Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಭವಾನಿ ಪ್ರಸಾದ್ ಮತ್ತಿತರರು ಭರತ್ ರೆಡ್ಡಿ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆ




ಬಳ್ಳಾರಿ, ಜೂ.15: ಯಾವುದೇ ಪಕ್ಷವು ಹರಿಯುವ ನದಿಯಿದ್ದಂತೆ, ಹೊಸ ಹೊಸ ಕಾರ್ಯಕರ್ತರ ಸೇರ್ಪಡೆ ಸಹಜ ಪ್ರಕ್ರಿಯೆ ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.


ಶನಿವಾರ ನಗರದ 14ನೇ ವಾರ್ಡಿನ ಯುವ ಮುಖಂಡ ಭವಾನಿ ಪ್ರಸಾದ್ ಮತ್ತು ಸ್ನೇಹಿತರು ಬಿಜೆಪಿ ಪಕ್ಷವನ್ನು ತೊರೆದು ನಗರ ಶಾಸಕ ಭರತ್ ರೆಡ್ಡಿ ಮೇಲಿನ ವಿಶ್ವಾಸದಿಂದ  ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡು  ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಪಕ್ಷಕ್ಕೆ ಹೊಸಬರು ಸೇರ್ಪಡೆಯಾದರೆ ಬಲ ಹೆಚ್ಚುತ್ತದೆ, ಅವರು ಬೇಡ ಇವರು ಬೇಡ ಎಂದರೆ ರಾಜಕೀಯ ಮಾಡಲಾಗದು ಎಂದು ಅಭಿಪ್ರಾಯಪಟ್ಟರು.


ಭವಾನಿ ಪ್ರಸಾದ್ ಮೂಲತಹ ನನ್ನ ಬೆಂಬಲಿಗರು, ಆದರೆ ಮಧ್ಯದಲ್ಲಿ ಬೇರೆ ದಾರಿ ಹಿಡಿದಿದ್ದರು, ಈಗ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ, ಪಕ್ಷ ಹಾಗೂ ನನ್ನ ಮೇಲೆ ಅವರು ಮತ್ತವರ ಬೆಂಬಲಿಗರು ಇಟ್ಟಿರುವ ಭರವಸೆ ಹುಸಿ ಮಾಡಲಾರೆ, ಅವರೆಲ್ಲರ ಬೆಂಬಲಕ್ಕೆ ನಾನು ಸದಾ ಇರುವೆ ಎಂದು ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.


ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರ, ಹಿಂದುಳಿದವರ, ದಲಿತರ ಹಾಗೂ ಸರ್ವ ಜನಾಂಗದವರ ಹಿತ ಕಾಪಾಡುವ ಪಕ್ಷ ಎಂದು ಹೇಳಿದ ಅವರು, ಬಳ್ಳಾರಿಯ ಅಭಿವೃದ್ಧಿಯೇ ನನ್ನ ಕನಸು, ಕಾರ್ಯಕರ್ತರನ್ನೆಲ್ಲ ಜೊತೆಗೂಡಿಸಿಕೊಂಡು ಹೋಗುವುದೇ ನನ್ನ ಧ್ಯೇಯ ಎಂದರು.


ಈ ಸಂದರ್ಭ ಮಹಾನಗರ ಪಾಲಿಕೆಯ ಸದಸ್ಯರಾದ ಮಿಂಚು ಸೀನಾ, ಎಂ.ಪ್ರಭಂಜನಕುಮಾರ್, ಜಬ್ಬಾರ್, ಮಾಜಿ ಮೇಯರ್ ನಾಗಮ್ಮ, ಕಾಂಗ್ರೆಸ್ ಮುಖಂಡರಾದ ಸುಬ್ಬರಾಯುಡು, ಹೊನ್ನಪ್ಪ, ಹಗರಿ ಗೋವಿಂದ, ಮಂಜುಳಾ, ಚಂಪಾ ಚವ್ಹಾಣ್, ರಾಕಿ, ಥಿಯೇಟರ್ ಶಿವು, ರಘು, ಕಪ್ಪೆ ಶಿವು ಹಾಗೂ ಸ್ಥಳೀಯ ಮುಖಂಡರಾದ ಭವಾನಿ ಪ್ರಸಾದ್, ತಿರುಪಾಲ್ ರೆಡ್ಡಿ, ವೆಂಕಟೇಶ ಬಿ.ಆರ್, ಅಂಜಿ, ರಘು, ನಾಗರಾಜು, ಶಂಕರ್, ರಮೇಶ್, ಕೌಶಿಕ್, ಉಪೇಂದ್ರ, ಸಾಯಿನಾಥ್, ಶಕ್ತಿಲ್, 12ನೇ ವಾರ್ಡಿನ ಡೋಣೆಪ್ಪ,ಬಸವರಾಜ, ಅನಿಲ್, ರಂಜಿತ್ ಸೇರಿದಂತೆ ಹಲವರು ಹಾಜರಿದ್ದರು.






Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