ಬಳ್ಳಾರಿ, ಜೂನ್ 29: ಬಳ್ಳಾರಿಯ ಹೆಮ್ಮೆಯ ರಂಗಭೂಮಿ ದಿಗ್ಗಜ ಬಳ್ಳಾರಿ ರಾಘವ ಅವರ 146ನೇ ಜಯಂತಿ ಅಂಗವಾಗಿ ಆಗಸ್ಟ್ 2 ಮತ್ತು 3, 2026ರಂದು ರಾಘವ ಮೆಮೋರಿಯಲ್ ಅಸೋಸಿಯೇಷನ್, ಬಳ್ಳಾರಿ ವತಿಯಿಂದ ರಾಜ್ಯ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಕಳೆದ 17 ವರ್ಷಗಳಿಂದ ನಿರಂತರವಾಗಿ ಕನ್ನಡ ಹಾಗೂ ತೆಲುಗು ರಂಗಭೂಮಿ ಕಲಾವಿದರಿಗೆ ರಾಜ್ಯ ಮಟ್ಟದ ಬಳ್ಳಾರಿ ರಾಘವ ರಾಜ್ಯ ಪ್ರಶಸ್ತಿ ಪ್ರದಾನ ಮಾಡುತ್ತ ಬಂದಿರುವ ಅಸೋಸಿಯೇಷನ್, ಈ ವರ್ಷವೂ ಅರ್ಹ ಕಲಾವಿದರಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಪ್ರಶಸ್ತಿಗೆ ಅರ್ಜಿ ಸಲ್ಲಿಸುವ ಕಲಾವಿದರು 50 ವರ್ಷ ಮೇಲ್ಪಟ್ಟವರಾಗಿದ್ದು, ಕನಿಷ್ಠ 20 ವರ್ಷಗಳ ಕಾಲ ರಂಗಭೂಮಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರಬೇಕು. ತಮ್ಮ ರಂಗಸೇವೆಯನ್ನು ಪ್ರತಿಬಿಂಬಿಸುವ ಬಯೋಡೇಟಾ ಹಾಗೂ ಅಗತ್ಯ ದಾಖಲೆಗಳನ್ನು ಜುಲೈ 15, 2026ರೊಳಗಾಗಿ ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಗೌರವ ಕಾರ್ಯದರ್ಶಿ ಶ್ರೀ ಎನ್. ಪ್ರಕಾಶ್ ಅವರನ್ನು 94481 24243 ಸಂಖ್ಯೆಯಲ್ಲಿ ಸಂಪರ್ಕಿಸಬಹುದು.
ಬಳ್ಳಾರಿ ರಾಘವ ರಾಜ್ಯ ಪ್ರಶಸ್ತಿ ರಾಜ್ಯ ಮಟ್ಟದ ರಂಗಭೂಮಿ ಕಲಾವಿದರಿಗೆ ಗೌರವ ಮತ್ತು ಪ್ರೋತ್ಸಾಹ ನೀಡುವ ಮಹತ್ವದ ಪ್ರಶಸ್ತಿಯಾಗಿದ್ದು, ಅರ್ಹ ಕಲಾವಿದರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ರಾಘವ ಮೆಮೋರಿಯಲ್ ಅಸೋಸಿಯೇಷನ್ ಅಧ್ಯಕ್ಷ ಶ್ರೀ ಕೆ. ಕೊಟೇಶ್ವರ ರಾವ್ ಹಾಗೂ ಗೌರವ ಕಾರ್ಯದರ್ಶಿ ಶ್ರೀ ಎನ್. ಪ್ರಕಾಶ್ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.