Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಜಗದೀಶ್ ಶೆಟ್ಟರ ಪರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ   ಭರ್ಜರಿ ಪ್ರಚಾರ


ಬೆಳಗಾವಿ: ಮೋದಿಯವರು ಮತ್ತೊಮ್ಮೆ ಪ್ರಧಾನಿ ಆಗಬೇಕು ಅನ್ನೋದು ನನ್ನ ಹಾಗೂ ದೇಶದ ಜನರ  ಸಂಕಲ್ಪ.‌ ರಾಜ್ಯದಲ್ಲಿ 28-28 ಕ್ಷೇತ್ರಗಳನ್ನು ಬಿಜೆಪಿ-ಜೆಡಿಎಸ್ ಗೆಲ್ಲಬೇಕು. ಶೆಟ್ಟರ ಅವರನ್ನು ಗೆಲ್ಲಿಸುವುದರ ಮೂಲಕ ಮೋದಿ ಕೈ ಬಲಪಡಿಸಿ, ಈ ಸಂಕಲ್ಪಕ್ಕೆ ನೀವೆಲ್ಲರೂ ಕೈ ಜೋಡಿಸಿಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದರು.


ಬೆಳಗಾವಿಯ ಬಾಳೆಕುಂದ್ರಿ ಗ್ರಾಮದಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಅವರ ಪರವಾದ ಪ್ರಚಾರ ಪ್ರಚಾರ ಸಮಾವೇಶದಲ್ಲಿ ಭಾಷಣ ಮಾಡಿದ ವಿಜಯೇಂದ್ರ ಅವರು, 10 ದಿನದ ಹಿಂದೆ ಬಿಜೆಪಿ ಪ್ರಣಾಳಿಕೆ ಬಿಡುಗಡೆಯಾತ್ತು. ಆಗ ಮೋದಿ ಒಂದು ಮಾತು ಹೇಳಿದರು. ಮೈ ಇಸ್ ದೇಶ್ ಕೋ ರುಕ್ನೆ ನಹಿ ದೂಂಗಾ. ಮೈ ಇಸ್ ದೇಶ್ ಕೋ ದುಕ್ನೆ ನಹಿ ದೂಂಗಾ ಅಂತ ಮೋದಿ ಹೇಳಿದ್ದಾರೆ. 2008 ರಲ್ಲಿ ಮೋದಿ ಪ್ರಧಾನಿಯಾದಾಗ ಈ ದೇಶಕ್ಕೆ ಭವಿಷ್ಯ ಇಲ್ಲ ಎನ್ನುವ ಮಾತು ಆಡುತ್ತಿದ್ದರು.‌ ಮೋದಿಯವರು ಭ್ರಷ್ಟಾಚಾರ ಮುಕ್ತ ಆಡಳಿತ ಮಾಡಿ ತೋರಿಸಿದ್ದಾರೆ. ಭಾರತವನ್ನು ವಿಶ್ವದ ಅಗ್ರಗಣ್ಯ ದೇಶಗಳೊಂದಿಗೆ ಕೊಂಡೊಯ್ಯಬಹುದು ಎಂದು ಮೋದಿ ತೋರಿಸಿದ್ದಾರೆ. ಒಂದು ದಿನವೂ ಸಹ ರಜೆ ವಿಶ್ರಾಂತಿ ತೆಗೆದುಕೊಳ್ಳದೆ ಮೋದಿ ಕೆಲಸ ಮಾಡುತ್ತಿದ್ದಾರೆ.‌ ಇಂತಹ ಪ್ರಧಾನಿ ನಮಗೆ ಸಿಕ್ಕಿದ್ದು ಸಂತೋಷ ಮತ್ತು ಹೆಮ್ಮೆಯ ವಿಚಾರ ಎಂದು ತಿಳಿಸಿದರು.‌


ಆರ್ಟಿಕಲ್ 370 ಕಾಂಗ್ರೇಸ್ ಪಕ್ಷದ ಪಾಪದ ಕೂಸು. ಅದರಿಂದ ಕಾಶ್ಮೀರ ಉಗ್ರರ ಅಡಗುತಾಣ ಆಗುತಿತ್ತು.‌ ಅಲ್ಲಿರುವ ಹಿಂದೂಗಳು ಕುಟುಂಬಸ್ಥನ್ನು ಕಳೆದುಕೊಂಡಿದ್ದಾರೆ. ಇಷ್ಟೆಲ್ಲಾ ಆದರೂ ಸಹ ಕಾಂಗ್ರೇಸ್ 370 ಆರ್ಟಿಕಲ್ ತೆಗೆದುಹಾಕಲಿಲ್ಲ. ಆದರೆ ಕೊಟ್ಟ ಭರವಸೆಯಂತೆ ಆರ್ಟಿಕಲ್ 370 ತೆಗೆದುಹಾಕಲಾಯಿತು ಎಂದರು


