ಬಳ್ಳಾರಿ, ಮೇ.02. ಗಾಂಧಿನಗರ ಪೊಲೀಸ್ ಠಾಣೆಯ ಪೊಲೀಸರು ದ್ವಿಚಕ್ರ ವಾಹನ ಕಳ್ಳತನಕ್ಕೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಿ, 13 ಬೈಕ್ ವಶಪಡಿಸಿಕೊಂಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೈಕ್ ಕದಿಯುತ್ತಿದ್ದ ಆಂದ್ರಪ್ರದೇಶದ ಹಾಲರ್ವಿ ಬಳಿಯ ಮಾಚನೂರಿನ ಆರೋಪಿ ವಲಸೆ ರಾಜನನ್ನು ಬಂಧಿಸಿಸಲಾಗಿದೆ.
ಆರೋಪಿಯು ಗಾಂಧಿನಗರ, ಬ್ರೂಸ್ ಪೇಟೆ ಪೊಲೀಸ್ ಠಾಣೆ ಸೇರಿದಂತೆ ಇತರೆ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಮಾಡಿದ್ದ ಎಂದು ತಿಳಿದು ಬಂದಿದೆ.