Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಜಿಪಂನ ಅನುದಾನದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರಿಂದ ಭೂಮಿ ಪೂಜೆ

ಜಮಖಂಡಿ;ಜಿಲ್ಲಾಪಂಚಾಯತ್‌ನ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಜಗದೀಶ ಗುಡಗುಂಟಿ ಮಂಗಳವಾರ ಭೂಮಿಪೂಜೆ ನೆರವೇರಿಸಿದರು. ಆಯುಷ್‌ ಇಲಾಖೆಯ ಸರ್ಕಾರಿ ಆಯುರ್ವೆದಿಕ್‌ ಕಾಲೇಜು ಆವರಣದಲ್ಲಿ ಕೊಠಡಿ ನಿರ್ಮಾಣ 20 ಲಕ್ಷರೂ, ಚೌಡಯ್ಯನಗರ /ಪ್ರಾಥಮಿಕ ಶಾಲೆಯ ಆವರಣದಲ್ಲಿ 14.50ಲಕ್ಷ ಅನುದಾನದಲ್ಲಿ ಶಾಲಾ ಕೊಠಡಿ ನಿರ್ಮಾಣ, ಪಿ.ಬಿ ಕಾಲೇಜು ಆವರಣದಲ್ಲಿ ಗ್ರಂಥಾಲಯ ಕೊಠಡಿ 20.70 ಲಕ್ಷ, ಪಿ.ಬಿ ಹೂಸ್ಕೂಲ ಆವರಣದಲ್ಲಿ 17.70 ಲಕ್ಷ ರೂ ಅನುದಾನದಲ್ಲಿ ಕೊಠಡಿ ನಿರ್ಮಾಣ,, ಹಾಗೂ 9 ಲಕ್ಷರೂ ಅನುದಾನದಲ್ಲಿ ಸಾಮಾಜಿಕ ಅರಣ್ಯ ಇಲಾಖೆಯ ಕಚೇರಿಗೆ ತಡೆಗೋಡಿ ನಿರ್ಮಾಣ ಕಾಮಗಾರಿಗಳಿಗೆ ಶಾಸಕರು ಭೂಮಿ ಪೂಜೆ ನೆರವೇರಿಸಿದರು. ಜಿಲ್ಲಾಪಂಚಾಯತ್‌ ದಿಂದ ಒಟ್ಟು 81.90 ಲಕ್ಷರೂ ಗಳ ಅನುದಾನದಲ್ಲಿ ಈ ಎಲ್ಲ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಸಚಿವರು ಹಾಗೂ ಸರ್ಕಾರಕ್ಕೆ ಮನವಿ ಸಲ್ಲಿಸಿ ಅತಿ ಅವಶ್ಯವಿರುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಅನುದಾನ ತರಲಾಗಿದೆ ಎಂದು ಹೇಳಿದರು.

ನಗರದ ಪ್ರಮುಖ ರಸ್ತೆಗಳು ಹಾಗೂ ತಾಲೂಕಿನ ಹೋಬಳಿ ಪ್ರದೇಶಗಳ ರಸ್ತೆಗಳ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ ಮಂಜೂರಾಗಿದ್ದು ಎಲ್ಲ ಕಾಮಗಾರಿಗಳು ಪ್ರಾರಂಭವಾಗಲಿವೆ ಎಂದು ಶಾಸಕ ಜಗದೀಶ ಗುಡಗುಂಟಿ ತಿಳಿಸಿದರು. ಜಿಪಂನ ಎಇಇ ಟಿ.ಜಿ.ತಳವಾರ, ಜೆಇ ಎಚ್‌.ಜಿ.ಪಾತ್ರೋಟ್‌, ಅರಣ್ಯ ಇಲಾಖೆಯ ಎಸಿಎಫ್‌ ಸೆಲ್ವರಾಜ್‌ ನಾಯ್ಕರ, ಆರ್‌ಎಫ್‌ಓ ಎಂ.ಎಂ. ಸಜ್ಜನ ಆರೋಗ್ಯ ಇಲಾಖೆಯ ಡಾ. ರಜಪೂತ, ಹಾಗೂ ಗುತ್ತಿಗೆದಾರರಾದ ಹಣಮಂತ.ಎನ್‌.ಲಿಗಾಡೆ, ಆರ್‌.ಬಿ.ಮಹಾಲಿಂಗಪೂರ, ಮಲ್ಲಪ್ಪ.ಬಿ.ಶಿರೋಳ, ರವಿ.ಬಾಮನೆ, ವೈ.ಎಸ್‌.ಕರಿಎಲ್ಲಪ್ಪಗೋಳ, ಮುಖಂಡರಾದ ಈಶ್ವರ ಆದೆಪ್ಪನವರ, ಅಜಯ ಕಡಪಟ್ಟಿ, ಮಲ್ಲು ದಾನಗೌಡ, ಶ್ರೀಧರ ಕಂಬಿ, ಯಮನೂರ ಮುಲ್ಲಂಗಿ, ರಮೇಶ ಆಳಬಾಳ, ಶಂಕರ ಕಾಳೆ, ನಗರಸಭೆ ಸದಸ್ಯ ಪ್ರಶಾಂತ ಚರಕಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಿಬ್ಬಂದಿಗಳು ಇದ್ದರು.

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ನದಾಫ್-ಪಿಂಜಾರ ಸಂಘ ತಾಲೂಕ ಘಟಕದ ಕಚೇರಿ ಉದ್ಘಾಟನೆ ಟ್ರಕ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ : ಅಕ್ಕ-ತಮ್ಮ ದಾರುಣ ಸಾವುತಾಲೂಕಾ ಅಧಿಕಾರಿಗಳ ಸಾಮಾನ್ಯ ಸಭೆ; ರೈತರಿಗೆ ಬೀಜ, ಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಿ: ಬಸವರಾಜ್ ಅಡವಿಮಠ್ ಸೂಚನೆಕೊಪ್ಪಳ ಕಾರ್ಯನಿರತ ಪತ್ರಕರ್ತರ ಸಂಘದ ಸಭೆನೂತನ ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ ಅವರಿಗೆ ಅಭಿನಂದಿಸಿದ ಲಕ್ಷ್ಮೀ  ಹೆಬ್ಬಾಳಕರ.ಸಿದ್ದರಾಮಯ್ಯ ಭೇಟಿ ಮಾಡಿ ಧನ್ಯವಾದ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ ಅವರಿಗೆ ಸತ್ಕರಿಸಿದ ಯುವ ಮುಖಂಡ  ರಾಹುಲ  ಜಾರಕಿಹೊಳಿ.ಸಚಿವ ಸತೀಶ ಜಾರಕಿಹೊಳಿ, ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ ಬೇಟಿ ಪರಸ್ಪರ ಶುಭ ಕೋರಿಕೆಗ್ಲೋಬಲ್ ಕ್ಯಾಪೆಬಿಲಿಟಿ ಸೆಂಟರ್‌ಗಳ ಬೆಳವಣಿಗೆಗೆ ಉತ್ತೇಜನ*ಶರಣು ಕಾರ್ಯಾಲಯ ಆರಂಭಿಸುವ ಮೂಲಕ ಬಡವರ ಕಣ್ಣಿರು ಒರೆಸುವ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ : ಬಳಗಾನೂರು ಶ್ರೀಗಳು,,*