Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ದೇಶಿಯ ಜವಾರಿ ವಸ್ತುಗಳ ಬಳಕೆಯಿಂದ  ಶರೀರ ಸದೃಢ : ಮಲ್ಲಿಕಾರ್ಜುನ ರೆಡ್ಡೇರ 

 
ನೇಸರಗಿ. ನಮ್ಮ ದೇಶದಲ್ಲಿ ಬೆಳೆಯುವ ಹಾಗೂ ದಿನನಿತ್ಯ ಬಳಕೆ ವಸ್ತುಗಳಾದ ಅಕ್ಕಿ, ಗೋದಿ, ಬೆಲ್ಲ, ಕಾಳು ಬೀಜಗಳು, ಹಾಲು, ಮೊಸರು, ಬೆಣ್ಣೆ, ತುಪ್ಪ, ತರಕಾರಿ  ಇನ್ನೂ ಅನೇಕ ವಸ್ತುಗಳನ್ನು ನಾವು ಭಾರತ ದೇಶದ ಜವಾರಿ ಹಾಗೂ ಸಾವಯವ ವಸ್ತುಗಳ ಬಳಕೆಯಿಂದ ನಮ್ಮ ಶರೀರವನ್ನು ಸದೃಢವಾಗಿಡಲು ನಾವೆಲ್ಲರೂ ಕೈಜೋಡಿಸಬೇಕೆಂದು   ವರದಶ್ರೀ ಫೌಂಡೇಶನ ಇದರ ಅಧ್ಯಕ್ಷರಾದ ಮಲ್ಲಿಕಾರ್ಜುನ ರೆಡ್ಡೇರ  ಹೇಳಿದರು.

     ಅವರು ಸೋಮವಾರದಂದು ಗ್ರಾಮದ ಶ್ರೀ ಚನ್ನವೃಷಬೇಂದ್ರ ಅಜ್ಜನವರ ಲೀಲಾ ಮಠದಲ್ಲಿ ಶ್ರೀ ವರದಶ್ರೀ ಫೌಂಡೇಶನ ಸಹಯೋಗದೊಂದಿಗೆ  ಆಯೋಜಿಸಲಾಗಿದ್ದ ಕಣ್ಣಿನ ಮತ್ತು ಮೂಗು, ಕಿವಿಗಳ ಸಂರಕ್ಷಣೆಗೆ ಸಿದ್ದಿ ಹನಿ ರಸ  ಹಾಕುವ ಕಾರ್ಯಕ್ರಮದಲ್ಲಿ ಮಾತನಾಡಿ ಇಂದು ನಾವು ಬೇಕಾಬಿಟ್ಟಿ ರಾಸಾಯನಿಕ ಮಿಶ್ರಿತ ಹೈಬ್ರಿಡ್  ಆಹಾರ ಪದಾರ್ಥಗಳನ್ನು ತಿಂದು ನಮ್ಮ ಶರೀರವನ್ನು ಹಾಳು ಮಾಡಿಕೊಳ್ಳುತ್ತಿದ್ದು, ಶುದ್ಧ ಜವಾರಿ ಆಕಳಿನ ಹಾಲು, ತುಪ್ಪ ಸೇವಿಸಬೇಕು. ಕನ್ನೇರಿ ಮಠದ ಅನೇಕ ಅರೋಗ್ಯ ರಕ್ಷಕ ಆಹಾರ ಪದಾರ್ಥಗಳು ಲಭಿಸುತ್ತಿದ್ದು ಅದರ ಪ್ರಯೋಜನ ಪಡೆಯಬೇಕು ಎಂದರು.

     ಶ್ರೀ ವಿನಾಯಕ ಕಂಪ್ಯೂಟರ ಶಾಲೆಯ ಅಧ್ಯಕ್ಷ ಬಸವರಾಜ ಹಿರೇಮಠ ಮಾತನಾಡಿ ವರದಶ್ರೀ ಫೌಂಡೇಶನ್ ಹಲವಾರು ಸೋಮವಾರ ದಿನ  ವಾರಗಳ ಕಾಲ ಅಜ್ಜನವರ ದೇವಸ್ಥಾನದಲ್ಲಿ ಸಿದ್ದಿ ಹನಿ ರಸ ಹಾಕಿ ಈ ಭಾಗದ ಜನರ ಕಣ್ಣು ಮತ್ತು ಆರೋಗ್ಯದ ಅಭಿವೃದ್ಧಿಗೆ ಕಾರಣರಾಗಿದ್ದಾರೆ. ಅದಕ್ಕಾಗಿ ಹಲವಾರು ಜನ ಚಸ್ಮಾ ಇದ್ದವರು, ಮಂಜು ಕಾಣುವದು, ಕಣ್ಣು ನೋವು  ವಾಸಿಯಾಗಿವೆ ಎನ್ನುತ್ತಿದ್ದಾರೆ ಎಂದರು.

    ಈ ಸಂದರ್ಭದಲ್ಲಿ ಗುರುಪಾದಯ್ಯ ಚರಂತಿಮಠ, ಅಶೋಕ ಅಗಸಿಮನಿ, ಯಲ್ಲಪ್ಪ ರೊಟ್ಟಿ, ಬಸವರಾಜ ಸಾಲಿಮಠ,  ಚನ್ನಬಸಪ್ಪ ರಾಚಣ್ಣವರ,ನಿವೃತ್ತ ಎ ಎಸ್ ಐ ಎ ಎಚ್ ಬಿದರಿ,ವಿರೂಪಾಕ್ಷ ನೇಸರಗಿ, ಹುಸೇನ್ ಮುಲ್ಲಾ,ಶ್ರೀಮತಿ ಗೀತಾ ಹೆರಂಜಲ್,ಸುನೀತಾ ಜೈನ, ರಾಮನಗೌಡ ಗಡ್ಡೆನವರ, ವರದಶ್ರೀ  ಸ್ವಯಂ ಸೇವಕರಾದ ವಿಶ್ವನಾಥ ರೆಡ್ಡಿ, ಅಭಿಷೇಕ ಚವಾನ, ಚಿರಂಜೀವಿ ಚಿತ್ರೆ, ಅಭಿಷೇಕ ಪಾಟೀಲ, ಈರಣ್ಣ ಅಂಗಡಿ ಸೇರಿದಂತೆ ರಾಜ್ಯದ ಅನೇಕ ಕಡೆಗಳಿಂದ ಚಿಕಿತ್ಸೆಗೆ ಬಂದ ಅಪಾರ ಜನತೆ, ಮುಖಂಡರು, ಹಿರಿಯರು, ರೈತರು, ಮಹಿಳೆಯರು ಪಾಲ್ಗೊಂಡಿದ್ದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