ಚನ್ನಮ್ಮನ ಕಿತ್ತೂರು,. ಗುರು ಬ್ರಹ್ಮ, ಗುರು ವಿಷ್ಣು, ಗುರುದೇವೋ ಮಹೇಶ್ವರ ಎನ್ನುವ ಮಾತಿನಂತೆ ಶಿಷ್ಯರ ಬೆಳವಣಿಗೆಗೆ, ದೇಶ ಬೆಳವಣಿಗೆಗೆ ಸದಾ ದಾರಿ ತೋರಿಸುವವರು ಗುರುಗಳು, ಅವರ ದಿನಾಚರಣೆಯನ್ನು ಚನ್ನಮ್ಮನ ಕಿತ್ತೂರು ಪಟ್ಟಣದಲ್ಲಿ ಕಿತ್ತೂರು ತಾಲೂಕಿನ ಎಲ್ಲ ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಪ್ರಸಕ್ತ ವರ್ಷದಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಏರ್ಪಡಿಸಿರುವದು ಜನರ ಜೀವ ಉಳಿಸುವ ಕೆಲಸವಾಗಿದೆ ಎಂದು ಬಿಡಿಸಿಸಿ ಬ್ಯಾಂಕ ನಿರ್ದೇಶಕರಾದ ನಾನಾಸಾಹೇಬ ಪಾಟೀಲ ಹೇಳಿದರು.
ಅವರು ಗುರುವಾರದಂದು ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಪಟ್ಟಣದ ಚನ್ನಮ್ಮ ಸರ್ಕಲ್ ನ ರಾಣಿ ಚನ್ನಮ್ಮ ಸಾಂಸ್ಕೃತಿಕ ಭವನದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಶಾಲಾ ಶಿಕ್ಷಣ ಇಲಾಖೆ, ತಾಲೂಕ ಆಡಳಿತ, ತಾ ಪಂ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ, ಕ್ಷೇತ್ರ ಸಮನ್ವಯ ಅಧಿಕಾರಿಗಳ ಸಹಯೋಗದಲ್ಲಿ ಶಿಕ್ಷಕರು ಹಾಗೂ ಅಧಿಕಾರಿಗಳು ಸ್ವಯಂ ಪ್ರೇರಿತ ರಕ್ತದಾನ ಮಾಡಿದ ಸಂದರ್ಭದಲ್ಲಿ ಈ ತರಹ ಶಿಕ್ಷಕರು, ಅಧಿಕಾರಿಗಳು ರಕ್ತದಾನ ಮಾಡುತ್ತಿರುವದು ಖುಷಿ ತಂದಿದ್ದು, ಈ ಕೆಲಸದಿಂದ ಅನೇಕ ಜನರ ಜೀವ ರಕ್ಷಣೆ ಮಾಡುವ ಕೆಲಸ ಆಗುತ್ತದೆ ಎಂದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಚನ್ನಬಸಪ್ಪ ತುಬಾಕಿ, ಡಾ. ಜಗದೀಶ ಹಲಸಗಿ,ಸಿ ಪಿ ಐ ಶಿವಾನಂದ ಗುಡಗನಟ್ಟಿ, ವಿಜಯ ಪಾಟೀಲ ಸೇರಿದಂತೆ ತಾಲೂಕಿನ ಮುಖಂಡರು, ಅಧಿಕಾರಿಗಳು, ಶಿಕ್ಷಕರು, ಪಾಲ್ಗೊಂಡು ಶಿಕ್ಷಕರ ದಿನಾಚರಣೆ ದಿನ ರಕ್ತದಾನ ಮಾಡಿ ಜನೋಪಯೋಗಿ ಮಾದರಿ ಕೆಲಸ ಮಾಡಿದರು.