LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Bellary

ಶಾಸಕ ನಾರಾ ಭರತ್ ರೆಡ್ಡಿಯವರ ಜನ್ಮ ದಿನ; 3600 ಸಸಿಗಳನ್ನು ನೆಡುವ ಅಭಿಯಾನಕ್ಕೆ ಚಾಲನೆ 

ನಗರದ 15 ಕಡೆ ಏಕ ಕಾಲಕ್ಕೆ ಸಸಿ ನೆಟ್ಟು ಜನ್ಮ ದಿನ ಆಚರಣೆ 

ಬಳ್ಳಾರಿ, ಅ.25: ಬಳ್ಳಾರಿ ನಗರ ಕ್ಷೇತ್ರದ ಶಾಸಕ ನಾರಾ ಭರತ್ ರೆಡ್ಡಿಯವರ ಜನ್ಮ ದಿನದ ಅಂಗವಾಗಿ ಅವರ ಅಭಿಮಾನಿಗಳು ರವಿವಾರ ನಗರದ 15 ಕಡೆ ಏಕ ಕಾಲಕ್ಕೆ ಸಸಿ ನೆಟ್ಟರು. ಈ ಮೂಲಕ 3600 ಸಸಿಗಳನ್ನು ನೆಡುವ (ಟೀಮ್ ಎನ್'ಬಿಆರ್) ನಾರಾ ಭರತ್ ರೆಡ್ಡಿ ಅಭಿಮಾನಿ ಬಳಗದ ಅಭಿಯಾನಕ್ಕೆ ಚಾಲನೆ ನೀಡಲಾಯಿತು.  ರವಿವಾರ ಒಂದೇ ದಿನದಲ್ಲಿ ನಗರದ 15 ಕಡೆ 600ಕ್ಕೂ ಅಧಿಕ ವಿವಿಧ ಬಗೆಯ ಸಸಿಗಳನ್ನು ನೆಡಲಾಯಿತು.
ನಗರದ 18ನೇ ವಾರ್ಡ್ ವ್ಯಾಪ್ತಿಯ ಬಿಸಿಲಹಳ್ಳಿ ಗ್ರಾಮದ ರಾಜ ಕಾಲುವೆ ಬಳಿ ಕಾಂಗ್ರೆಸ್ ಮುಖಂಡರಾದ ಕೆ.ಮಂಜುನಾಥ್ ಅವರ ನೇತೃತ್ವದಲ್ಲಿ ಸಸಿ ನೆಡಲಾಯಿತು
ಈ ಸಂದರ್ಭ ಭರತ್ ಕುಮಾರ್, ಧನಂಜಯ, ಪ್ರಶಾಂತ್, ಮಂಜುನಾಥ್, ರುದ್ರಿ, ರಮೇಶ್ ಇಡ್ಲಿ, ಗಜೇಂದ್ರ ಮತ್ತಿತರು ಭಾಗಿಯಾದರು.
ವಾರ್ಡ್ ಸಂಖ್ಯೆ 23ರ ಭಗತ್ ಸಿಂಗ್ ನಗರ, ಬೀಚಿ ನಗರ ಮತ್ತು ಶ್ರೀನಗರದಲ್ಲಿ ಕಾಂಗ್ರೆಸ್ ಮುಖಂಡ ಸೋಮಶೇಖರ್.ಎಂ ಅವರ ನೇತೃತ್ವದಲ್ಲಿ ಗೌತಮ್. ಎಸ್, ಸಂಗನಕಲ್ ಯುಧಿಷ್ಠಿರ, ಆಟೋ ರಾಜ, ಈರಣ್ಣ, ವಿಜಯ್ ಕುಮಾರ್, ನಾಗಪ್ಪ ಯಾದವ್, ಮಲ್ಲಯ್ಯ, ಭಗತ್‌ಸಿಂಗ್ ನಗರ ಹುಲುಗಣ್ಣ, ರಾಮಾಂಜಿನಿ, ನರಸಿಂಹ, ಕೃಷ್ಣ, ರಾಮು, ವೀರೇಶ್ ಎಂ, ನಿಖಿಲೇಶ್ ಕುಮಾರ್, ಶಂಕರ್, ಸಂತೋಷ್ ಮತ್ತಿತರರು ಸಸಿಗಳನ್ನು ನೆಟ್ಟು ಶಾಸಕ ನಾರಾ ಭರತ್ ರೆಡ್ಡಿಯವರ ಜನ್ಮ ದಿನವನ್ನು ಆಚರಿಸಿದರು.
