ರಾಮದುರ್ಗ,ಜು,೦೬: ರೈತರ ಹೊಲಗಳಿಗೆ ಹೋಗಲು ಹಾಗೂ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಸುಧಾರಣೆಗೊಂಡರೆ ಮಾತ್ರ ವಾಹನ ಹಾಗೂ ಜನ ಸಂಚಾರಕ್ಕೆ ಅನುಕೂಲವಾಗಲಿದೆ. ಆದ್ದರಿಂದ ರಸ್ತೆಗಳ ಸುಧಾರಣೆಗೆ ಆದ್ಯತೆ ನೀಡಿ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ಹೇಳಿದರು.
ತಾಲೂಕಿನ ಚುಂಚನೂರ ಗ್ರಾಮದ ಹತ್ತಿರ ಜಿ.ಪಂ ಯ ರೂ. ೪೦ ಲಕ್ಷ ಅನುದಾನದಲ್ಲಿ ತೆಗ್ಗಿಹಾಳ ಮಡ್ಡಿ ರಸ್ತೆ ನಿರ್ಮಾಣ ಹಾಗೂ ಲೋಕೊಪಯೋಗಿ ಇಲಾಖೆಯ ರೂ.೧.೨೫ ಕೋಟಿ ಅನುದಾನದಲ್ಲಿ ಎಂ ಚಂದರಗಿಯಿಂದ ಗುದಗೊಪ್ಪ ವರೆಗೆ ರಸ್ತೆ ಸುಧಾರಣೆ ಕಾಮಗಾರಿ ಸೇರಿದಂತೆ ಒಟ್ಟು ರೂ.೧. ೬೫ ಕೋಟಿ ಅನುದಾನದ ಕಾಮಗಾರಿಗೆ ಭೂಮಿ ಪೂಜೆ ನೇರವೆರಿಸಿ ಅವರು ಮಾತನಾಡಿದರು.
ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಹೊಲಗಳಿಗೆ ಹೋಗುವ ರಸ್ತೆಗಳ ಸುಧಾರಣೆಗೆ ಆದ್ಯತೆ ನೀಡಿ ಕಾಮಗಾರಿ ಕೈಗೊಳ್ಳಲಾಗಿದೆ. ಇನ್ನೂ ಅನೇಕ ಗ್ರಾಮಗಳಲ್ಲಿ ಜನರ ಬೇಡಿಕೆಯಿದ್ದು, ಹಂತ ಹಂತವಾಗಿ ರಸ್ತೆಗಳ ನಿರ್ಮಾಣಕ್ಕೆ ಮುಂದಾಗಲಾಗುವದು ಎಂದು ತಿಳಿಸಿದರು.
ಕಾಮಗಾರಿ ಸಂದರ್ಭದಲ್ಲಿ ಹೊಲಗಳ ಪಕ್ಕದ ರೈತರು ಸಹಕಾರ ನೀಡಬೇಕು. ನಿಮ್ಮ ಕೃಷಿ ಚಟುವಟಿಕೆಗಾಗಿ ರಸ್ತೆಗಳ ನಿರ್ಮಾಣಕ್ಕೆ ಮುಂದಾಗುತ್ತಿದ್ದು, ಗುಣಮಟ್ಟದ ಕಾಮಗಾರಿ ಮಾಡಿಸಿಕೊಳ್ಳುವಲ್ಲಿ ಮುಂದಾಗಬೇಕು. ಒಂದು ಕಳಪೆ ಕಾಮಗಾರಿ ನಡೆಯುತ್ತಿರುವ ಬಗ್ಗೆ ಕಂಡು ಬಂದರೆ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೆ ಅಗತ್ಯ ಕ್ರಮ ವಹಿಸಲಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಬಿ. ರಂಗನಗೌಡ್ರ, ರಾಯಪ್ಪ ಕತ್ತಿ, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿದ್ಲಿಂಗಪ್ಪ ಶಿಂಗಾರಗೊಪ್ಪ. ಲೋಕೊಪಯೋಗಿ ಇಲಾಖೆಯ ಎಇಇ ರವಿಕುಮಾರ ಎನ್ ಸೇರಿದಂತೆ ಇತರ ಮುಖಂಡರು, ಹಾಗೂ ರೈತರು, ಸಾರ್ವಜನಿಕರು ಉಪಸ್ಥಿತರಿದ್ದರು.