ರನ್ನ ಬೆಳಗಲಿ: ಜು.೧೪., ಪಟ್ಟಣದ ಶ್ರೀ ಸಿದ್ಧಾರೂಢ ಸರಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಗ್ರಾಮೀಣ ಸೊಗಡಿನ ರೊಟ್ಟಿ ತಟ್ಟುವ ಸ್ಪರ್ಧೆ ಆಯೋಜಿಸಲಾಗಿತ್ತು.
ಶಾಲೆಯ ಪ್ರಭಾರ ಮುಖ್ಯ ಗುರುಮಾತೆ ಎಸ್.ಎಸ್.ಉದಪುಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕರ್ನಾಟಕ ಸರ್ಕಾರದ ಆದೇಶದಂತೆ ಭಾರತೀಯ ಭಾಷಾ ಶಿಬಿರದ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳು ಸಾಂಪ್ರದಾಯಿಕ ಅಡುಗೆಯನ್ನು ಶಿಕ್ಷಕರ ಸಹಾಯದಿಂದ ತಯಾರಿಸುವ ಯೋಜನೆ ಇದಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳತ್ತ ಭಾಗವಹಿಸಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಲಿವೆ ಎಂದರು.
ಶಾಲಾ ಮಕ್ಕಳು ದೇಶಿ ಉಡುಪು ತೊಟ್ಟು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಜೋಳದ ರೊಟ್ಟಿ, ಸಜ್ಜಿ ರೊಟ್ಟಿ , ಗೋವಿನ ಜೋಳದ ರೊಟ್ಟಿ, ಕರೆದ ಮೆಣಸಿನಕಾಯಿ, ಕೆಂಪು ಚಟ್ನಿ, ಹಸಿ ಮೆಣಸಿನ ಕಾಯಿ ಚಟ್ನಿ, ಟೊಮ್ಯಾಟೋ ಚಟ್ನಿ, ಕೋಸಂಬರಿ, ಮೊಳಕೆಕಾಳಪಲ್ಯ, ಪುಂಡಿಪಲ್ಯ, ಎಣ್ಣೆಗಾಯಿ, ಬೆಂಡೆಕಾಯಿ, ಹೀರೇಕಾಯಿ ವಿವಿಧ ರೀತಿಯ ಖಾದ್ಯ ಪದಾರ್ಥಗಳನ್ನು ತಯಾರಿಸಿ ಉತ್ತರ ಕರ್ನಾಟಕದ ಆಹಾರ ತಯಾರಿಸಿ ಸಂಭ್ರಮಿಸಿದರು. ಪ್ರಥಮ ಲಕ್ಷ್ಮಿ ಭಜಂತ್ರಿ, ದ್ವಿತೀಯ ಧನು ಪಡಸಲಗಿ, ತೃತೀಯ ಮೀನಾಕ್ಷಿ ಲಮಾಣಿ ವಿಜೇತರಾಗಿ ಬಹುಮಾನ ಪಡೆದರು. ಒಟ್ಟು ಹತ್ತು ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಎಂ ಎ ಮುಗಳಖೋಡ, ಎಂ.ಬಿ ಮುರಗೋಡ, ಪಿ.ಕೆ.ಪವಾರ, ವಿ ಎಂ ಹೊಸೂರ, ಲಕ್ಷ್ಮೀ ಶಾಸ್ತ್ರಿ, ಅಕ್ಷತಾ ಕುಲಗೋಡ,ಕಿರಣ ಪವಾರ, ಆನಂದ ಹೊಸಟ್ಟಿ, ಆನಂದ ಚಿಮ್ಮಡ, ಮಂಜುನಾಥ ಪೂಜಾರಿ, ಅನಿಲ ನಡುವಿನಮನಿ, ಆನಂದ ಸೈದಾಪುರ, ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಬಿ ಪಿ ಚೋಪಡೆ,ನಿರೂಪಿಸಿ ವಂದಿಸಿದರು.