ವಾರ್ಡ್ ಸಂಖ್ಯೆ ಸಂಖ್ಯೆ 39ರ ಬುಡಾ ಪಾರ್ಕಿನಲ್ಲಿ ಕಾಂಗ್ರೆಸ್ ಮುಖಂಡ ಪಿ.ಜಗನ್ ಅವರ ನೇತೃತ್ವದಲ್ಲಿ ಪ್ರದೀಪ್ (ಬಾಬಿ), ನರಹರಿ, ಎಂ.ಎಸ್. ಸಿದ್ಧಾರ್ಥ್ಣ, ಎಂ.ಎಸ್.ಸಾಗರ್, ಕುಡಿತಿನಿ ರಾಮಾಂಜಿನಿ ಮತ್ತಿತರರು ಸಸಿಗಳನ್ನು ನೆಟ್ಟು ಶಾಸಕ ನಾರಾ ಭರತ್ ರೆಡ್ಡಿಯವರ ಜನ್ಮ ದಿನವನ್ನು ಸರಳವಾಗಿ ಆಚರಿಸಲಾಯಿತು.
ವಾರ್ಡ್ ಸಂಖ್ಯೆ 10ರ ಇಲಾಹಿ ಮಸೀದಿ ಬಳಿ ಕಾಂಗ್ರೆಸ್ ಪ್ರಚಾರ ಸಮಿತಿಯ ಮುಖಂಡ ಎಂ.ಡಿ ತೌಸಿಫ್ ನೇತೃತ್ವದಲ್ಲಿ ಶಾಸಕ ನಾರಾ ಭರತ್ ರೆಡ್ಡಿಯವರ ಜನ್ಮ ದಿನದ ಅಂಗವಾಗಿ ಸಸಿಗಳನ್ನು ನೆಡಲಾಯಿತು. ಈ ಸಂದರ್ಭ ಖಯುಮ್ ಡಿ, ತೆಂಕರ್ ಮೊಹಮ್ಮದ್, ನೂರ್ ಪಿ, ನೂರ್.ಡಿ, ಮೊಹಮ್ಮದ್ ನವಾಜ್, ಮೆಹಬೂಬ್ ಬಾಷಾ ಹಾಗೂ ಗೌಸ್ ಮತ್ತಿತರರು ಭಾಗಿಯಾದರು.
ವಾರ್ಡ್ ಸಂಖ್ಯೆ 22ರ ವ್ಯಾಪ್ತಿಯ ಗಾಂಧಿನಗರದ ಕೆಹೆಚ್'ಬಿ ಕಾಲೋನಿಯ ಪಾರ್ಕಿನಲ್ಲಿ ಶಾಸಕ ನಾರಾ ಭರತ್ ರೆಡ್ಡಿಯವರ ಜನ್ಮ ದಿನವನ್ನು ಸಸಿ ನೆಡುವ ಮೂಲಕ ಆಚರಿಸಲಾಯಿತು.
ಈ ಸಂದರ್ಭ ದುರ್ಗಾ ಮೋಹನ್, ಬುಜ್ಜಪ್ಪ, ನಾಗರಾಜ್, ಯರಗುಡಿ ಸೋಮಣ್ಣ, ನರಸಿಂಹ, ದುರ್ಗಪ್ಪ, ಗಾದಿಲಿಂಗ, ಅರ್ಷದ್, ರಂಗಾ ರೆಡ್ಡಿ, ನವೀನ್ ಪಾಟೀಲ್, ದಾವೂದ್ ಬಾಷಾ, ಪ್ರಕಾಶ್ ನಾಯಕ್, ರಾಮು, ನಿತೇಶ್ ಒಬೆರಾಯ್ ಮತ್ತಿತರರು ಭಾಗವಹಿಸಿ ಶಾಸಕ ನಾರಾ ಭರತ್ ರೆಡ್ಡಿಯವರಿಗೆ ಶುಭ ಹಾರೈಸಿದರು.
