ಸಂಕೇಶ್ವರ : ಸಮೀಪದ ಸೊಲ್ಲಾಪುರ ಗೇಟ್ ಬಳಿಯ ಬೆಂಗಳೂರು- ಪೂಣೆ ಹೈವೆ ಸರ್ವಿಸ್ ರಸ್ತೆಯ ಪಕ್ಕದಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದ್ದು,
ಮಹಿಳೆಗೆ 50 ರಿಂದ 55 ವರ್ಷ ವಯಸ್ಸಾಗಿದ್ದು, ಕ್ರಿಮ್ ಬಣ್ಣದ ಪತ್ತಲ ಶರಗಿಗೆ ಮತ್ತು ಪತ್ತಲದ ಕೆಳಬಾಜು ಚಾಕಲೇಟ್ ಮತ್ತು ಬಿಳಿ ಬಣ್ಣದ ಡಿಸೈನ್ ಸಿರೆ ಇದ್ದು, ಕಪ್ಪು ಬಣ್ಣದ ಬ್ಲೌಸ್, ಕೆಂಪು ಬಣ್ಣದ ಲಂಗ ಧರರಿಸಿರುತ್ತಾರೆ.
ಕಿವಿಯಲ್ಲಿ ಕಿವಿಯೋಲೆ, ಮೂಗುತಿ, ಎರಡು ಕೈಗಳಲ್ಲಿ ಬಂದರಂತೆ ಚಾಕಲೇಟ್ ಬಣ್ಣದ ಪ್ಲಾಸ್ಟಿಕ್ ಬಳೆಗಳು,ಕಾಲಲ್ಲಿ ಚಾಳ ಇರುತ್ತದೆ.
ಮೃತಳು ಎರಡು ಕೈ ಕಾಲುಗಳ ಬೆರಳುಗಳಿಗೆ ಕೆಂಪು ಬಣ್ಣದ ನೇಲ್ ಪಾಲೀಶ ಹಚ್ಚಿದ್ದು ಇರುತ್ತದೆ.
ಯಾರಾದರು ವಾರಾಸುದಾರರು ಇದ್ದಲ್ಲಿ ಸಂಕೇಶ್ವರ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ತಿಳಿಸಿದ್ದಾರೆ.
