರ್ಕಾರಿ ಶಾಲೆಗಳ ಸುಮಾರು ಒಂದು ಸಾವಿರ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಿಸುತ್ತೇವೆ ಎಂದು ಹೇಳಿದರು. ಹಾಗೆಯ ಸಮಾಜಕ್ಕೆ ನೀಡುತ್ತಿರುವ ಸೇವೆಯನ್ನು ವಿವರಿಸಿದರು. ಈ ಸಂದರ್ಭದಲ್ಲಿ 180ಕ್ಕು ಹೆಚ್ಚು ವಿದ್ಯಾರ್ಥಿಗಳಿಗೆ ಬರಿಯುವ ಪುಸ್ತಕಗಳು, ಪೆನ್ನು, ಕಂಪಾಕ್ಸ್, ಸ್ಕೆಚ್ ಪೆನ್ನು, ಬಾಗ್ಸ್ ಮುಂತಾದವು ಹಂಚಿದರು. ವಾಣಿಜ್ಯ ಕೈಗಾರಿಕೆ ಸಂಸ್ಥೆಯ ನಿಕಟ ಪೂರ್ವ ಅಧ್ಯಕ್ಷ್ ಯಸ್ವಂತ ರಾಜ್ ನಾಗಿರೆಡ್ಡಿ ಮಾತನಾಡಿ ಸೇವಾ ಸಮಿತಿಯು ಮಾಡುತ್ತಿರುವ ಸೇವೆಯನ್ನು ಅಭಿನಂದಿಸಿದರು. ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಾಣಿಜ್ಯ ಕೈಗಾರಿಕೆ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಜಿ.ನಗೇಶ್, ರಾಮಚಂದ್ರ, ಶಾಲೆಯ ಎಸ್ಡಿಎಂಸಿ ಅಧ್ಯಕ್ಷರು ಸಂಗಮೆಶ್ , ಪತ್ರಕರ್ತ ಟಿ.ನಾಗಭೂಷಣ್ , ಶಿಕ್ಷಕರು ಚಂಪಾವತಿ, ಕೊತುಬಾಳು, ರಾಘವೇಂದ್ರ, ಅಶೋಕ್, ಮುಂತಾದವರು ಉಪಸ್ಥಿತರಿದ್ದರು.ಶಾಲೆಯ ಮುಖ್ಯೋಪಾಧ್ಯಾಯರು ತಿಪ್ಪೇಸ್ವಾಮಿ ಪ್ರಾಸ್ತಾವಿಕ ಭಾಷಣ ಮಾಡಿದರು. ಶಿಕ್ಷಕ ಸೂಲಪಾಣಿ ಸ್ವಾಗತಿಸಿದರು. ಶಿಕ್ಷಕ ಕೇಶವ ರೆಡ್ಡಿ ನಿರೂಪಿಸಿದರು.ವೀರೇಶ್ ವಂದನಾರ್ಪಣೆ ಸಲ್ಲಿಸಿದರು.