ವಾರ್ಡ್ ಸಂಖ್ಯೆ 6ರ ವ್ಯಾಪ್ತಿಯ ಬಂಡಿಮೋಟ್ ಹಾಗೂ ಬಳ್ಳಾರಪ್ಪ ಕಾಲೋನಿಯ ಪ್ರದೇಶದಲ್ಲಿ ಕಾಂಗ್ರೆಸ್ ಮುಖಂಡ ರಘುರಾಮ್ ಅವರ ನೇತೃತ್ವದಲ್ಲಿ ಸಸಿ ನೆಡುವ ಮೂಲಕ ಶಾಸಕ ನಾರಾ ಭರತ್ ರೆಡ್ಡಿಯವರ ಜನ್ಮ ದಿನವನ್ನು ಸರಳವಾಗಿ ಆಚರಿಸಲಾಯಿತು.
ಈ ಸಂದರ್ಭ ಹೊಂಡ್ರಪ್ಪ, ಇಬ್ರಾಹಿಂ, ಮೋಹನ್, ಗೋವಿಂದ, ಸದ್ದಾಂ, ರಾಜು, ಉಮಾಪತಿ, ದಾವೂದ್, ನಬಿ, ಜಟ್ಟಿರಾಮು, ವೆಂಕಟೇಶ್, ರೋಷನ್, ವಿಜಯ್, ರಾಮು, ದಯಾ, ಖಲಂದರ್, ಭರತ್ ಮತ್ತು ರಿಜ್ವಾನ್ ಮತ್ತಿತರರು ಹಾಜರಿದ್ದರು.
ವಾರ್ಡ್ ಸಂಖ್ಯೆ 17 ರ ಗೋನಾಳ್ ಹಾಗೂ ಹನುಮಾನ ನಗರದಲ್ಲಿ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿಯವರ ಜನ್ಮ ದಿನವನ್ನು ಕಾಂಗ್ರೆಸ್ ಮುಖಂಡ ಹೊನ್ನಪ್ಪ ಅವರ ನೇತೃತ್ವದಲ್ಲಿ ಆಚರಿಸಲಾಯಿತು.
ಸಸಿ ನೆಡುವ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭ ಕಾಂಗ್ರೆಸ್ ಪ್ರಚಾರ ಸಮಿತಿಯ ಸತೀಶ್ ಹೆಚ್, ಹಗರಿ ಗೋವಿಂದ, ಕವಿತಾ ಚಂದ್ರು, ಗೋನಾಳ್ ಪರಶುರಾಮ್, ಪರಮೇಶ್, ಮೆಹಬೂಬಬಾಷಾ, ಸಚಿನ್ ಮತ್ತಿತರರು ಭಾಗಿಯಾದರು.
ವಾರ್ಡ್ ಸಂಖ್ಯೆ 7ರಲ್ಲಿ ಕಾಂಗ್ರೆಸ್ ಮುಖಂಡ ಬುಜ್ಜಿ ನೇತೃತ್ವದಲ್ಲಿ ಶಾಸಕ ನಾರಾ ಭರತ್ ರೆಡ್ಡಿಯವರ ಜನ್ಮ ದಿನವನ್ನು ಸಸಿ ನೆಡುವ ಮೂಲಕ ಆಚರಿಸಲಾಯಿತು. ಈ ಸಂದರ್ಭ ವಾಸು.ಡಿ, ಚಂದ್ರು, ಎರಿಸ್ವಾಮಿ, ಶಶಿಕುಮಾರ್, ಮಂಜು, ಎನ್.ಎರಿಸ್ವಾಮಿ,  ಪವನ, ಮಲ್ಲಿಕಾರ್ಜುನ್, ಪ್ರದೀಪ್ ಮತ್ತಿರರು ಭಾಗಿಯಾದರು.
