ಹುನಗುಂದ; ತಮೀಳುನಾಡನ ಖ್ಯಾತ ನಟ ಎಂ.ಎಂ. ನಂದಿಹಾಳ ಅವರ ಪುತ್ರ ಶಿವಕುಮಾರ ನಂದಿಹಾಳ ಅವರು ೨೦೦೮ರಲ್ಲಿ ಪ್ರಾರಂಭಿಸಿದ ಶಬರಿಮಲೈ ಅಯ್ಯಪ್ಪ ಸೇವಾ ಸಮಿತಿಯು ೧೭ ವರ್ಷಗಳಿಂದ ಸಾಕಷ್ಟು ಧರ್ಮ ಕಾರ್‍ಯಗಳನ್ನು ನಡೆಸುತ್ತಾ ೧೮ರ ಹೊಸ್ತಲಲ್ಲಿ ಇದೆ ಮೇ ೩೧ರಂದು ಅಂತರರಾಷ್ಟ್ರೀಯ ಐತಿಹಾಸಿಕ ಸ್ಥಳ ಕೂಡಲಸಂಗಮದಲ್ಲಿ ರಾಜ್ಯ ಮಟ್ಟದ ಅಯ್ಯಪ್ಪ ಮಹಾಸಂಗಮ ಮತ್ತು ಅಧಿಕ ಜೇಷ್ಠ ಪುರುಷೋತ್ಮ ಮಾಸದ ನಿಮಿತ್ಯ ತ್ರಿವೇಣಿ ಸಂಗಮದ ಆರತಿ ಭೃಹತ್ ಕಾರ್‍ಯಕ್ರಮ ನಡೆಯಲಿದೆ ಎಂದು ಸಮೀತಿಯ ರಾಜ್ಯ ಸಂಘಟನಾ ಕಾರ್‍ಯದರ್ಶಿ ದತ್ತಾತ್ರೆಯ ಶಿಂತ್ರೆ ಹೇಳಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನದಿಪಾತ್ರಗಳು ಭಕ್ತರ ಮೌಢ್ಯದಿಂದ ಕಲುಷಿತಗೊಂಡು ಅವುಗಳ ಪವಿತ್ರತೆ ಹಾಳಾಗುತ್ತಿದೆ. ಅವುಗಳನ್ನು ಸ್ವಚ್ಚವಾಗಿಡುವದು, ಅದರ ಬಗ್ಗೆ ಅರಿವು ಮೂಡಡಿಸುವು ಹಾಗೂ ಪವಿತ್ರತೆಯನ್ನು ಹೆಚ್ಚಿಸುವದು ಈ ಸಮೀತಿಯ ಉದ್ದೇಶವಾಗಿದೆ. ಈ ಕುರಿತು ಶಬರಿ ಮಲೈನ ಪಂಪಾ ನದಿಯಲ್ಲಿ ಭಕ್ತರು ಕಳಚಿದ ಅರಿವೆ, ಪ್ಲಾಷ್ಟಿಕ್ ಸೇರಿದಂತೆ ಸಾಕಷ್ಟು ತ್ಯಾಜ್ಯ ತುಂಬಿದ್ದನ್ನು ಸಮೀತಿ ಸಾಕಷ್ಟು ಬಾರಿ ಸ್ವಚ್ಚಗೊಳಿಸಿದೆ. ಅದೆ ರೀತಿ ೧೮ರ ಹೊಸ್ತಿಲಲ್ಲಿರುವ ಸಮೀತಿಯು ಸಾಂಸ್ಕೃತಿಕ ನಾಯಕ ಅಣ್ಣ ಬಸವಣ್ಣನವರ ಐತಿಹಸಿಕ ಸ್ಥಳ ಕೂಡಲ ತ್ರಿವೇಣಿಯಾದ ಕೃಷ್ಣಾ, ಮಲಪ್ರಭಾ ಮತ್ತು ಘಟಪ್ರಭಾ ನದಿಗಳನ್ನು ಸ್ವಷ್ಷಗೊಳಿಸುವದು ಸೇರಿದಂತೆ ೧೦೮ ಗುರುಸ್ವಾಮಿ ದಂಪತಿಗಳಿಂದ ಲಕ್ಷಾರ್ಚನೆ, ೧೦೮ಪೂರ್ಣಕುಂಭ ಮೆರವಣಿಗೆ ಮಹಾಪ್ರಸಾದ ಹಾಗೂ ಅಯ್ಯಪ್ಪ ಧರ್ಮಜಾಗೃತಿ ಸಭೆ ನಡೆಯುವದು ಎಂದರು. ರಾಜ್ಯ ಉಪಾಧ್ಯಕ್ಷ ರಮೇಶ ಮುಧೋಳ ಮಾತನಾಡಿ ಮೇ೩೧ರಂದು ಬೆಳಿಗ್ಗೆ ೪ಕ್ಕೆ ಗಣ ಹೋಮ, ೬-೩೦ಕ್ಕೆ ಅಯ್ಯಪ್ಪ ಲಕ್ಷಾರ್ಚನೆ, ೯-೩೦ಕ್ಕೆ ಪೂರ್ಣಕುಂಭ ಮೆರವಣಿಗೆ, ೧೦-೧೫ಕ್ಕೆ ಸಾಸ್ ಧ್ವಜಾರೋಹಣದ ನಂತರ ಅಯ್ಯಪ್ಪ ಧರ್ಮ ಜಾಗೃತಿ ಸಭೆ ನಡೆಯುವದೆಂದು ತಿಳಿಸಿದರು.
ಗುರುಸ್ವಾಮಿ ರಾಚಪ್ಪ ಕಾಜಗಾರ ಕಾರ್‍ಯಕ್ರಮ ವಿವರಣೆ ನೀಡುತ್ತ ಗವಿಸಿದ್ದೇಶ್ವರ ಸಂಸ್ಥಾನಮಠ ಕೊಪ್ಪಳದ ಮನಿಪ್ರ ಗವಿಸಿದ್ದೇಶ್ವರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯವಹಿಸುವರು. ಶಬರಿಮಲೈ ಸಮೀತಿ ಯ ರಾಷ್ಟ್ರೀಯ ಅಧ್ಯಕ್ಷ ಟಿ.ಬಿ. ಶೇಖರ ಜೀ ನೇತೃತ್ವ ವಹಿಸುವರು. ರಾಷ್ಟ್ರಿಯ ಉಪಾಧ್ಯಕ್ಷ ಆನಂದ ವಾಮನ್ ನಾಯಕಜೀ ಕಾರ್‍ಯಕ್ರಮ ಉದ್ಘಾಟಿಸುವರು. ಸಮೀತಿ ರಾಜ್ಯಾಧ್ಯಕ್ಷ ಡಾ. ಎನ್ ಜಯರಾಮ್ ಜೀ ಕಾರ್‍ಯಕ್ರಮ ಅಧ್ಯಕ್ಷತೆ ವಹಿಸುವರು. ರಾಜು ದೇಶಪಾಂಡೆ ಮತ್ತು ಎಸ್.ಎಸ್. ಕೃಷ್ಣಯ್ಯ ಅಯ್ಯಪ್ಪ ಧರ್ಮವಾಣಿ ನಡೆಸುವರು. ಬಸವರಾಜ ರೇವಡಿ, ಅಖಂಡೇಶ ಪತ್ತಾರ, ಶ್ರೀಕಾಂತ ಪತ್ತಾರ, ಮಲ್ಲಿಕಾರ್ಜುನ ಚೂರಿ ಮತ್ತು ಬಸವರಾಜ ಪತ್ತಾರ ಸೇರಿದಂತೆ ೧೦೮ ದಂಪತಿ ಭಕ್ತಾಧಿಗಳು ಗಣ ಹೋಮದಲ್ಲಿ ಪಾಲ್ಗೊಳ್ಳುವರು ಎಂದು ಕಾಜಗಾರ ತಿಳಿಸಿದರು. ವಿರುಪಾಕ್ಷಪ್ಪ ಸೂಡಿ, ಸಂಜಯ ಜಾಲವಾದಿ ಮತ್ತು ಅಖಂಡೇಶ ಪತ್ತಾರ ಗೋಷ್ಠಿಯಲ್ಲಿದ್ದರು.
