Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕಾಂಗ್ರೇಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ಬುದ್ಧಿಬ್ರಮಣೆ : ಎಂ.ಎಂ.ಹಿರೇಮಠ


ಗದಗ- ರಾಷ್ಟ್ರೀಯ ಕಾಂಗ್ರೇಸ್ ಪಕ್ಷದ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರು ಚುನಾವಣಾ ಪ್ರಚಾರದ ವೇಳೆ ಭಾಷಣ ಮಾಡುವಾಗ ಕುರಾನ್ ಓದುತ್ತಿರುವಾಗ ಹಾಗು ನಮಾಜ್ ಮಾಡುತ್ತಿರುವಾಗ ವಿಷ ಸರ್ಪ ಬಂದರೆ ನಮಾಜ್ ಮಾಡುವುದನ್ನು ಬಿಟ್ಟು ಅದನ್ನು ಕೊಲ್ಲಬೇಕು ಎಂದು ಕುರಾನ್‌ದಲ್ಲಿ ಉಲ್ಲೇಖಿಸಲಾಗಿದೆ.  ಅದರಂತೆ ಈಗ ನೀವು ನಮಾಜ್ ಮಾಡುವಾಗ ಬಿಜೆಪಿ ಹಾಗು ಆರ್‌ಎಸ್‌ಎಸ್ ಕಾರ್ಯಕರ್ತರು ವಿಷ ಸರ್ಪಗಳಿದ್ದಂತೆ ಅವರನ್ನು ಕೊಲ್ಲದಿದ್ದರೆ ನೀವು ಬದುಕುವದಿಲ್ಲಾ ಎಂದು ಕಾಂಗ್ರೇಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಬಹಿರಂಗ ಸಭೆಯಲ್ಲಿ ಮಾತನಾಡಿದ್ದು,  ಅವರಿಗೆ ಬುದ್ಧಿಬ್ರಮಣೆ ಆಗಿದ್ದು ಅವರನ್ನು ಕೂಡಲೇ ಹುಚ್ಚ ಆಸ್ಪತ್ರೆಗೆ ಸೇರಿಸಬೇಕೆಂದು ಬಿಜೆಪಿ ಜಿಲ್ಲಾ ವಕ್ತಾರರಾದ ಎಂ.ಎಂ.ಹಿರೇಮಠರವರು ಆಗ್ರಹಿಸಿದ್ದಾರೆ.

ಅವರಿಂದು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿ ಸದಾ ಅಲ್ಪಸಂಖ್ಯಾತರನ್ನು ಓಲೈಕೆ ಮಾಡುತ್ತಿದ್ದು ಹಿಂದುಗಳನ್ನು ಸದಾ ದ್ವೇಷಿಸುತ್ತಾ ಬರುತ್ತಿದ್ದು,  ಖರ್ಗೆಯವರು ಅಧ್ಯಕ್ಷರಾದ ನಂತರ ಎಲ್ಲ ಚುನಾವಣೆಯಲ್ಲಿಯೂ ಸೊಲುತ್ತಿದ್ದು, ಹತಾಷರಾಗಿರುವ ಖರ್ಗೆಯವರು ದ್ವೇಷ ಭಾಷಣ ಮಾಡಿದ್ದಾರೆ.  ಖರ್ಗೆಯವರ ಹೇಳಿಕೆಯಿಂದ ಸಮಾಜದಲ್ಲಿ ಅಶಾಂತಿ ಮೂಡಿಸುತ್ತಿದೆ. ಬಿಜೆಪಿ ಕಾರ್ಯಕರ್ತರನ್ನ ಕೊಲ್ಲಬೇಕೆಂದು ಅಲ್ಪಸಂಖ್ಯಾತರನ್ನು ಪ್ರಚೋದಿಸುತ್ತಿರುವರು.  ಇದರಿಂದ ದೇಶದಲ್ಲಿರುವ ಕೊಟ್ಯಾಂತರ ಬಿಜೆಪಿ, ಆರ್‌ಎಸ್‌ಎಸ್ ಕಾರ್ಯಕರ್ತರಿಗೆ ಜೀವದ ಭಯವನ್ನು ಖರ್ಗೆಯವರು ಹಾಕಿರುವರು.  ಮುಸ್ಲಿಂ ಜನಾಂಗವನ್ನು ಎತ್ತಿಕಟ್ಟಿ ಹಿಂದುಗಳನ್ನು ಕೊಲ್ಲಲು ಬಹಿರಂಗವಾಗಿ ಹೇಳಿಕೆ ನೀಡಿರುವದು ಇದೊಂದು ಖಂಡನಾರ್ಹ ಹೇಳಿಕೆಯಾಗಿದೆ.  ಧರ್ಮ, ಜನಾಂಗ, ಪ್ರಾದೇಶಿಕ ಗುಂಪುಗಳು ಮತ್ತು ಸಮುದಾಯಗಳ ನಡುವೆ ದ್ವೇಷ, ಹಗೆತನ ಉಂಟು ಮಾಡುವ ಹೇಳಿಕೆಯಾಗಿದೆ.  ಸತತ ಸೋಲಿನಿಂದ ಕಂಗೆಟ್ಟಿರುವ ಬ್ರಷ್ಟ ಕಾಂಗ್ರೇಸ್ ನಾಯಕರುಗಳು ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಪ್ರಯತ್ನಿಸುತ್ತಿರುವರು.

ಕಾಂಗ್ರೇಸ್ ಪಕ್ಷವನ್ನು ಸಂಪೂರ್ಣವಾಗಿ ನಿರ್ಣಾi ಮಾಡಲು ಮಲ್ಲಿಕಾರ್ಜುನ ಖರ್ಗೆ ಹಾಗು ರಾಹುಲ್ ಗಾಂಧಿ ಇಬ್ಬರೇ ಸಾಕು.  ಈಗಾಗಲೇ ದೇಶದಿಂದ ಕಾಂಗ್ರೇಸ್ ಪಕ್ಷವನ್ನು ಜನ ಒಡಿಸಿದ್ದು,  ಕೇವಲ ೩ ರಾಜ್ಯಗಳಲ್ಲಿ ಮಾತ್ರ ಅಧಿಕಾರದಲ್ಲಿದ್ದು ಮುಂದಿನ ದಿನಮಾನಗಳಲ್ಲಿ ಈ ೩ ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷ ದಿವಾಳಿಯಾಗಲಿದ್ದು, ಜನರಿಗೆ ಈಗಾಗಲೇ ಕಾಂಗ್ರೇಸ್ ಪಕ್ಷದ ಬಗ್ಗೆ ಬ್ರಮನಿರಸನವಾಗಿದ್ದು,  ಬರಲಿರುವ ೫ ರಾಜ್ಯಗಳಲ್ಲಿ ಕಾಂಗ್ರೇಸ್ ಪಕ್ಷ ಹೇಳ ಹೆಸರಿಲ್ಲದಂತೆ ದೂಳಿಪಟವಾಗಲಿದೆ.  ವಯಸ್ಸಾಗಿರುವ ಮಲ್ಲಿಕಾರ್ಜುನ ಖರ್ಗೆಯವರು ಇನ್ನಾದರೂ ಅಲ್ಪಸಂಖ್ಯಾತರನ್ನು ಓಲೈಸುವುದನ್ನು ಬಿಟ್ಟು ಕಾಂಗ್ರೇಸ್ ಪಕ್ಷಕ್ಕೆ ಹಿಂದುಗಳು ಕೂಡ ಮತವನ್ನು ಹಾಕಿದ್ದನ್ನು ನೆನಪಿಡಬೇಕು.  ಕೂಡಲೇ ಮಲ್ಲಿಕಾರ್ಜುನ ಖರ್ಗೆಯವರು ತಮ್ಮ ಹೇಳಿಕೆಯ ಬಗ್ಗೆ ದೇಶದ ಜನರ ಕ್ಷೇಮೆ ಕೋರಬೇಕೆಂದು ಎಂ.ಎಂ.ಹಿರೇಮಠರವರು ಆಗ್ರಹಿಸಿದ್ದಾರೆ.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