ವಾರ್ಡ್ ಸಂಖ್ಯೆ 9ರ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ಸಸಿ ನೆಡುವ ಮೂಲಕ ಬಳ್ಳಾರಿ ನಗರ ಕ್ಷೇತ್ರದ ಶಾಸಕ ನಾರಾ ಭರತ್ ರೆಡ್ಡಿಯವರ ಜನ್ಮ ದಿನ ಆಚರಿಸಲಾಯಿತು. ಈ ಸಂದರ್ಭ ಪಾಲಿಕೆಯ ಸದಸ್ಯ ಜಬ್ಬಾರಸಾಬ, ಬುಡಾ ನಾಮನಿರ್ದೇಶಿತ ಸದಸ್ಯ ಥಿಯೇಟರ್ ಶಿವು ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು
ಈ ವೇಳೆ ಕಪ್ಪೆ ಶಿವು, ತಬರೇಜ್, ಅಬ್ದುಲ್ ಬಾರಿ, ಇಮ್ರಾನ್, ಶಬ್ಬೀರ್, ಶಾಷಾ ವಲಿ, ದಾದಾಪೀರ್, ಟೋಪಿ ಶಬ್ಬೀರ್, ಹಮೀದ್, ರೋಷನ್ ಮತ್ತಿತರರು ಹಾಜರಿದ್ದರು.
ವಾರ್ಡ್ ಸಂಖ್ಯೆ 37ರಲ್ಲಿ ಕಾಂಗ್ರೆಸ್ ಮುಖಂಡರಾದ ಮೊಹಮ್ಮದ್ ಭಾಯ್, ಪರಶುರಾಮುಡು, ಹೊಂಡ್ರಪ್ಪ, ಲಾಲಸ್ವಾಮಿ, ಕೃಷ್ಣಪ್ಪ, ರಮಣ, ಸುಬಾನ್, ಜಮೀಲಸಾಬ, ಭಾಷಾಸಾಬ, ಶಾಮ್, ರಹಮತ್, ತೌಫಿಕ್, ರಮೇಶ್, ವೆಂಕಟೇಶ, ಗೋವಿಂದ, ಭಾಗ್ಯಮ್ಮ, ಕಸ್ತೂರಮ್ಮ ಮತ್ತಿತರರ ನೇತೃತ್ವದಲ್ಲಿ ಸಸಿ ನೆಡುವ ಮೂಲಕ ಶಾಸಕ ನಾರಾ ಭರತ್ ರೆಡ್ಡಿಯವರ ಜನ್ಮ ದಿನ ಆಚರಿಸಲಾಯಿತು.
ವಾರ್ಡ್ ಸಂಖ್ಯೆ 35ರಲ್ಲಿ ಕಾಂಗ್ರೆಸ್ ಮುಖಂಡರಾದ ಹೆಚ್.ಸಿದ್ಧೇಶ್ ನೇತೃತ್ವದಲ್ಲಿ ಸಸಿ ನೆಡುವ ಮೂಲಕ ಹಾಗೂ ಕೇಕ್ ಕತ್ತರಿಸುವ ಮೂಲಕ ಶಾಸಕ ನಾರಾ ಭರತ್ ರೆಡ್ಡಿಯವರ ಜನ್ಮ ದಿನವನ್ನು ಆಚರಿಸಲಾಯಿತು. 
ಈ ಸಂದರ್ಭ ಮುಖಂಡರಾದ ವೆಂಕಟೇಶ ಮೂರ್ತಿ, ಶೇಖಣ್ಣ, ಓಬಳೇಶ್, ವಕೀಲ ಲಿಂಗಪ್ಪ, ಕೆ.ಗಾದಲಿಂಗಪ್ಪ, ಜಟ್ಟಿಂಗಪ್ಪ, ಮೇಘನಾಥ, ತಿಪ್ಪೇಸ್ವಾಮಿ, ಮಲ್ಲಿಕಾರ್ಜುನ, ಕುಮಾರ್, ರಮೇಶ್ ಗೋನಾಳ, ನಾಗಭೂಷಣ, ವೀರೇಶ್, ರಾಮಾಂಜನೇಯ, ಶೆಟ್ಟಿ, ಮಧು ಮತ್ತಿತರರು ಭಾಗವಹಿಸಿದರು.
ವಾರ್ಡ್ ಸಂಖ್ಯೆ 15ರಲ್ಲಿ ವಡ್ಡೆ ಶಂಕರ್, ಪ್ರವೀಣ್, ಶರತ್, ಸಾಯಿ, ಸಂದೀಪ್, ರಾಮರಾಜ್ ಮತ್ತಿತರರ ನೇತೃತ್ವದಲ್ಲಿ ಸಸಿ ನೆಡುವ ಮೂಲಕ ಶಾಸಕ ನಾರಾ ಭರತ್ ರೆಡ್ಡಿಯವರ ಜನ್ಮ ದಿನ ಆಚರಿಸಲಾಯಿತು. ನಗರದ 14ನೇ ವಾರ್ಡಿನಲ್ಲಿ ಕಾಂಗ್ರೆಸ್ ಮುಖಂಡ ಬಿಆರೆಲ್ ಶ್ರೀನಿವಾಸ್, ವಾರ್ಡ್ ಸಂಖ್ಯೆ 20ರ ಹುಸೇನ್ ನಗರದಲ್ಲಿ ರಘು ಅವರು ಸಾಂಕೇತಿಕವಾಗಿ ಸಸಿ ನೆಡುವುದರ ಮೂಲಕ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕೋಲೂರು ಶೈಕ್ಷಣಿಕ ಜಿಲ್ಲಾ ಮಟ್ಟದ ಕ್ರೀಡಾಕೂಟ: 400 ಮೀ ಓಟದಲ್ಲಿ ದೃಷ್ಟಿಗೆ ಪ್ರಥಮ ಸ್ಥಾನಪಟ್ಟಣದಲ್ಲಿ ವಿಜೃಂಭಣೆಯಿಂದ ಜರುಗಿದ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿ ಉತ್ಸವದೇಶದ ಭದ್ರತೆಯಲ್ಲಿ ಇಎಮ್‌ಇ ಸೈನಿಕರ ಪಾತ್ರ ಮಹತ್ವದ್ದು:  ಜಿ.ಪರಿಸ್ವಾಮಿ ರೆಡ್ಡಿ ವೇದಿಕೆ ಮೇಲೆ ಕೂರಿಸದಿದ್ದರೆ ಸಭೆ ಬಹಿಷ್ಕಾರದ ಎಚ್ಚರಿಕೆ: ಡಾ ಪ್ರಭಾಕರ್ ಕೋರೆ.‌ನ. 6 ರಂದು ನೇಸರಗಿ ವಿದ್ಯಾಮಂದಿರ ಪ್ರೌಢಶಾಲೆಯ ಅಮೃತ ಮಹೋತ್ಸವ ಚನ್ನಮ್ಮ ಬದುಕು ಇತಿಹಾಸ ಅಲ್ಲ; ನವಪೀಳಿಗೆಗೆ ಸ್ವಾಭಿಮಾನದ ಪಾಠ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ 'ಸೇವಾ ಮನೋಭಾವದೊಂದಿಗೆ ವೈದ್ಯಕೀಯ ವೃತ್ತಿ ಆರಂಭಿಸಿ' ಪ್ರಭುನೀಲಕಂಠ ಸ್ವಾಮೀಜಿಅಯೋಡಿನ್‌ಯುಕ್ತ ಉಪ್ಪಿನ ಬಳಕೆ ಆರೋಗ್ಯಕರ ಜೀವನಕ್ಕೆ ಸಹಕಾರಿ: ಡಾ. ರಾಮಕೃಷ್ಣ೧೦ನೇ ಸಾಂಸ್ಕೃತಿಕ ಜನೋತ್ಸವಕ್ಕೆ ಯಶಸ್ವೀ ಚಾಲನೆ, ನೋಡುಗರÀ ಮನಸೂರೆಗೊಂಡ ವಿವಿಧ ಕಲಾಪ್ರಕಾರಗಳುಎಸ್‌ಸಿ-ಎಸ್‌ಟಿ ಮೀಸಲಾತಿ ಹೆಚ್ಚಳವನ್ನು ಸಂವಿಧಾನದ 9ನೇ ಶೆಡ್ಯೂಲ್‌ಗೆ ಸೇರಿಸಿ:  ವಿ.ಎಸ್. ಶಿವಶಂಕರ್ ಆಗ್ರಹ