ಯಡಿಯೂರಪ್ಪ ಸಿಎಂ ಆಗುವ ಮುನ್ನ ಬರಗಾಲ ಇತ್ತು. ಯಡಿಯೂರಪ್ಪ ಸಿಎಂ ಆದ ನಂತರ ಮಹಾಪ್ರವಾಹ ಆಗಿ ಬೆಳೆ ಮನೆ ಎಲ್ಲವೂ ಸಹ ಹಾನಿಯಾಗಿತ್ತು. ಯಡಿಯೂರಪ್ಪ ಏಕಾಂಗಿಯಾಗಿದ್ದರು ಕ್ಯಾಬಿನೇಟ್ ಸಹ ಇನ್ನು ಆಗಿರಲಿಲ್ಲ. ಪ್ರತಿ ಹೆಕ್ಟರ್ ಗೆ 14 ಸಾವಿರ, ಮನೆ ಕಳೆದುಕೊಂಡವರಿಗೆ 5 ಲಕ್ಷ ರೂ. ಪರಿಹಾರ ಕೊಟ್ಟಿದ್ದರು. ಈಗಲೂ ಸಹ ಬರಗಾಲ ಇದೆ ಆದರೆ ಕಾಂಗ್ರೇಸ್ ಸರ್ಕಾರ ಬರೀ 2 ಸಾವಿರ ಕೊಡುತ್ತಿದ್ದಾರೆ ಎಂದು ತಿಳಿಸಿದರು.


ನೇಹಾ ಹತ್ಯೆ ಪ್ರಕರಣ ಆಗಿರಬಹುದು, ಅಧಿವೇಶ  ನಡೆಯುವ ಸಂದರ್ಭದಲ್ಲಿ ಪರಿಶಿಷ್ಠ ಜಾತಿಯ ಮಹಿಳೆಯನ್ನ ವಿವಸ್ತ್ರಗೊಳಿಸಲಾಯ್ತು. ಅಲ್ಲಿಗೆ ಯಾವ ಸಚಿವರು ಶಾಸಕರು ಹೋಗಿ ಅವರಿಗೆ ಸಾಂತ್ವಾನ‌ ಹೇಳುವ ಕೆಲಸ ಮಾಡಲಿಲ್ಲ.‌ ಮೊನ್ನೆಯಷ್ಟೆ ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಪ್ರಕರಣ ಆಗಿದೆ. ಕಾಂಗ್ರೆಸ್ ಅಧಿಕಾರದಲ್ಲಿ ಕಾನೂನು ಸುವ್ಯವಸ್ಥೆ ‌ಸಂಪೂರ್ಣ ಹಾಳಾಗಿದೆ ಎಂದು ತಿಳಿಸಿದರು.


ದೇವರಿಗೆ ನಾವು ಪ್ರಾರ್ಥನೆ ಮಾಡುತ್ತೇವೆ ನಮಗೆ ಒಳ್ಳೆದು ಮಾಡಿ ಅಂತ ದೇವರಿಗೆ ಮೊರೆ ಇಡುತ್ತೇವೆ. 7 ನೇ ತಾರೀಕೂ ಮತ್ತೊಂದು ಪುಷ್ಪ ಅರ್ಚನೆ ಮಾಡಿ ದೇವರಿಗೆ ಬೇಡಿ, ಮತ್ತೊಮ್ಮೆ ಮೋದಿ ಪ್ರಧಾನಿಯಾಗಲಿ ಅವರ ಆಯಸ್ಸು ವೃದ್ದಿಸಲಿ ಎಂದು ಪ್ರಾರ್ಥನೆ ಮಾಡಿ, ಕಾಂಗ್ರೆಸ್ ಪಕ್ಷದವರು ಅಧಿಕಾರ ಹಣದ ಬಲದಿಂದ ಗೆಲ್ಲಲು ಹೊರಟಿದ್ದಾರೆ. ಅಪ್ಪಿ ತಪ್ಪಿ ಇಲ್ಲಿ ಕಾಂಗ್ರೇಸ್ ಗೆದ್ದರೂ ಸಹ ದೇಶಾದ್ಯಂತ ಕಾಂಗ್ರೇಸ್ ಗೆಲ್ಲೋದು ಕೇವಲ 40 ಜನ ಎಂಪಿಗಳು, ಇಲ್ಲಿ ಗೆದ್ದರೂ ಸಹ ವಿರೋಧ ಪಕ್ಷದ ಸ್ಥಾನದಲ್ಲಿ ಕೂರಬೇಕಾಗುತ್ತದೆ. ಬಿಜೆಪಿ ಇಲ್ಲಿ ಗೆದ್ದರೆ ದೇಶಾದ್ಯಂತೆ 400 ಎಂಪಿಗಳು ಗೆಲ್ಲುತ್ತಾರೆ. ಶೆಟ್ಟರ್ ಅವರನ್ನು ಗೆಲ್ಲಿಸುವುದರ ಮೂಲಕ ಮೋದಿ ಕೈ ಬಲಪಡಿಸಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದರು.


ಈ ವೇಳೆ ಸಂಸದೆ ಮಂಗಳ ಅಂಗಡಿ, ಮಾಜಿ ಶಾಸಕರಾದ ಅನಿಲ ಬೆನಕೆ, ಸಂಜಯ ಪಾಟೀಲ್,  ಬಿಜೆಪಿ ಜಿಲ್ಲಾದ್ಯಕ್ಷ ಶುಭಾಸ ಪಾಟೀಲ್, ಧನಂಜಯ್ ಜಾಧವ್, ಮುರಗೇಂದ್ರಗೌಡಾ ಪಾಟೀಲ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