ಇಂಡಿ : ತಾಲೂಕಿನ ನಿಂಬಾಳ ತಾಂಡಾದಲ್ಲಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಭೂಮಿಪೂಜೆ ಸಮಾರಂಭಕ್ಕೆ ಆಗಮಿಸಿದ ಶಾಸಕ ಯಶವಂತರಾಯಗೌಡ ಪಾಟೀಲ ಅವರನ್ನು ತಾಂಡಾ ನಿವಾಸಿಗಳು ನಾಲ್ಕು ಎತ್ತಿನ ಬಂಡಿಯಲ್ಲಿ ಮೆರವಣಿಗೆ ಮಾಡಿದರು.
ತಾಂಡಾದಲ್ಲಿ ಸಿಸಿ ರಸ್ತೆ ಸೇರಿದಂತೆ ವಿವಿಧ ಅಭಿ ವೃದ್ಧಿ ಕೆಲಸಗಳು ಶಾಸಕ ಯಶವಂತರಾಯಗೌಡ ಪಾಟೀಲ ಅವರು ಮಾಡಿದಕ್ಕಾಗಿ ತಾಂಡಾ ನಿವಾಸಿಗಳು ಜೋಡೆತ್ತಿನ ಬಂಡಿಯಲ್ಲಿ ಡೊಳ್ಳು ವಾದ್ಯ ಮೂಲಕ ಮೆರವಣಿಗೆ ಮಾಡಿ ವೇದಿಕೆಗೆ ಬರಮಾಡಿಕೊಂಡರು.
ನಂತರ ರಸ್ತೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಯಶವಂತರಾಯಗೌಡ ಪಾಟೀಲ ಭೂಮಿಪೂಜೆ ನೆರವೇರಿಸಿದರು.ಶಿಕ್ಷಣದಿಂದ ಪ್ರಗತಿ ಹೊಂದಲು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು.ಮದ್ಯ ಬೇಕು.ಮದ್ಯ ವ್ಯಸನದಿಂದ ದೂರ ಇರಬೇಕು. ಕಾರ್ಮಿಕ ಮೆಕ್ಕಳಿಗಾಗಿಯೇ ಇಂಡಿಗೆ ವಸತಿ ಶಾಲೆ ತಂದಿರುವೆ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಕೆಲಸ ಪಾಲಕರದ್ದಾಗಿದೆ ಎಂದು ಹೇಳಿದರು.ಶ್ರೀ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆ ೩ ಸಾವಿರ ಕೋಟಿ ಅನುಧಾನದಲ್ಲಿ ಕಾಮಗಾರಿ ನಡೆದಿದ್ದು ರಾಜ್ಯದಲ್ಲಿ ಇಂಡಿ ಎಂಬುದು ಸಂತಸದ ಸಂಗತಿ ಸರ್ಕಾರಿ ಸಂಸ್ಥೆಗಳು ಬಡವರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.ಸ್ವತಂತ್ರ್ಯ ಭಾರತದ ನಂತರ ಇಂಡಿ ಕ್ಷೇತ್ರದ ಅಭಿವೃದ್ಧಿಗೆ ೮ ಸಾವಿರ ಕೋಟಿ ಅನುದಾನ ತಾರ ತಂದಿರುವುದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂಡಿ ಕ್ಷೇತ್ರದ ಅಭಿವೃದ್ಧಿಗೆ ೨೦೧೩ ಹಾಗೂ ಪ್ರಸಕ್ತ ಅಧಿಕಾರವಧಿಯಲ್ಲಿ ಸೇರಿ ೮ ಸಾವಿರ ಕೋಟಿ ಅನುಧಾನ ನೀಡಿದ್ದು ಇತಿಹಾಸ ಎಂದು ಹೇಳಿದರು.
ತಹಶೀಲ್ದಾರ ಬಿ.ಎಸ್.ಕಡಕಭಾವಿ, ತಾಪಂ ಇಒ ಮಹಾದೇವಪ್ಪ ಏವೂರ, ಎಇಇ ದಯಾನಂದ ಮಠ, ಶಿವಾಜಿ ಬನಸೋಡೆ ರಾಜೇಶ ಹೂಗಾರ, ಭೀಮಣ್ಣ ಕವಲಗಿ ಪ್ರಶಾಂತ ಕಾಳೆ, ಸದಾಶಿವ ಪ್ಯಾಟಿ,ಜಾವೀದ ಮೋಮಿನ, ಮುಸ್ತಾಕ ಇಂಡಿಕರ,ಧರ್ಮು ವಾಲಿಕಾರ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಸುನೀಲ ರಾಠೋಡ.
